ದುಷ್ಕರ್ಮಿಗಳ ದಾಳಿಗೆ ಬಲಿಯಾದ ಸುಹಾಸ್ ಶೆಟ್ಟಿಯ ಮನೆಗೆ ಅಸರೆಯಾದ ಕಾರ್ಕಳ ಬಂಟರ ಯಾನೆ ನಾಡವರ ಮಾತೃಸಂಘ
ಕಾರ್ಕಳ : ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಮನೆಗೆ ಕಾರ್ಕಳ ಬಂಟರ ಸಂಘದ ಪ್ರಮುಖರು ಭೇಟಿ ನೀಡಿದರು .
ಕಾರ್ಕಳ – ಹೆಬ್ರಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಿಜಯ್ ಶೆಟ್ಟಿಯವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ರೂ.1 ಲಕ್ಷ ಸಹಾಯಧನವನ್ನು ಸುಹಾಸ್ ಹೆತ್ತವರಿಗೆ ನೀಡಿ ಸಂತಾಪ ಸೂಚಿಸಿದರು .
ಇದೇ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘದ ಸೂರ್ಯಕಾಂತ್ ಶೆಟ್ಟಿ , ಹಿತೇಶ್ ಶೆಟ್ಟಿ , ವಿಖ್ಯಾತ್ ಶೆಟ್ಟಿ , ಸುಹಾಸ್ ಶೆಟ್ಟಿ , ದೇವೇಂದ್ರ ಶೆಟ್ಟಿ , ರಾಕೇಶ್ ಶೆಟ್ಟಿ, ರೋಹಿತ್ ಶೆಟ್ಟಿ ಮಿಯ್ಯಾರು, ಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.






























