ಮೂಡುಬಿದಿರೆ: ವಿವಾಹವಾಗುವ ಭರವಸೆ ನೀಡಿ ದಲಿತ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಬಂಧಿಸಿದ್ದಾರೆ.
ಉಡುಪಿ ಬ್ರಹ್ಮಾವರ 27 ವಷ ಹರೆಯದ ಯುವತಿಯೊಬ್ಬಳೊಂದಿಗೆ ಇನ್ಸಾ ಗ್ರಾಂ ಮೂಲಕ ಪರಿಚಯ ಬೆಳೆಸಿದ ಸಂಕೇತ್ ಗಾಣಿಗ ಆಕೆಯನ್ನು ಕಲ್ಲಬೆಟ್ಟುಬಿಗೆ ಕರೆಯಿಸಿ, ಮದುವೆಯ ಅಮಿಷವೊಡ್ಡಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾನೆ.
ವಿವಾಹವಾಗುವಂತೆ ಯುವತಿ ಒತ್ತಡ ಏರುತ್ತಿದ್ದಂತೆ ನೀನು ದಲಿತಳು. ಮದುವೆಗೆ ಜಾತಿ ಅಡ್ಡವಾಗುತ್ತಿದೆ ಎಂದು ಹೇಳಿ ತಿರಸ್ಕರಿಸಿದ್ದಾನೆ.
ಸಂತ್ರಸ್ತ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರನ್ವಯ ಪ್ರಕರಣ ದಾಖಲಾಗಿದೆ