ದೊಂಡೇರಂಗಡಿಯ 31ನೇ ವರ್ಷದ ಸಾರ್ವಜನಿಕಶ್ರೀ ಗಣೇಶೋತ್ಸವ ವಿಜೃಂಭಣೆಯೊಂದಿಗೆ ಸಂಪನ್ನ

Picture of RB NEWS

RB NEWS

Bureau Report

ಕಾರ್ಕಳ : ದೊಂಡೇರಂಗಡಿಯ 31ನೇ ವರ್ಷದ ಸಾರ್ವಜನಿಕ
ಶ್ರೀ ಗಣೇಶೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿತು.‌

ಕೆ. ರಮಾನಂದ ಹೆಗ್ಡೆ ಸ್ಮಾರಕ ಕಲಾ ರಂಗಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಭಜನಾ ತಂಡ, ಶ್ರೀ ಲಕ್ಷ್ಮಿ ಜನಾರ್ಧನ ಯಕ್ಷಗಾನ ಕಲಾ ಸಂಘ (ರಿ) ದೊಂಡೇರಂಗಡಿವತಿಯಿಂದ “ಮಹಿಷ ಮರ್ದಿನಿ” ಯಕ್ಷಗಾನ ಮತ್ತು ತಾಳಮದ್ದಳೆ “ಕೋಟಿ ಚೆನ್ನಯ”, ಶಾಲಾ ಮಕ್ಕಳಿಂದ ಮತ್ತು ಸಾರ್ವಜನಿಕರಿಂದ ನೃತ್ಯ ವೈಭವ, ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ತುಳು ಜಾನಪದ ಶೈಲಿಯ ಹಾಸ್ಯ ನಾಟಕ “ಡೆನ್ನಾನ “, ಕಲಾಮಯಂ ಉಡುಪಿ ಇವರಿಂದ ವೈವಿಧ್ಯಮಯ “ಜಾನಪದ ಕಲರವ ” ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪುರ ಮೆರವಣಿಗೆಯಲ್ಲಿ ಕಾರ್ಕಳದ ಕಾಳಿಕಾ ಚೆಂಡೆ ಬಳಗ ಮತ್ತು ಪರ್ಕಳದ ಅಂಬಾಭವಾನಿ ಚೆಂಡೆ ಬಳಗ, ಕೊಂಬುವಾದನ, ತಾಸೆ ನಾಗಸ್ವರ ವಾದನ, ನಾಸಿಕ್ ಬ್ಯಾಂಡ್, ಬಣ್ಣದ ಹುಲಿವೇಷ ಮರಕಾಲು ಹುಲಿವೇಷ, ಚಿತ್ರಸಿರಿ ಆರ್ಟ್ಸ್ ಹಿರಿಯಡ್ಕ ರವರಿಂದ ವಿವಿಧ ಟ್ಯಾಬ್ಲೂ, ನೃತ್ಯ ತಂಡದೊಂದಿಗೆ ದೇವರ ವರ್ಣ ರಂಜಿತ ಸಾರ್ವಜನಿಕ ಪುರ ಮೆರವಣಿಗೆಯು ಸಾಗಿ ಭಕ್ತವೃಂದದವರು ತೀರ್ಥಟ್ಟಿ ಹೊಳೆಯಲ್ಲಿ ಗಣೇಶನ ವಿಗ್ರಹದ ಜಲ ಸ್ತಂಭನ ಮಾಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top