ದೊಂಡೇರಂಗಡಿ: ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸಂಪನ್ನ

Picture of RB NEWS

RB NEWS

Bureau Report

ಕಾರ್ಕಳ : ಕಡ್ತಲ ಗ್ರಾಮೀಣ ಕಾಂಗ್ರೆಸ್ ಮತ್ತು ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗದ ಆಶ್ರಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಸೌಹಾರ್ದ ಟ್ರೋಫಿಯು ದೊಂಡೇರಂಗಡಿಯಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿಕೊಂಡಿದ್ದ ಉದಯ ಶೆಟ್ಟಿ ಮಾತನಾಡಿ, ಯುವಕರು ತಮ್ಮ ಉದ್ಯೋಗ ಮತ್ತು ವ್ಯವಹಾರದ ಜೊತೆಗೆ ಸಮಾಜಮುಖಿ ಆಲೋಚನೆಗಳೊಂದಿಗೆ ಸಂಘಟಿತರಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ.ಈ ನಿಟ್ಟಿನಲ್ಲಿ ಯುವಕರು ಸದಾ ಕ್ರಿಯಾಶೀಲರಾಗಬೇಕೆಂದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗೋಪಿನಾಥ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ನೀರೆ ಕೃಷ್ಣ ಶೆಟ್ಟಿ, ಮನೋಜ್ ಹೆಗ್ಡೆ ಮೂರ್ಸಾಲು,ಮೋಹನ್ ಶೆಟ್ಟಿ ಎಣ್ಣೆಹೊಳೆ, ಸಿರಿಯಣ್ಣ ಶೆಟ್ಟಿ,ಅಜಿತ್ ಹೆಗ್ಡೆ ಮಾಳ,ಯೋಗೀಶ್ ಮಲ್ಯ,ಶುಭದ ರಾವ್, ದೀಪಕ್ ಕೋಟ್ಯಾನ್, ಜಗದೀಶ್ ಹೆಗ್ಡೆ, ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ ಕಡ್ತಲ,ಅನುಷಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸೌಹಾರ್ದ ಟ್ರೋಫಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್ ಪೂಜಾರಿ ಸ್ವಾಗತಿಸಿದರು. ವಿನಯ್ ಮತ್ತು ಪ್ರದೀಪ್ ಶೆಟ್ಟಿ ನಿರೂಪಿಸಿದರು,ರಾಘವ ದೇವಾಡಿಗ ವಂದಿಸಿದರು. ಕಾರ್ಯಕಾರಿ ಸಮಿತಿಯ ಅಜಿತ್ ದೇವಾಡಿಗ,ಪ್ರಸನ್ನ ದೇವಾಡಿಗ,ರಾಘವ ಕುಕ್ಕುಜೆ ಸಹಕರಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಪತ್ ಪೂಜಾರಿ ಕುಕ್ಕುಜೆ ರವರುವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ. ಸಂತೋಷ್ ಕುಮಾರ್ ಶೆಟ್ಟಿ, ಅಜೆಕಾರು, ಡಾ. ಪ್ರಮೋದ್ ಕುಮಾರ್ ಹೆಗ್ಡೆ, ರಾಘವ ದೇವಾಡಿಗ, ಜಗದೀಶ ಹೆಗ್ಡೆ, ಅಖಿಲೇಶ ಶೆಟ್ಟಿ, ರಾಘವ ಕುಕ್ಕುಜೆ, ಸುಂದರ ಶೆಟ್ಟಿಗಾರ್, ಸತೀಶ್ ಪೂಜಾರಿ, ಹರೀಶ್ ದುಗ್ಗನ್ ಬೆಟ್ಟು, ದಿಕ್ಷಿತ್ ಶೆಟ್ಟಿ, ರೇಖಾ, ಶಶಿಕಲಾ ಭಟ್, ಶಿವರಾಜ್ ಪೂಜಾರಿ,ಪುರಂದರ ನಾಯಕ್, ದೀಪಕ್ ಶೆಟ್ಟಿ,ಸಂದೀಪ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

ಈ ಪಂದ್ಯಾಟದಲ್ಲಿ ಸುಮಾರು 46 ತಂಡಗಳು ಭಾಗವಹಿಸಿದ್ದವು, ಜಲದುರ್ಗ ತೆಳ್ಳಾರ್ ಪ್ರಥಮ ಸ್ಥಾನಿಯಾಗಿ, ಪ್ರೀತಮ್ ಅಭಿಮಾನಿ ಬಳಗ – ಬೈರಂಪಳ್ಳಿ ದ್ವಿತೀಯ ಸ್ಥಾನಿ ಯಾಗಿ, ಪ್ರೀತಮ್ ಅಭಿಮಾನಿ ಬಳಗ – ಮುಟ್ಲುಪಾಡಿ ತೃತೀಯ ಸ್ಥಾನಿಯಾಗಿ, ಆರೋಹಿ ಬ್ರದರ್ಸ್ ಕುಕ್ಕುಜೆ ಚತುರ್ಥ ಸ್ಥಾನಿಯಾಗಿ ಪ್ರಶಸ್ತಿ ಗಳನ್ನು ಬಗಲಿಗೆ ಹಾಕಿಕೊಂಡಿದೆ.

65 ಕೆಜಿ ವಿಭಾಗದ ಮುಕ್ತ ಕಬ್ಬಡ್ಡಿ ಪಂದ್ಯಾಟದಲ್ಲಿ ಕ್ವಾಯ್ಸ್ ಆಟೋ ಲಿಂಕ್ಸ್ ಮಡಂತ್ಯಾರು ಪ್ರಥಮ ಸ್ಥಾನಿಯಾಗಿ, ಕಾಲೇಜ್ ಫ್ರೆಂಡ್ಸ್ ಕುಕ್ಕುಜೆ ದ್ವಿತೀಯ ಸ್ಥಾನಿಯಾಗಿ, ಆರೋಹಿ ಬ್ರದರ್ಸ್ ಕುಕ್ಕುಜೆ ತೃತೀಯಸ್ಥಾನಿಯಾಗಿ, ಯತೀಶ್ ಶೆಟ್ಟಿ ಅಭಿಮಾನಿ ಬಳಗ ಚತುರ್ಥ ಸ್ಥಾನಿಯಾಗಿ ನಗದು ಹಾಗೂ ‘ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top