






ದೊಂಡೇರಂಗಡಿ, ಗರಡಿ ಕಾಲಾವಧಿ ನೇಮೋತ್ಸವ, ಸ್ವಾಗತ ಗೋಪುರ ಉದ್ಘಾಟನೆ
ಕಾರ್ಕಳ: ಇರ್ವತ್ತೂರು ಮಾಗಣೆ ಮುಟ್ಟಿಕಲ್ಲುತಾನ ಗರಡಿ ಕುಕ್ಕುಜೆ, ದೊಂಡೇರಂಗಡಿ ಶ್ರೀ ಕೊಡಮಣಿತ್ತಾಯ, ಧರ್ಮರಸು ಹಾಗೂ ಬ್ರಹ್ಮಬೈದರ್ಕಳ, ಮಾಯಾಂದಾಲ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವ ಜನವರಿ 11 ರಿಂದ 13 ರವರೆಗೆ ನಡೆಯಲಿದೆ.


ಜನವರಿ 11ರ ಶನಿವಾರ ಬೆಳಿಗ್ಗೆ :10.30 ಕ್ಕೆ ಸ್ವಾಗತ ಗೋಪುರದ ಉದ್ಘಾಟನೆಗೊಳ್ಳಲಿದೆ.
ಸಂಜೆ 4ಕ್ಕೆ ಭಂಡಾರ ಇಳಿಯುವುದು, ರಾತ್ರಿ 8 ಕ್ಕೆ ಬೂಳ್ಯ
ಜನವರಿ 12ರಂದು ಆದಿತ್ಯವಾರ ಮಧ್ಯಾಹ್ನ 1:30 ಕ್ಕೆ ಶ್ರೀ ಧರ್ಮರಸು ನೇಮ, ಸಂಜೆ 6.30 ರಿಂದ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ನೇಮ.
ರಾತ್ರಿ 8:30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ
ಜನವರಿ 13 ಸೋಮವಾರ ಅಪರಾಹ್ನ 2.00 ರಿಂದ ಮಾಯಾಂದಾಲೆ ಕೋಲ ಸಾಯಂ. 6.00ರಿಂದ ಇರುಳು ಮರುಳು ದೈವಗಳ ನೇಮ ನಂತರ ವರ್ತೆ ಕಲ್ಕುಡ ಮತ್ತು ತೂಕತ್ತೇರಿ ದೈವಗಳ ಸಿರಿಸಿಂಗಾರದ ನೇಮೋತ್ಸವ
ರಾತ್ರಿ ಗಂಟೆ 8:30 ರಿಂದ. ಸಾರ್ವಜನಿಕ ಅನ್ನಸಂತರ್ಪಣೆ
ಪ್ರಸಕ್ತ ವರ್ಷ ಗರಡಿಯಲ್ಲಿ ಸುಮಾರು 50 ಲಕ್ಷ ರೂಪಾಯಿಯ ವೆಚ್ಚದಲ್ಲಿ ಆವರಣ ಗೋಡೆ,ಪ್ರೇಕ್ಷಕರ ಅಂಗಣ, ನೆಲಕ್ಕೆ ನೂತನ ಇಂಟರ್ಲಾಕ್ ವ್ಯವಸ್ಥೆಯ ಕಾಮಗಾರಿ ನಡೆದಿವೆ.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಶ್ರೀ ಕ್ಷೇತ್ರದ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

























