ದೇವಾಲಯಗಳಲ್ಲಿ ದೇವರ ಪ್ರತಿಷ್ಠೆಯ ಮುಹೂರ್ತದ ಚಿಂತನೆ

ಕೆ.ಸುಬ್ರಹ್ಮಣ್ಯ ಆಚಾರ್ಯ
ಉತ್ತರಾಯಣ ಬಂತು ಎಂದರೆ ದೇವಾಲಯಗಳಲ್ಲಿ ಬ್ರಹ್ಮ ಕಲಶಗಳು ನಡೆಯುವ ಸಮಯವಾಗಿರುತ್ತದೆ. ಬ್ರಹ್ಮಕಲಶಕ್ಕೆ ದಿನ ನಿಶ್ಚಯ ಮಾಡುವಾಗ ಬಹಳ ಎಚ್ಚರ ವಹಿಸಬೇಕು. ಒಮ್ಮೆ ಬ್ರಹ್ಮ ಕಲಶ ನಡೆಯಿತು ಎಂದರೆ ಮತ್ತೊಮ್ಮೆ ಆಗಬೇಕಿದ್ದರೆ ಮತ್ತೆ 12 ವರ್ಷ ಕಾಯಬೇಕು. ಬಹಳ ಮುಂಚಿತವಾಗಿ ದಿನ ಮುಹೂರ್ತ ನಿಶ್ಚಯ ಆಗುತ್ತದೆ. ದೇವರಿಗೆ ಎಲ್ಲಾ ರೀತಿಯಲ್ಲಿ ಶುಭ ಗಳಿಗೆಯಲ್ಲಿ ಬ್ರಹ್ಮ ಕಲಶವಾಗಬೇಕು, ಶುಭ ಮುಹೋರ್ತದಲ್ಲಿ ದೇವರನ್ನು ಪ್ರಷ್ಟಾಪಿಸಿದರೆ – ಬಹು ದೀರ್ಘ ಕಾಲ ದೇವರ ಸಾನ್ನಿಧ್ಯ ವೃದ್ಧಿಯಾಗುತ್ತಾ ಬಂದು ದೇವರು ಭಕ್ತಜನಕ್ಕೂ ದೇಶ – ರಾಷ್ಟ್ರಕ್ಕೂ ಸುಖ ಸುಭಿಕ್ಷೆ ನೀಡುತ್ತಾರೆಂದು ತಂತ್ರಾಚಾರ್ಯರುಗಳ ಅಭಿಪ್ರಾಯವಾಗಿದೆ. ಮುನಿಮತವೂ ಹೀಗೇ ಇದೆ. ಈ ತಂತ್ರ ಶಾಸ್ತ್ರಕ್ಕೆ ವಸಿಷ್ಟರು ಅತ್ರಿ ಕಶ್ಯಪರು, ನಾರದರು, ಭಾರದ್ವಾಜರು ಇತ್ಯಾದಿಯವರ ಕೊಡುಗೆ ದೊಡ್ಡದು.
ಉತ್ತರಾಯಣದಲ್ಲಿ ಶುಕ್ಲಪಕ್ಷದಲ್ಲಿ ದೇವ ಪ್ರತಿಷ್ಠೆ ಮಾಡಬೇಕು, ಉತ್ತರಾಯಣದಲ್ಲಿ ಮೀನ ಮೇಷ ವೃಷಭ ರ ಮಾಸ ಸ ಉತ್ತಮವಾಗಿದೆ. ಕುಂಭ ಮಾಸ ಉತ್ತರಾಯಣದಲ್ಲಿ ಮಧ್ಯಮವಾಗಿದೆ. ಧನು: ಪುಷ್ಯ ಮಾಸ ಉತ್ತಮವಲ್ಲ. [ಈಗ ನಡೆಯುತ್ತಿರುವುದು ಕೃಷ್ಣ ಪಕ್ಷ ಪುಷ್ಯ ಮಾಸ ] ಮಾಘ ಮಾಸ ಉತ್ತಮ, ಪ್ರಥಮ ಪ್ರತಿಷ್ಠೆಗೆ ಶುಕ್ಲ ಪಕ್ಷವೇ ಬೇಕು, ಎಷ್ಟೋ ವರ್ಷಗಳ ನಂತರ ನಡೆದಾಗ ಅದು ಪ್ರಥಮ ಪ್ರತಿಷ್ಟೆಯೇ ಆಗಿರುತ್ತದೆ. ಬಾಲಾನ್ನ ಪ್ರಾಶನ ನಕ್ಷತ್ರಗಳಾದ ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಮಖಾ, ಉತ್ತರಾ, ಹಸ್ತಾ ಚಿತ್ರಾ, ಸ್ವಾತಿ, ಅನುರಾಧ, ಉತ್ತರಾಷಾ ಢಾ,ಶ್ರವಣ ಧನಿಷ್ಟಾ ಉತ್ತರಾ ಭಾದ್ರಾ, ರೇವತಿ 3 ಈ 16 ನಕ್ಷತ್ರಗಳು ಉತ್ತಮವಾಗಿದೆ. ವಿಶಾಖ ನಕ್ಷತ್ರ ದೇವರ ಪ್ರತಿಷ್ಠೆ ಮಾಡಲು ಉತ್ತಮವಲ್ಲ
ರವಿವಾರ ಪ್ರತಿಷ್ಠೆಗೆ ಮಧ್ಯಮವಾಗಿದೆ. ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಬಹಳ ಉತ್ತಮವಾದ ವಾರವಾಗಿದೆ. ಧನು ಮಕರ, ತುಲಾ ಮೇಷ ಲಗ್ನದಲ್ಲಿ ಪ್ರಜ್ಞೆ ಮಾಡುವುದು ಉತ್ತಮವಲ್ಲ.ಸ್ಥಿರ ಲಗ್ನಗಳು ಆಗಿರಬೇಕು, ಕರ್ಕಾಟಕ ಲಗ್ನ ಮಧ್ಯಮವಾಗಿದೆ. ಪ್ರತಿಷ್ಟಾ ಲಗ್ನದ 5 – 9 ರಲ್ಲಿ 8- 12 ರಲ್ಲಿ ಪಾಪ ಗ್ರಹರು ಇರಕೂಡದು [ಕ್ಷೀಣ ಚಂದ್ರ, ರವಿ,ಕುಜ,ಶನಿ,ಇವರು ಕ್ರಮಶ: ಅಧಿಕಾಧಿಕ ಪಾಪರು,ಪಾಪಯುಕ್ತನಾದ ಬುಧನೂ ಪಾಪನು, ಪಾಪಯುತಿ ಇಲ್ಲದ ಬುಧ -ಪೂರ್ಣ ಬಲಯುತ ಚಂದ್ರ-ಗುರು,ಶುಕ್ರರು ಶುಭರು. ರಾಹು ಕೇತುಗಳು ಪಾಪಗ್ರಹರು. ಶುಕ್ಲ ಪಕ್ಷದ ಪ್ರತಿಪದೆ ಯಿಂದ ದಶಮಿಯವರೆಗೆ ಚಂದ್ರನು ಮಧ್ಯಮ ಬಲಿಷ್ಠ ಶುಕ್ಲ ದಶಮಿಯಿಂದ ಕೃಷ್ಣ ಪಂಚಮಿಯವರೆಗೆ ಪೂರ್ಣ ಬಲಿಷ್ಠ ಕೃಷ್ಣ ಪಂಚಮಿಯಿಂದ ಅಮಾವಾಸ್ಯೆಯ ವರೆಗೆ ಕ್ಷೀಣನು ಪಾಪನು ದುರ್ಬಲನಾದ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ ಶುಭ ದಾಯಕ]
12……ತಂತ್ರಿ; 3…ನೈವೇದ್ಯ ಕರ್ತ, ಶಿಲ್ಪಿ 8.. ಪ್ರತಿಮಾ ಸಾನ್ನಿಧ್ಯ, ಇವುಗಳಲ್ಲಿ ಪಾಪಗ್ರಹರು ಇರಬಾರದು. ದೇವರಿಗೆ ನಕ್ಷತ್ರವಿದೆ ವಿಷ್ಣುವಿಗೆ ಶ್ರವಣ ಶತಭಿಶಾ ಕೃಷ್ಣನಿಗೆ ರೋಹಿಣಿ, ರಾಮ ದೇವರಿಗೆ ಪುನರ್ವಸು ಶಿವನಿಗೆ ಆರ್ಧಾ ಶತಭಿಶಾ ; ಶೈವ ಗಣಗಳಿಗೆ ಆರ್ಧಾ,ಸ್ವಾತಿ, ಶತಭಿಷ, ಪ್ರಾಣ ದೇವರಿಗೆ ಸ್ವಾತಿ ಗಣಪತಿಗೆ ಚಿತ್ರಾ ಜೇಷ್ಠ, ದುರ್ಗೆಗೆ ಚಿತ್ರಾ, ಮೂಲಾ,ಕೃತ್ತಿಕಾ, ಸುಬ್ರಹ್ಮಣ್ಯನಿಗೆ ಕೃತ್ತಿಕಾ ; ಸರ್ಪನಿಗೆ ಆಶ್ಲೇಷಾ ; ಇಲ್ಲಿ ದೇವರಿಗೆ ತಾರಾನುಕೂಲ ನೋಡುವುದು ಸರಿಯಲ್ಲ. ಗ್ರಾಮಾಧಿಪತಿ [ಗ್ರಾಮಣಿ ] ತಂತ್ರಿ, ಪೂಜಾ ಕರ್ತ, ನೈವೇದ್ಯ ಕರ್ತ, ಶಿಲ್ಪಿ ಪ್ರಧಾನ ಮೊಕೇಸರ [ಕ್ಷೇತ್ರಪತಿ] ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ಇವರಿಗೆಲ್ಲ ಅವರವರ ತಾರಾನುಕೂಲ ನಕ್ಷತ್ರ ನೋಡಿದರೆ ಸಾಕು. ಈ ಮೊದಲು ದೇವರನ್ನು ಪ್ರತಿಷ್ಠೆ ಮಾಡಿದ ನಕ್ಷತ್ರ ಗೊತ್ತಿದ್ದರೆ ಅದೇ ನಕ್ಷತ್ರ ಮುಂದುವರಿಯುತ್ತದೆ. ಪ್ರಧಾನ ವ್ಯಕ್ತಿಗಳಿಗೆ ಪ್ರತಿಷ್ಟಾ ಮುಹೂರ್ತದಲ್ಲಿ ಚಂದ್ರನು [ಆ ದಿನ ಅಷ್ಟಮದಲ್ಲಿ ಬಂದರೆ ದೇವರ ಅನುಗ್ರಹ ಅವರಿಗೆ ಸಿಗಲಾರದು ಶಿವನಿಗೆ ಶೈವ ಸಂಬಂಧಿ
ದೇವತಾ ಪ್ರತಿಷ್ಟೆಗೆ ಆರ್ಧಾ ನಕ್ಷತ್ರ ಉತ್ತಮವಾಗಿದೆ. ಉತ್ಸಾಯಣ ದೇವಪ್ರತಿಷ್ಟೆಗೆ ಆಷ್ಟ ಬಂಧ ಕಲಶಾದಿಗಳಿಗೆ ಪ್ರಧಾನ ಕುಂಭ ಮಾಸ ಮಧ್ಯಮ, ಪುಷ್ಯಾ ರೇವತಿ ಪುನರ್ವಸು ರೋಹಿಣಿ ಹಸ್ತಾ ಸ್ವಾತಿ ಉತ್ತರಾ, ಉತ್ತರಾಷಾಢಾ, ಉತ್ತರಾಭಾದ್ರಾ ಈ ನಕ್ಷತ್ರಗಳು : ದೇವ ಪ್ರತಿಷ್ಠೆಗೆ ಶುಭ ನಕ್ಷತ್ರಗಳು. ಬಾಲಾನ್ನ ನಕ್ಷತ್ರಗಳಲ್ಲಿ ಮಾಡಬಹುದು.
ಪ್ರತಿಷ್ಟಾ ಮುಹೂರ್ತ ಲಗ್ನವು ಪಾಪಯುತರಾಗಿರಬಾರದು, ಲಗ್ನದಲ್ಲಿ ರವಿ, ರಾಹು, ಶನಿ,ಕುಜ ಇವರಿದ್ದಾರೆ ರಾಜ್ಯಕ್ಕೂ ಮೊಕ್ತೇಸರನಿಗೂ ಆ ರಾಜನಿಗೂ ಅನಿಷ್ಟ. ಯಜಮಾನ ಸ್ಥಾನದಲ್ಲಿ ಇರುವವರಿಗೂ ೧ ಕಷ್ಟ ಸಾನ್ನಿಧ್ಯವೂ ಹಾನಿಕಾರಕವಾಗುವುದು. ಎಲಾ ಗ್ರಹರು ತಮ್ಮ ತಮ್ಮ ಇಷ್ಟ ಸ್ಥಾನದಲ್ಲಿ ಇರಬೇಕು. ಲಗ್ನದಿಂದ ಅಷ್ಟಮವು ಶುದ್ಧವಾಗಿರಬೇಕು. 12 ರಲ್ಲಿ ಶುಕ್ರ ಒಳ್ಳೆಯದಲ್ಲ. 4 ರಲ್ಲಿ 12 ರಲ್ಲಿ ಚಂದ್ರ ಒಳ್ಳೆಯದಲ್ಲ. ಗುರು ಶುಕ್ರರ ಸ್ಥಿತಿ ಕೇಂದ್ರ ತ್ರಿಕೋಣಾದಿ ಗಳಲ್ಲಿ ಉತ್ತಮವಾಗಿರಬೇಕು. ಲಗ್ನದಿಂದ ಮೂರ್ತಿ ಸಾನ್ನಿಧ್ಯ; ದೇವರಾಕಾರ ರೂಪ ಗುಣಾದಿಗಳು 2ನೇ ಭಾವದಿಂದ ದೇವರ ನಿಧಿ, ಆದಾಯ ವ್ಯಯಗಳು ದೇವಸ್ಥಾನದ ರಕ್ಷಕರು ; 3 ನೇ ಭಾವದಿಂದ ನೈವೇದ್ಯ ಪರಿಚಾರಕರು, ನೈವೇದ್ಯದ ಗುಣದೋಷಗಳು, ಇಷ್ಟವಾದ ನೈವೇದ್ಯ,4 ನೇ ಭಾವದಿಂದ ದೇವಾಲಯ, ಮುಖ ಮಂಟಪ ವಾಹನ ಪಾಲಕ್ಕಿ ; 5 ನೇ ಭಾವದಿಂದ ದೇವರ ಸಾನ್ನಿಧ್ಯ ಪೂರ್ವ ಪುಣ್ಯ ಜನರ ಸಹಕಾರ ; 6ನೇ ಭಾವದಿಂದ ಅಶುದ್ದಿ ಶತ್ರುಗಳೂ ಕಲಹಗಳು ; 7 ನೇ ಭಾವದಿಂದ ದೀಪ, ದೃಷ್ಟಿ ವೈಭವ ದೇವರ ಆಭರಣ, 8 ನೇ ಭಾವದಿಂದ ಅಷ್ಟಬಂಧ ಮಹಾ ಸಾನ್ನಿಧ್ಯ ನೈವೇಧ್ಯದ ಕ್ರಮ,ವ್ಯತ್ಯಾಸ 9ನೇ ಭಾವದಿಂದ ಪ್ರಧಾನ ಮೊಕೇಸರ ಭಕ್ತ ಜನರು ಧರ್ಮ ಕಾರ್ಯಗಳು, ದೇವರ ಸರ್ವ ಸಂಪತ್ತು : 10 ನೇ ಭಾವದಿಂದ ಧನ ಲಾಭ ಇತರ ವರಮಾನ 11 ನೇ ಭಾವದಿಂದ ಧನ ಲಾಭ ಸರ್ವ ಸಂಪತ್ತುಗಳು 12 ನೇ ಭಾವದಿಂದ ತಂತ್ರಿ ಜನರು ಅವರ ಆಶ್ರಿತರು, ಆಚಾರ್ಯ ವರ್ಗ ಹೀಗೆ ಪ್ರತಿಷ್ಟಾ ಕಾಲದ ಲಗ್ನದ ಮೂಲಕ ಇವೆಲ್ಲದರ ಭಾವ ಚಿಂತನೆ ಮಾಡಬಹುದು ಪ್ರತಿಷ್ಟಾ ಕಾಲದ ಕುಂಡಲಿಯನ್ನು ಹಾಕಿಕೊಂಡು ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಮ್ಮ ಮೊಕ್ತೇಸರ ವರ್ಗದವರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಅರ್ಚಕ ವರ್ಗದವರಿಗೆ ಈ ವಿಷದ ಬಗ್ಗೆ ಎಚ್ಚರಿಕೆ ಇರಬೇಕು. ಎಲ್ಲರ ಕರ್ತವ್ಯವೂ ಆಗಿರುತ್ತದೆ.




































