

ದೈವಸ್ಥಾನದಲ್ಲಿ ವೃದ್ದೆಯ ಚಿನ್ನದ ಸರ ಎಗರಿಸಿದ ಮೂವರು ಮಹಿಳೆ ಆರೋಪಿಗಳ ಬಂಧನ ?!

ಮಂಗಳೂರು : ಡಿಸೆಂಬರ್ 24ರಂದು ಮೂಲ್ಕಿ ಸಮೀಪದ ಹೆಜಮಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜರುಗಿದ್ದ ನೇಮೋತ್ಸವದ ಸಂದರ್ಭದಲ್ಲಿ ತಮಿಳುನಾಡು ಮೂಲದ ಮೂವರು ಮಹಿಳೆಯರು ಸ್ಥಳೀಯ ವೃದ್ಧೆ ಕಮಲ ಎಂಬವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವುಗೈದಿದ್ದರು.
ಕಾರಣಿಕ ಕ್ಷೇತ್ರದ ಭಕ್ತಾದಿಗಳ ಕಣ್ಣಿಗೆ ಮಣ್ಣೆರಚಿ ತಮ್ಮ ಕೈಚಳಕ ತೋರಿಸಿದ ಕೃತ್ಯದ ದೃಶ್ಯಾವಳಿ ಸಿಸಿ ಕ್ಯಾಮರಲ್ಲಿ ಸೆರೆಯಾಗಿತ್ತು.
ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ 24 ಗಂಟೆಯೊಳಗಾಗಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರು ನೆರವಾಗಿದ್ದಾರೆ.
ಆರೋಪಿಗಳಾದ ಶೀಥಲ್, ಕಾಳಿಯಮ್ಮ, ಮಾರಿ ಇವರು ಪುತ್ತೂರಿನಲ್ಲಿ ಸೆರೆಯಾದರೆಂಬ ಮಾಹಿತಿ ಲಭಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ನಂಬಿದವರಿಗೆ ದೈವ ಶಕ್ತಿ ಇಂಬು ನೀಡುತ್ತದೆ ಎಂಬ ಮಾತು ಅಕ್ಷರಶ: ಈ ಬೆಳವಣಿಯಿಂದ ಋಜುವಾಗಿದೆ.
ಹೆಜಮಾಡಿಯಲ್ಲಿ ಬ್ರಹ್ಮಬೈದರ್ಕಲ ಗರಡಿಯಲ್ಲಿ ಜಾತ್ರೆಯ ದಿನ ಅಜ್ಜಿಯ ಚಿನ್ನ ಕಳ್ಳತನದ ಬಗ್ಗೆ ಸಿಸಿ ಕ್ಯಾಮರದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು. ಸದ್ರಿ ಕಲ್ಲಿಯರು ಇಂದು ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ದೇವತಾ ಕಾರ್ಯಕ್ರಮಕ್ಕೆ ಭಾಗವಹಿಸಿ ಊಟ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಅವರು ಇವರ ಚಲನವಲನವನ್ನು ಗುರುತಿಸಿ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿರುತ್ತಾರೆ.

































