ದೆಹಲಿಯ ಪೆರೇಡ್‌ನಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ಎನ್.ಸಿ.ಸಿ ವಿದ್ಯಾರ್ಥಿಯರು

Picture of RB NEWS

RB NEWS

Bureau Report

ಕಾರ್ಕಳ: ದೆಹಲಿಯಲ್ಲಿ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಪೆರೇಡ್‌ನಲ್ಲಿ ಪ್ರಧಾನಿಯವರ ರ‍್ಯಾಲಿಯಲ್ಲಿ ಭಾಗವಹಿಸಲು ಶ್ರೀ ಭುವನೇಂದ್ರ ಕಾಲೇಜಿನ ಎನ್.ಸಿ.ಸಿ ವಿದ್ಯಾರ್ಥಿಗಳಾದ ಪನ್ನಗ ಆರ್ ಮತ್ತು ದೀಕ್ಷಿತಾ ಎಸ್ ಆಯ್ಕೆಯಾಗಿದ್ದಾರೆ.

ತೃತೀಯ ಬಿ.ಸಿ.ಎ ವಿದ್ಯಾರ್ಥಿಯಾಗಿರುವ ಪನ್ನಗ ಆರ್ ಇವರು ಕಳಸದ ರಮೇಶ್ ರಾವ್ ಮತ್ತು ಗಿರಿಜಾ ಎಸ್ ದಂಪತಿಯ ಪುತ್ರ. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿಯಾಗಿರುವ ದೀಕ್ಷಿತಾ ಎಸ್ ಇವರು ಕಾರ್ಕಳದ ಗಿರಿಧರ್ ಶೆಟ್ಟಿಗಾರ್ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ. ಇವರು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top