ದೇಹ ಹಾಗೂ ಮನಸ್ಸಿಗೆ ನೆಮ್ಮದಿ ತರುವ ಕಲೆ ಯಕ್ಷಗಾನ : ಪಟ್ಲ ಸತೀಶ್ ಶೆಟ್ಟಿ
ಕಾರ್ಕಳ: ಭಾರತೀಯ ರಂಗಕಲೆಗಳು ಮಾನವನ ಆರೋಗ್ಯದ ಮೇಲೆ ಧನಾತ್ಮಕ ಶಕ್ತಿ ಉಂಟುಮಾಡುತ್ತದೆ. ಸಂಗೀತ, ವಾದನ, ನೃತ್ಯ, ನಟನೆ, ವರ್ಣ, ಭಾಷಾ ಪ್ರೌಢಮೆ ಹೀಗೆ ವಿವಿದೆಡೆಯಲ್ಲಿ ಏಕತೆಯನ್ನು ಸಾರುವ ಕಲೆ ಯಕ್ಷಗಾನವಾಘಿದೆ. ಕಲೆ ಉಳಿದು ಬೆಳೆದು ನಮ್ಮ ಸಂಸ್ಕöÈತಿ ಸಾಕಾರಗೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡಿ ಪ್ರತಿಭಾವಂತ ಕಲಾವಿದರನ್ನಾಗಿ ಅಥವಾ ಕಲಾಪ್ರೇಕ್ಷಕ ಬಂಧುಗಳಾಗಿ ನಿರೂಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಯಕ್ಷಧ್ರುವದ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಕಾರ್ಕಳದ ಪೆರ್ವಾಜೆ ಹೈಸ್ಕೂಲ್ ವಠಾರದಲ್ಲಿ ಯಕ್ಷಕಲಾರಂಗ ರಿ ಕಾರ್ಕಳ ಇವರು ಕಾರ್ಕಳ ತಾಲೂಕಿನ ವಿವಿದ ಶಿಕ್ಷಣ ಆಸಕ್ತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ಆ ವಿದ್ಯಾರ್ಥಿಗಳಿಂದ ನಡೆಸಿದ ಹದಿಮೂರನೇ ವರ್ಷದ ಕಿಶೋರ ಯಕ್ಷೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಣ್ಣೆಹೊಳೆಯ ವೇ.ಮೂ ಅರಣ್ ಭಟ್, ಸಾಣೂರು ಭಕ್ತ ವತ್ಸಲ ಗಣೇಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ವಿಜಯ ಶೆಟ್ಟಿ, ಸಂಚಾಲಕ ಪ್ರೊ. ಪದ್ಮನಾಭ ಗೌಡ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಐದು ಮಂದಿ ಯಕ್ಷ ಶಿಕ್ಷಣ ಪಡೆದ ಉತ್ತಮ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿವೇತನ ನೀಡಲಾಯಿತು. ಯಕ್ಷಯಾನದ ಇಪ್ಪತ್ತೆöÊದರ ಸಂಭ್ರಮದಲ್ಲಿರುವ ಪಟ್ಲ ಸತೀಶ್ ಶೆಟ್ಟಿ ಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಬೇಬಿ ಕೆ. ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು.































