ದೊಂಡೇರಂಗಡಿಯ ಕಲ್ಲಜಾಲು ಮೈದಾನದಲ್ಲಿ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

ಕಾರ್ಕಳ : ಕಡ್ತಲ ಗ್ರಾಮೀಣ ಕಾಂಗ್ರೇಸ್ ಹಾಗೂ ಮುನಿಯಾಲು ಉದಯ್ ಶೆಟ್ಟಿ ಅಭಿಮಾನಿ ಬಳಗ ಕಡ್ತಲ, ಕುಕ್ಕುಜೆ, ಎಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರುಷರ ಮುಕ್ತ ಹಾಗೂ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಪ್ರಥಮ ಬಾರಿಗೆ ದೊಂಡೇರಂಗಡಿಯ ಕಲ್ಲಜಾಲು ಮೈದಾನದಲ್ಲಿ ನಡೆಯಲಿದೆ.
ಈ ಪಂದ್ಯಾಟದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಬಡ್ಡಿ ತಂಡಗಳು ಭಾಗವಹಿಸಲಿದ್ದು ಸಂಘಟಕರು ಅತ್ಯುತ್ತಮ ರೀತಿಯಲ್ಲಿ ಈ ಪಂದ್ಯಾಟವನ್ನು ಆಯೋಜಿಸಿದ್ದು ಕಬಡ್ಡಿ ಪ್ರೇಮಿಗಳಿಗೆ ಪಂದ್ಯಾಟವನ್ನು ವೀಕ್ಷಿಸಲು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವೀಕ್ಷಣಾ ಗ್ಯಾಲರಿ ವ್ಯವಸ್ಥೆಯನ್ನು ಮಾಡಲಾಗಿದೆ.
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹಾಗೂ ಉಡುಪಿ ಜಿಲ್ಲಾ ಉಸ್ತವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಜಿಲ್ಲೆಯ ಅನೇಕ ಕಾಂಗ್ರೇಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ವೇದಿಕೆಯಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತ ಕುಟುಂಬಗಳಿಗೆ ಸಹಾಯ ಧನ ವಿತರಣೆಯೊಂದಿಗೆ ಊರಿನ ಹಿರಿಯ ಕಾಂಗ್ರೆಸಿಗರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಥಮ ಬಾರಿಗೆ ದೊಂಡೇರಂಗಡಿಯಲ್ಲಿ ಈ ಪಂದ್ಯಕೂಟವು ನಡೆಯುತ್ತಿದ್ದು ಕಬಡ್ಡಿ ಪ್ರೇಮಿಗಳಿಗೆಲ್ಲ ಪಾಲ್ಗೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















