ದೇಶದ ಪ್ರಧಾನಿ ನರೇಂದ್ರ ಮೋದೀಜಿ ಯವರ ಜಾತಕ ಪರಿಶೀಲನೆ

Picture of RB NEWS

RB NEWS

Bureau Report

ದೇಶದ ಪ್ರಧಾನಿ ನರೇಂದ್ರ ಮೋದೀಜಿ ಯವರ ಜಾತಕ ಪರಿಶೀಲನೆ
ನರೇಂದ್ರ ಮೋದೇಜಿಯವರು 17.09.1950 ರಂದು ಪೂರ್ವಾಹ್ನ 11.40 ಕ್ಕೆ ಗುಜರಾತಿನಲ್ಲಿ ಜನಿಸಿದರು. ಇವರಿಗೆ ಪ್ರಸ್ತುತ 73 ವರ್ಷ 7 ತಿಂಗಳು 9 ದಿನ ಪ್ರಾಯವಾಗಿದೆ 02.05.2021 ರಿಂದ 02.05.2028 ರ ವರೆಗೆ ಕುಜ ದಶಾ ಕಾಲವಾಗಿದೆ .


23.09.2023 ರಿಂದ 01.11.2024 ರ ವರೆಗೆ ಕುಜ ದಶೆಯಲ್ಲಿ ಶನಿ ಭುಕ್ತಿ ಕಾಲವಾಗಿರುತ್ತದೆ . “ಚಂದ್ರಾಧಿಷ್ಟಿತ ರಾಶೀಷೆ ಲಗ್ನಸ್ತೇ ಶುಭ ವೀಕ್ಷಿತೇ
ಭೃಗುನಾ ವೀಕ್ಷಿತೇ ಚಂದ್ರೇ ಸ್ವೋಚೇರಿಷ್ಟಮ್ ಹರೇತ್ತದಾ”
ಚಂದ್ರನಿಗೆ ಆಶ್ರಯಕೊಟ್ಟಿರುವ ಗ್ರಹನು ಲಗ್ನದಲ್ಲಿ ಬಲಿಷ್ಟನಾಗಿರುವನು. ಉತ್ತಮ ಫಲವನ್ನೇ ನಿರೀಕ್ಷಿಸಬಹುದು ,ಕುಜ ದಶಾ ಕಾಲದಲ್ಲಿ ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅತೀ ಅಗತ್ಯವಾಗಿದೆ . ಹಲವಾರು ಅರಿಷ್ಟಗಳು ಇದ್ದರೂ ಜೊತೆಗೆ ಅರಿಷ್ಟಭಂಗ ಯೋಗ ಜೊತೆಯಲ್ಲಿ ಇರುವುದರಿಂದ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿವೆ .


ಇವರಿಗಿರುವ ಯೋಗಗಳು :ಗಜಕೇಸರಿ ಯೋಗ, ರುಚಕ ಯೋಗ ,ಕೇದಾರ ಯೋಗ ,ವರಿಷ್ಠ ಯೋಗಗಳು ಇವೆ . ರವಿ ಬುಧ ಲಾಭ ಕ್ಷೇತ್ರದಲ್ಲಿ ;ಶುಕ್ರ ಶನಿ ಕರ್ಮ ಕ್ಷೇತ್ರದಲ್ಲಿ ಚಂದ್ರ ಮತ್ತು ಕುಜ ಜನ್ಮ ರಾಶಿಯಲ್ಲಿ ಇದ್ದಾರೆ . ಸದಾ ಇವರು ಪೂಜಿಸ ಬೇಕಾದ ದೇವರು ಸುಬ್ರಹ್ಮಣ್ಯ ದೇವರಾಗಿದ್ದಾರೆ . ಬಿಳಿ ಇವರ ಅದೃಷ್ಟದ ಬಣ್ಣವಾಗಿದೆ ,ಮುತ್ತು ಅದೃಷ್ಟದ ರತ್ನವಾಗಿದೆ .ಅನುರಾಧಾ ನಕ್ಷತ್ರ 2 ನೇ ಪಾದ ವೃಶ್ಚಿಕ ರಾಶಿಯ ಇವರಿಗೆ ಚುನಾವಣೆಯ ಮತಗಳ ಎಣಿಕೆಯ ದಿನ 04.06.2024 ರಂದು ಆಗಿದ್ದು ಅಂದು ಬೆಳಿಗ್ಗೆ 07 ಗಂಟೆಗೆ ಆರಂಭ ಆಗಲಿದೆ . ಅಂದು ಭರಣಿ ನಕ್ಷತ್ರ 2 ನೇ ಪಾದ ಮೇಷ ರಾಶಿಯಾಗಿರುತ್ತದೆ , ಮಂಗಳವಾರವಾಗಿದೆ ,ಇವರ ರಾಶ್ಯಾಧಿಪತಿಯೂ ಮಂಗಳನಾಗಿದ್ದು ಅಂದು ಚಂದ್ರನ ಜೊತೆಗೆ ಕುಜ ಇವರ ಜನ್ಮ ರಾಶಿಯಿಂದ 6 ನೇ ಮನೆಯಲ್ಲಿ ಇದ್ದು ಶುಭ ಫಲವನ್ನು ಸೂಚನೆ ಕೊಡುತ್ತಿದ್ದಾನೆ ,.ಒಂದು ಆಶ್ಚರ್ಯಕರ ವಿಷಯವೆಂದರೆ ಇವರ ಜನನಕಾಲದಲ್ಲಿಯೂ ಚಂದ್ರ ಕುಜ ಜೊತೆಯಾಗಿದ್ದರು .ಶಶಿ ಮಂಗಳ ಯೋಗವಾಗಿದೆ . 7 ನೇ ಮನೆಯಲ್ಲಿ ಪೂರ್ಣ ದೈವಾನುಗ್ರಹ ಇರುವ ಶುಭ ಸಮಯದಲ್ಲಿ ರವಿ ಬುಧ ,ಗುರು ,ಶುಕ್ರ ನಾಲ್ಕು ಮಂದಿ ಗ್ರಹರು ಜೊತೆಯಾಗಿ ವೃಷಭ ರಾಶಿಯಲ್ಲಿ ಇದ್ದಾರೆ . ಲಾಭ ಕ್ಷೇತ್ರದಲ್ಲಿ ಕೇತು ಮತ್ತು ಮಾಂದಿ ಇದ್ದಾರೆ .ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಇವರ ಜನನ ಕಾಲದಲ್ಲಿ ರಾಹು ಪಂಚಮದಲ್ಲಿ ಮೀನ ರಾಶಿಯಲ್ಲಿ ಇದ್ದು ಪ್ರಸ್ತುತ ಕಾಲದಲ್ಲಿಯೂ ರಾಹು ಅಲ್ಲಿಯೇ ಇದ್ದಾನೆ .ನಾಗ ದೇವರಿಗೆ ವಿಶೇಷ ಆರಾಧನೆ,ಶುಕ್ರನಿಗೆ ಅಂದರೆ ದೇವಿಗೆ ವಿಶೇಷ ಚಂಡಿಕಾ ಪಾರಾಯಣ ಅಗತ್ಯವಿದೆ . ಅವರ ಸಂಕಲ್ಪ ತೆಗೆದುಕೊಂಡು ಲಕ್ಷಾಂತರ ಮಂದಿ ಕಾರ್ಯಕರ್ತರು ಮಾಡಿದರಾಯ್ತು . ಸರ್ವೇ ಜನಾ: ಸುಖಿನೋ ಭವಂತು ,ಸರ್ವ ಸಂಮಂಗಳಾನಿ ಭವಂತು II

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top