

ದೊಂಡೆರಂಗಡಿಯಲ್ಲಿ ಯತೀಶ್ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ
ದೊಂಡೆರಂಗಡಿ(ಕಾರ್ಕಳ) : ದೊಂಡೆರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥ ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸಿದ ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಶೈಲಿಯಲ್ಲಿ ರಾಷ್ಟ ಮಟ್ಟದ 8 ತಂಡಗಳ ಲೀಗ್ ಮಾದರಿ ಪಂದ್ಯಾಟ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು. ಮುಖಂಡರಾದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.







































