ಕಾರ್ಕಳ : ಬಿ ಆರ್ ಕೆ ಗೇರು ಬೀಜ ಕಾರ್ಖಾನೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ. ನ್ಯಾಯವಾದಿಗಳ ಸಂಘ ರಿ) ಕಾರ್ಕಳ. ಕರ್ನಾಟಕ ಭೀಮ್ ಸೇನೆ (ರಿ )ಉಡುಪಿ ಹಾಗೂ ಬಿ ಆರ್ ಕೆ ಕ್ಯಾಶ್ಯೂಸ್ (ಪ್ರೈ) (ಲಿ.) ಜೋಡು ರಸ್ತೆ ಕಾರ್ಕಳ. ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ನ್ಯಾಯಾಧೀಶೆ ಕೋಮಲ ಆರ್ ಸಿ ನೆರವೇರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳಾ ಕಾರ್ಮಿಕರ ಹಕ್ಕುಗಳು, ಮಹಿಳಾ ಕಾನೂನುಗಳು ಹಾಗೂ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮಹಿಳೆಯರು ಕಾಪಾಡಿಕೊಳ್ಳಬೇಕು. ನೊಂದ ಮಹಿಳೆಯರು ಉಚಿತ ಕಾನೂನು ಸೇವಾ ಕೇಂದ್ರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬ ಮಾಹಿತು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿರುವ ನ್ಯಾಯವಾದಿ ನಂದಿನಿ ಬಿ ಶೆಟ್ಟಿ ಮಾತನಾಡಿ, ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪರಿಣಾಮಕಾರಿ ಅನುಷ್ಠಾನ ಆಗಿರುವ ಐತಿಹಾಸಿಕ ಹಿನ್ನಲೆಯನ್ನು ತಿಳಿಸಿದರು. ಮಹಿಳೆಯರ ಹಕ್ಕುಗಳು, ಕನಿಷ್ಠ ವೇತನ ಕಾಯ್ದೆ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳ ಸಂಘ(ರಿ ) ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಇವರು ಶುಭಾಂಶನೆಯ ಮಾತುಗಳನ್ನಾಡಿದರು. ಮಹಿಳೆಯರಿಗೆ ಕಾರ್ಮಿಕ ಕಾನೂನು ಮತ್ತು ಕಾಯ್ದೆಗಳು ಇರುವುದರಿಂದ ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಿರ್ವಹಿಸುವಂತೆ ಸಲಹೆ ನೀಡಿದರು.
ಬಿ ಆರ್ ಕೆ ಕ್ಯಾಶ್ಯೂ ಪ್ರೈ. (ಲಿ ) ನ ಡೈರೆಕ್ಟರ್ ನಾಗರಾಜ್ ಕಾಮತ್ ರವರು ನಮ್ಮ ಫ್ಯಾಕ್ಟರಿಯಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಪೂರಕವಾದ ವೇತನ, ವಾರ್ಷಿಕ ಬೋನಸ್, ರಜೆ ಸಂಬಳ, ಡಿಎ ಸೇರಿದಂತೆ ಉತ್ತಮ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.