[t4b-ticker]

ದೊಡ್ಡಮನೆ ಕುಂಜಿಬೆಟ್ಟು ನಾಗ ಬ್ರಹ್ಮಸ್ಥಾನ ಕೌಡೂರು- ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಸಂಪನ್ನ

Picture of RB NEWS

RB NEWS

Bureau Report

ಕಾರ್ಕಳ : ಕೌಡೂರು ದೊಡ್ಡಮನೆ, ಕುಂಜಿಬೆಟ್ಟು, ಹಳೆಮನೆ ಕುಟುಂಬಸ್ಥರ 500 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಪರಿವಾರ ಸಹಿತ ನಾಗಬ್ರಹ್ಮಸ್ಥಾನವನ್ನು , ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಸ್ಥಾನ ಸೇವಾ ಪ್ರತಿಷ್ಠಾನ (ರಿ), ಇದರ ಆಶ್ರಯದಲ್ಲಿ ಜೀರ್ಣೋದ್ದಾರಗೊಂಡು ಸಂಪೂರ್ಣ ನವೀಕರಿಸಿದ ಶಿಲಾಮಯ ಪಂಚ ಪರಿವಾರ ನಾಗ ಬ್ರಹ್ಮಸ್ಥಾನದ ಪುನಃ ಪ್ರತಿಷ್ಠೆ , ಬ್ರಹ್ಮಕಲಶ, ಆಶ್ಲೇಷಾ ಬಲಿ, ನಾಗದರ್ಶನ ಹಾಗೂ ಅನ್ನಸಂತರ್ಪಣೆ ಫೆ 21 ರಿಂದ 23ರ ವರಗೆ ನಡೆಯಿತು.

ಕುಲಪುರೋಹಿತ ಕೆ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.

ಫೆ. 20ರ ಸಂಜೆ ಬೈಲೂರು ಶ್ರೀ ಮಾರಿಗುಡಿಯಲ್ಲಿ ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಚಾಲ‌ನೆ ದೊರೆತ್ತಿದ್ದು, ಬ್ರಹ್ಮಸ್ಥಾನದವರೆಗೆ ಸಾಗಿಬಂತು.

ಫೆ 21ರಂದು ಪ್ರತಿಗ್ರಹ, ತೋರಣ ಮುಹೂರ್ತ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಾಸದ ಶುದ್ದಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ,, ಇತ್ಯಾದಿ ಧಾರ್ಮಿಕ ವಿಧಿಗಳು ಜರುಗಿತು.

ಫೆ 22 ರಂದು ಶಾಂತಿ ಪ್ರಾಯಶ್ಚಿತ್ತ ಹೋಮಗಳು, ಶಿಖರ ಪ್ರತಿಷ್ಠೆ , ಕಲಶಾಭಿಷೇಕ, ಪ್ರಸನ್ನ ಪೂಜೆ , ಪ್ರಸಾದ ವಿತರಣೆ, ನಡೆಯಿತು ಮತ್ತು ಸಂಜೆ ಭಜನೆ,ಮಂಡಲ ಪೂಜೆ , ಕಲಶಾಧಿವಾಸ , ಅಷ್ಟಾವಧಾನ, ಪ್ರಸಾದ ವಿತರಣೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮವು ಪ್ರಕಾಶ್ ಕೆ ರಾವ್ ದೊಡ್ಡಮನೆ ರವರ ಅದ್ಯಕ್ಷತೆಯಲ್ಲಿ ಜರಗಿತು.

ಕುಲಪುರೋಹಿತ ಕೆ ನಾರಾಯಣ ಭಟ್ ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಯಾಗಿ ಸಾಯಿನಾಥ ಮಲ್ಲಿಗೆ ಮಾಡು – ಪ್ರಾಂಶುಪಾಲರು ಎಸ್ ಡಿ ಎಂ ಎಂಎಂಕೆ ಮಹಿಳಾ ವಿದ್ಯಾಲಯ, ಮೈಸೂರು ಇವರು ರಾಮಕ್ಷತ್ರಿಯರ ಆಚಾರ ವಿಚಾರಗಳ ಬಗ್ಗೆ, ರಾಮಕ್ಷತ್ರಿಯರ ಪ್ರಾಮಾಣಿಕತೆ ಬಗ್ಗೆ ತಿಳಿಸಿದರು.

ಶ್ರೀಕಾಂತ್ ಕೆ ಡಿವೈಎಸ್ಪಿ ಭಟ್ಕಳ,
ಪ್ರಮೋದ್ ಕುಮಾರ್ ಪಿ, ಪೊಲೀಸ್ ಇನ್ಸ್ ಪೆಕ್ಟರ್ ಕರಾವಳಿ ಕಾವಲು ಪಡೆ ಮಲ್ಪೆ, ಗುರುಪ್ರಸಾದ್ ರಾವ್ ಅಜೆಕಾರು- ಅಧ್ಯಕ್ಷರು ರಾಮಕ್ಷತ್ರಿಯ ಸಂಘ ಕಾರ್ಕಳ ಉಪಸ್ಥಿತರಿದ್ದರು.

ಕ್ಷೇತ್ರದ ಇತಿಹಾಸ, ಸಮಾಜದ ಒಗ್ಗಟ್ಟು ,ಇಂದಿನ ಪೀಳಿಗೆಗೆ ನಮ್ಮ ಧರ್ಮ, ಧಾರ್ಮಿಕ ವಿಚಾರಗಳು , ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಹೆತ್ತವರ ಪಾತ್ರ ಇದರ ಕುರಿತು ವಿವರ ನೀಡಿದರು.

ಬ್ರಹ್ಮಸ್ಥಾನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮಹೇಶ್ ರಾವ್ ದೊಡ್ಡಮನೆ ಪ್ರಸ್ತಾವನೆಗೈದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಂದಕುಮಾರ್ ಕೆ ಎಸ್ ಸ್ವಾಗತಿಸಿದರು. ರಮೇಶ್ ಶೇರ್ವೆಗಾರ್ ನಿರೂಪಿಸಿದರು . ಸುಕೇಶ್ ರಾವ್ ಧನ್ಯವಾದ ನೀಡಿದರು.

ಕುಲಪುರೋಹಿರನ್ನು ಸನ್ಮಾನಿಸಲಾಯಿತು, ಜತೆಗೆ ನವೀಕೃತ ಶಿಲಾಮಯ ಬ್ರಹ್ಮಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಮಹೇಶ್ ರಾವ್ ದಂಪತಿಗಳು ಹಾಗೂ ನಂದ ಕುಮಾರ್ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ಸೌಕೂರು ಮೇಳದವರಿಂದ “ಚಕ್ರ ಚಂಡಿಕಾ” ಎಂಬ ಯಕ್ಷಗಾನ, ಸುಡುಮದ್ದು ಪ್ರದರ್ಶನ ನಡೆಯಿತು,

ಕೃಷ್ಣ ಜೆ ಪಾಲೆಮಾರ್, ಮಾಜಿ ಸಚಿವರು,ಕರ್ನಾಟಕ ಸರಕಾರ ಶ್ರೀ ರವೀಂದ್ರ, ಮಾಜಿ ಅಧ್ಯಕ್ಷರು ರಾಮಕ್ಷತ್ರಿಯ ಸಂಘ ಮಂಗಳೂರು, ಜೆ ಕೃಷ್ಣಾನಂದ, ಶ್ಕಷ್ಣರಾಜ್ ಹೆಗ್ಡೆ, ಮತ್ತು ಹಲವು ಗಣ್ಯರು ವಿಶೇಷ ಅಥಿತಿಗಳಾಗಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top