[t4b-ticker]

ದೊಂಡೆರಂಗಡಿಯಲ್ಲಿ ಯತೀಶ್ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ

Picture of RB NEWS

RB NEWS

Bureau Report

ದೊಂಡೆರಂಗಡಿ(ಕಾರ್ಕಳ) : ದೊಂಡೆರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥ ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸಿದ ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಶೈಲಿಯಲ್ಲಿ ರಾಷ್ಟ ಮಟ್ಟದ 8 ತಂಡಗಳ ಲೀಗ್ ಮಾದರಿ ಪಂದ್ಯಾಟ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು. ಮುಖಂಡರಾದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ದಿ.ಅರವಿಂದ ಹೆಗ್ಡೆ ಕ್ರೀಡಾಂಗಣ ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭ ಕೋರಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶಂಕರ್ ನಾಯ್ಕ, ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಧನಲಕ್ಷ್ಮೀ ಪೂಜಾರಿ ಮತ್ತು ಶಗುನ್ ವರ್ಮಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಯತೀಶ್ ಶೆಟ್ಟಿ ಸಹೋದರ ಸತೀಶ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್‌, ಉಡುಪಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಹರಿಪ್ರಸಾದ್‌ ರೈ, ಮುಂಬೈ ಉದ್ಯಮಿ ಪಡುಕುಡೂರು ಹರೀಶ ಶೆಟ್ಟಿ ಪಡುಪರ್ಕಳ, ಪ್ರಮುಖರಾದ ವಕೀಲ ಶೇಖರ ಮಡಿವಾಳ್‌, ಮನೋಜ್‌ ಹೆಗ್ಡೆ ಮೂರ್ಸಾಲು, ಯೋಗೀಶ ಮಲ್ಯ ಕಡ್ತಲ, ಪ್ರವೀಣ್‌ ಬಲ್ಲಾಳ್‌ ಹೆಬ್ರಿ, ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ, ರಾಜೇಂದ್ರ ಸುವರ್ಣ, ಭಾಸ್ಕರ ಶೆಟ್ಟಿ ಮುಂಬೈ, ರಮೇಶ ಸುವರ್ಣ ಕಡ್ತಲ, ರಾಘವ ದೇವಾಡಿಗ ಎಳ್ಳಾರೆ, ಜಗದೀಶ ಹೆಗ್ಡೆ ಕಡ್ತಲ, ಡಾ.ಪ್ರಮೋದ್‌ ಕುಮಾರ್‌ ಹೆಗ್ಡೆ ಕಡ್ತಲ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಂಕರ ಶೇರಿಗಾರ್‌ ಹೆಬ್ರಿ, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸುಕೇಶ ಹೆಗ್ಡೆ ಕಡ್ತಲ, ಶ್ರೀಧರ ಶೆಟ್ಟಿ ಕುತ್ಯಾರುಬೀಡು, ಸತೀಶ ಶೆಟ್ಟಿ ಸಾಂತ್ಯಾರು, ಶಂಕರ ಶೆಟ್ಟಿ, ಸದಾನಂದ ಕುಲಾಲ್‌, ಅಖಿಲೇಶ್‌ ಶೆಟ್ಟಿ, ಸಂಪತ್‌ ಪೂಜಾರಿ ಪನೋಲು ಕುಕ್ಕುಜೆ, ಪಂದ್ಯಾಟ ಅಯೋಜನಾ ಸಮಿತಿಯ ವಿವಿಧ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಪತ್‌ ಪೂಜಾರಿ ಸ್ವಾಗತಿಸಿ ಮುನಿಯಾಲು ಗೋಪಿನಾಥ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್‌ ದುಗ್ಗನಬೆಟ್ಟು ವಂದಿಸಿ ವಿನಯಾ ಆರ್‌ ಭಟ್‌ ಮತ್ತು ಪ್ರಸನ್ನ ಶೆಟ್ಟಿಗಾರ್‌ ಎಳ್ಳಾರೆ ನಿರೂಪಿಸಿದರು.
ಸಮಾರೋಪ : ಯತೀಶ್‌ ಟ್ರೋಫಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್‌ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಪ್ರಮುಖರಾದ ಮುನಿಯಾಲು ಗೋಫಿನಾಥ ಭಟ್‌, ಬೈರಂಪಳ್ಳಿಯ ಸತೀಶ ಶೆಟ್ಟಿ ಕುತ್ಯಾರುಬೀಡು, ರಾಘವ ದೇವಾಡಿಗ ಎಳ್ಳಾರೆ, ಕುಕ್ಕುಜೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಮನ ಭಟ್‌, ಡಾ.ಪ್ರಮೋದ್‌ ಕುಮಾರ್‌ ಹೆಗ್ಡೆ ಕಡ್ತಲ, ನಂದ ಕುಮಾರ್‌ ಶೆಟ್ಟಿ ೪೧ನೇ ಶೀರೂರು, ಪ್ರಸನ್ನ ದೇವಾಡಿಗ ದೊಂಡೆರಂಗಡಿ, ಯತೀಶ ಶೆಟ್ಟಿ ಸಹೋದರ ಸತೀಶ ಶೆಟ್ಟಿ, ವಿಕಾಸ ಹೆಗ್ಡೆ ಅಡಿಮಾರು, ಮಾಜಿ ಸೈನಿಕ ವಿಶ್ವನಾಥ ಶೆಟ್ಟಿ ಕಡ್ತಲ, ವಕೀಲ ರಾಘವ ಕುಕ್ಕುಜೆ, ಹರೀಶ ಪೂಜಾರಿ ದುಗ್ಗನಬೆಟ್ಟು, ಕಡ್ತಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್‌ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
…….
ಪಲಿತಾಂಶ :
೨ ವಿಭಾಗಗಳಲ್ಲಿ ನಡೆದ ಪಂದ್ಯಾಟದ ವಿಜೇತರಿಗೆ ನಗದು ಸಹಿತ ಯತೀಶ್ ಟ್ರೋಫಿ ನೀಡಲಾಯಿತು.
ಕಾರ್ಕಳ ವಿಧಾನ ಸಭಾ ಮಟ್ಟದ ಫಲಿತಾಂಶ :
ಪ್ರಥಮ – ದಿ ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೇರಂಗಡಿ, ದ್ವಿತೀಯ – ಅದಿಶ್ ಪ್ರೆಂಡ್ಸ್ ಕಡ್ತಲ. ತೃತೀಯ – ಯಶಸ್ವಿ ಪ್ರೆಂಡ್ಸ್ ದೊಂಡೇರಂಗಡಿ, ಚತುರ್ಥ – ಕ್ರೇಜಿ ಬಾಯ್ಸ್ ಮುನಿಯಲು
ರಾಷ್ಟ್ರ ಮಟ್ಟದ ಅಹ್ವಾನಿತ ತಂಡಗಳ ಫಲಿತಾಂಶ :
ಪ್ರಥಮ – ಆಳ್ವಾಸ್ ಮೂಡಬಿದ್ರೆ, ದ್ವಿತೀಯ – ಉತ್ತರ ಕನ್ನಡ , ತೃತೀಯ – ಎನ್.ಎಂ.ಸಿ ಸುಳ್ಯ, ಚತುರ್ಥ – ಎಸ್ ಡಿಎಂ ಉಜಿರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top