ದೈವದ ನುಡಿ ಸತ್ಯವಾಯಿತು; ಕೊಲೆ ಆರೋಪಿ ನ್ಯಾಯಾಲಯ ಮುಂದೆ ಶರಣು!

Picture of RB NEWS

RB NEWS

Bureau Report

ಕೊಲೆಗೀಡಾದ ಶರತ್ ಶೆಟ್ಟಿ

ಉಡುಪಿ: 2023 ಫೆ. 5ರಂದು ಕಾಪು ಸಮೀಪದ ಪಾಂಗಾಳ ಎಂಬಲ್ಲಿ ಮಂಡೇಡಿಯ ಶರತ್ ಶೆಟ್ಟಿ ಯನ್ನು ದುಷ್ಕರ್ಮಿಗಳು ಟ್ರ್ಯಾಗನ್ ಇರಿದು ಹತ್ಯೆಗೈಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಉಡುಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ಮಾಹಿತಿ ತಿಳಿದುಬಂದಿದೆ.

ಆರೋಪಿ ಪೊಲೀಸ್‌ ಕಸ್ಟಡಿಗೆ: ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಶರಣಾಗಿದ್ದಾನೆ. ಆರೋಪಿ ಯೋಗೀಶ್ ಆಚಾರ್ಯನಿಗೆ ನ್ಯಾಯಾಲಯವು ಕಾಪು ಪೊಲೀಸರ ಕಸ್ಟಡಿಗೆ ನೀಡಿ ಅದೇಶ ಹೊರಡಿಸಿದೆ.

ದೈದವ ಮೊರೆಹೋದ ಕೊಲೆಗೀಡಾದ ಶರತ್ ಶೆಟ್ಟಿಯ ಮನೆಮಂದಿ

ಪಾಂಗಾಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲನಾಗಿರುತ್ತಿದ್ದ 42ರ ಹರೆಯದ ಶರತ್‌ ವಿ ಶೆಟ್ಟಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಹಲವು ಆರೋಪಿಗಳ ಬಂಧನವಾಗಿತ್ತು.

ಇದೀಗ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮೋತ್ಸವವನ್ನು ಆಯೋಜಿಸಲಾಗಿತ್ತು.


ಅಲ್ಲಿ ದೈವ ನೀಡಿದ ವಾಗ್ದಾನ ನಿಜವಾಗಿದೆ. ತುಳುನಾಡಿನ ನಂಬಿಕೆಯೂ ಅಂತಹದೇ ಆಗಿರುತ್ತದೆ. ಆರೋಪಿ ಎಷ್ಟೇ ಪ್ರಾಬಲ್ಯ ಶಾಲಿಯಾಗಿರಲಿ. ಯಾವುದೇ ರಕ್ಷಣೆಯೊಳಗೆ ಅಡಗಿ ಕುಳಿತಿರಲಿ, ಮಾಹೆಶಕ್ತಿಯ ಮೂಲಕ ಪೊಲೀಸರ ಸಮ್ಮಖದಲ್ಲಿ ನಿಲ್ಲಿಸುತ್ತೇನೆ. ಅದು ನಿಜವಾಗಿದೆ. ಸ್ವಯಂ ಪ್ರೇರಿತನಾಗಿ ಆರೋಪಿ ಯೋಗೀಶ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಯ ಎಲ್ಲ ಮಾಹಿತಿಗಳನ್ನು ಪೊಲೀಸ ಮುಂದೆ ಬಿಚ್ಚಿಟ್ಟಿದ್ದಾನೆ.

ಪ್ರಕರಣದ ರೂವಾರಿ ಯೋಗೀಶ್ ಆಚಾರ್ಯ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top