ಕಾರ್ಕಳ : ಭಾಷೆ , ಸಾಹಿತ್ಯ , ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಬಂದಿದೆ .ಉದ್ಯಮಶೀಲತೆಯಲ್ಲಿ ಶ್ರೇಷ್ಠತೆ ಕಾಯ್ದುಕೊಂಡು ಬಂದ ಜಿ ಎಸ್ ಬಿ ಸಮಾಜ ವಿದ್ಯೆಗೆ ವಿಶೇಷ ಮಹತ್ವ ನೀಡಿದ್ದು , ಎಲ್ಲರೂ ವಿದ್ಯೆ ವ್ಯಾಪಾರ ಮತ್ತು ವೃತ್ತಿಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ .ಉದ್ಯಮ , ಆರ್ಥಿಕಸಂಸ್ಥೆ ಮತ್ತು ಮಾಧ್ಯಮವಲಯದಲ್ಲೂ ಜಿ ಎಸ್ ಬಿ ಸಮುದಾಯ ಮುಂಚೂಣಿಯಲ್ಲಿದ್ದು ದೇಶದ ಪ್ರಗತಿಗೆ ವಿಶೇಷ ಕೊಡುಗೆ ನೀಡಿದೆ
ಎಂದು ಭಾರತಿ ಸೇವಾಸಮಿತಿ ಉಪಾಧ್ಯಕ್ಷ , ಜವುಳಿ ಉದ್ಯಮಿ ಹರಿಪ್ರಸಾದ್ ಪ್ರಭು ಹೇಳಿದರು .
ಕಾರ್ಕಳ ಪೆರ್ವಾಜೆಯ ಅಮಿತ್ ಎಸ್ .ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಧ್ಯಾನ ಯೋಗ ಮತ್ತು ಸೇವಾಮಂದಿರದಲ್ಲಿ ಹೊಸಸಂಜೆ ಬಳಗದ ವತಿಯಿಂದ ವಿಶ್ವ ಮಾತೃಭಾಷಾ ದಿನದ ಅಂಗವಾಗಿ ಆಯೋಜಿಸಿದ ಕೊಂಕಣಿ ಕವಿಗೋಷ್ಠಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ಮುಖ್ಯ ಅತಿಥಿ
ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕ ರೆಂಜಾಳ ನಾರಾಯಣ ಶೆಣೈ ಮಾತನಾಡಿ ” ಆಲಿಸುವುದು , ಮಾತನಾಡುವುದು ಓದುವುದು ಮತ್ತು ಬರೆಯುವುದು ಯಾವುದೇ ಭಾಷೆಯ ಅಸ್ತಿತ್ವಕ್ಕೆ ಅತೀ ಮುಖ್ಯ ಅಂಶಗಳು .ಮಾತೃಭಾಷೆಯ ಬಗ್ಗೆ ಪ್ರೀತಿಯಿದ್ದರೆ ಮಾತ್ರ ಭಾಷೆಯ ಉಳಿವು ಸಾಧ್ಯ ” ಎಂದರು .
ದಂತ ವೈದ್ಯೆ ಡಾ . ಸುಮನಾ ಹೆಗ್ಡೆ , ಮಂದಿರದ ಪ್ರವರ್ತಕರಾದ ಶ್ರೀನಿವಾಸ ಪೈ ನಿರ್ಮಲಾ ಪೈ ಉಪಸ್ಥಿತರಿದ್ದರು .
ಕವಿಗೋಷ್ಠಿಯಲ್ಲಿ ಕಾಂತಾವರ ಶಿವಾನಂದ ಶೆಣೈ , ಆರ್ . ದೇವರಾಯ ಪ್ರಭು , ರಮ್ಯಾ ರಾಜೇಶ್ ನಾಯಕ್ , ರೆಂಜಾಳ ಪೂರ್ಣಿಮಾ ಶೆಣೈ , ಗ್ರೀಷ್ಮಾ ಪ್ರಭು , ವಿನಾಯಕ ಕುಡ್ವ , ಪ್ರಜ್ವಲಾ ಶೆಣೈ ಸ್ವರಚಿತ ಕವನಗಳನ್ನು ವಾಚಿಸಿದರು .
ರೆಂಜಾಳ ರವೀಂದ್ರ ಶೆಣೈ ಸ್ವಾಗತಿಸಿದರು .ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು .ತೃಪ್ತಿ ನಾಯಕ್ ವಂದಿಸಿದರು .






































