
ದೀಪಾವಳೀ ಪ್ರಯುಕ್ತ ದ್ವಾದಶ ರಾಶಿಗಳ ಭವಿಷ್ಯ
ದೀಪಾವಳೀ ಆಚರಣೆಯ ದಿನಗಳು ಈ ರೀತಿಯಾಗಿದೆ :
- 30.10.2024…..ಸಾಯಂಕಾಲ ಜಲ ಪೂರಣಂ ರಾತ್ರೌ ಚಂದ್ರೋದಯೇ ತೈಲಾಭ್ಯಂಗ : [ಘಂಟೆ 05.17]
- 31.10.2024…..ನರಕ ಚತುರ್ದಶೀ ಯಮತರ್ಪಣಮ್ ದೀಪಾವಳೀ ಲಕ್ಷ್ಮೀ ಪೂಜಾ
- 01.11.2024…ದೀಪಾವಳೀ ಅಮಾವಾಸ್ಯೆ ಆಕಾಶ ದೀಪ :ಕಾರ್ತಿಕ ಸ್ನಾನಾರಂಭ :
- 02.11.2024…ಗೋ ಪೂಜಾ ,ಬಲೀಂದ್ರ ಪೂಜೆ ,ಅಂಗಡಿ ಪೂಜೆ ,ತುಲಸೀ ಪೂಜಾರಂಭ :
- 13.11.2024…ಉತ್ಥಾನ ದ್ವಾದಶೀ ,ತುಲಸೀ ಪೂಜಾ
ಮೇಷ :ಜನ್ಮ ರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವ ಗುರು ಹಾಗೂ ದ್ವಾದಶದಲ್ಲಿ ಸಂಚರಿಸುವ ಶನಿ ಈ ವರ್ಷ ಹಲವು ವಿಧದ ತಾಪತ್ರಯಗಳನ್ನುಕಷ್ಟ ನಷ್ಟಗಳನ್ನು ಸೂಚಿಸುವರು .ಪಂಚಮದ ಕೇತುವು ಮಕ್ಕಳ ಸಂಬಂಧ ಚಿಂತೆಗೆ ಕಾರಣನು.ದೈವ ಬಲವಿರುವುದಿಲ್ಲ.ಮನಸ್ಸಿಗೆ ನೆಮ್ಮದಿ ಕಡಿಮೆ.ಸಮೀಪದ ಬಂಧು ಅಥವಾ ಪ್ರೀತಿಪಾತ್ರರಿಗೆ ತೊಂದರೆಯಾಗುವ ಸೂಚನೆಯಿರುತ್ತದೆ . ಏಳೂವರೆ ಶನಿಯ ಪ್ರಭಾವದ ಕಾರಣ ಕೆಲಸ ಕಾರ್ಯಗಳಲ್ಲಿ ಜಾಡ್ಯತೆ ,ಬದುಕಿನಲ್ಲಿ ಅಸ್ತವ್ಯಸ್ತತೆ ,ಮನೋವ್ಯಾಕುಲತೆ ,ಇರುತ್ತದೆ ,ವಾಹನ ಚಾಲಕರು ಎಚ್ಚರವಹಿಸಬೇಕು. ಓಂ ಶಂ ಶನೈಶ್ಚರಾಯನಮ: ಪ್ರತಿನಿತ್ಯ 108 ಬಾರಿ ಹೇಳಬೇಕು ,ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು
ವೃಷಭ :ಈ ವರ್ಷ ದೈವ ಬಾಲ ಉತ್ತಮವಿದೆ .ಪ್ರಾರಂಭದ ಒಂದೂವರೆ ತಿಂಗಳು ಮತ್ತು ಮಧ್ಯದ ಒಂದೂವರೆ ತಿಂಗಳ ಹೊರತು ಉಳಿದಂತೆ ಕುಟುಂಬ ಸ್ಥಾನದ ಗುರುವು ಶುಭ ಫಲವನ್ನು ನೀಡಲಿದ್ದಾನೆ .ಶನಿಯು ಲಾಭ ಸ್ಥಾನದಲ್ಲಿ ಇದ್ದು ಶುಭಫಲದಾಯಕನು.ರಾಹು ಕೇತು ಮಿಶ್ರ ಫಲದಾಯಕರು .ಉದ್ಯೋಗ ವ್ಯವಹಾರದಲ್ಲಿ ಅನುಕೂಲಗಳು ,ಪತಿ ಪತ್ನಿಯರಲ್ಲಿ ಹೆಚ್ಚಿನ ಅನ್ಯೋನ್ಯತೆ ,ಮಕ್ಕಳಿಗೂ ಅನುಕೂಲವುಂಟಾಗುವುದು .ಆದಾಯ ಹೆಚ್ಚಾಗಲಿದೆ .ಮನೆಯಲ್ಲಿ ಶುಭ ಶೋಭಾನಾದಿ ಮಂಗಲ ಕಾರ್ಯಗಳು ನಡೆಯುವುವು.ಸಾಮಾಜಿಕ ಸ್ಥಾನ ಮಾನ ಗೌರವಗಳು ದೊರೆಯಲಿವೆ .ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯಲಿದೆ ..ಗಣಪತಿ ಮತ್ತು ಮಹಾವಿಷ್ಣು ದೇವರ ಸ್ತೋತ್ರ ಪಾರಾಯಣ ನಿತ್ಯವೂ ಮಾಡುವುದು ಶ್ರೇಯಸ್ಕರವಾಗಿದೆ .
ಮಿಥುನ : ಈ ವರ್ಷ ದೈವಾನುಗ್ರಹದ ಕೊರತೆ ಇರುತ್ತದೆ .12-1 ರ ಗುರು ದಶಮದ ಶನಿ ಹಾಗೂ ನವಮಾದ ರಾಹು ಪ್ರತಿಕೂಲ ಫಲದಾಯಕರು .ಉದ್ಯೋಗದಲ್ಲಿ ಬದಲಾವಣೆ ,ಸ್ತ್ರೀ ಸಂಬಂಧವಾಗಿ ತೊಂದರೆಗಳು ,ಧನ ವ್ಯಯ ಸ್ಟಾನಮಾನಗಳಿಗೆ ಹಾನಿ ,ಪರಸ್ಥಳ ಸಂಚಾರಾದಿ ಫಲಗಳು ಉಂಟಾಗುವುದು. ಮಾಡುವ ಕೆಲಸಗಳಲ್ಲಿ ಆಲಸ್ಯ ತೋರುವುದರಿಂದ ಹಾಗೂ ಶಾರೀರಿಕ ಕಷ್ಟಗಳಿಂದ ನಮಗೆ ಕೆಲವೊಂದು ನಷ್ಟಗಳು ಉಂಟಾಗುವುದು.ವಿದ್ಯೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರತಿಕೂಲ ಫಲಗಳು ಉಂಟಾಗಬಹುದು .ಶಿವ –ಸುಬ್ರಹ್ಮಣ್ಯ –ಮಹಾವಿಷ್ಣು ಕ್ಷೇತ್ರಗಳಲ್ಲಿ ಯಥಾ ಶಕ್ತಿ ಸೇವೆ ಸಲ್ಲಿಸುವುದರಿಂದ ಶುಭವಾಗಲಿದೆ .
ಕರ್ಕಾಟಕ : ಈ ವರ್ಷ ದೈವಾನುಗ್ರಹದ ಕೊರತೆ ಇರುತ್ತದೆ ಜನ್ಮ ರಾಶಿಯಿಂದ ಭಾಗ್ಯ ಸ್ಥಾನದಲ್ಲಿ ಸಂಚರಿಸುವ ಶನಿ ಹಾಗೂ ದ್ವಾದಶ –ಜನ್ಮ ರಾಶಿಗಳಲ್ಲಿ ಸಂಚರಿಸುವ ಗುರು ಹಾಗೂ 8-2 ರ ರಾಹು ಕೇತುಗಳು ಅನೇಕ ವಿಧದ ಕಷ್ಟ-ನಷ್ಟಗಳನ್ನು ಸೂಚಿಸುವರು .ಕೌಟುಂಬಿಕ ಸುಖವೂ ಅಲ್ಪವಾದಂತೆ ಕಾಣ ಬಹುದು .ಅನಗತ್ಯ ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭಗಳು ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ,ಸ್ತ್ರೀ /ಪುರುಷ ಸಂಬಂಧವಾಗಿ ತೊಂದರೆಗಳು ,ಮನಸ್ಸಿಗೆ ಖಿನ್ನತೆ ,ಅನಗತ್ಯ ಖರ್ಚು ವೆಚ್ಚಗಳು ಎದುರಾಗಲಿವೆ .ಗೋ ಸೇವೆ ,ಅನಾತರಿಗೆ –ಬಡವರಿಗೆ ಅನ್ನ ದಾನ ,ಗಣಪತಿ ,ಸ್ಕಂದ,ಮಹಾ ವಿಷ್ಣು ದೇವರ ಸೇವೆಯನ್ನು ಮಾಡುತ್ತಾ ಬರುವುದು ಒಳ್ಳೆಯದು .
ಸಿಂಹ : ವರ್ಷಾರಂಭದಲ್ಲಿ ಗುರುವು ದಶಮದಲ್ಲಿ ಇದ್ದು ಆನಂತರ ಲಾಭ ಸ್ಥಾನದ ಗುರುವು ದೈವಾನುಗ್ರಹವನ್ನು ಕೊಡಲಿದ್ದಾನೆ .ಎಲ್ಲಾ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು .ಗ್ರಹಿಸಿದ ಕಾರ್ಯಗಳು ಬಹಳ ಸುಲಭದಲ್ಲಿ ನೆರವೇರಲಿವೆ. ಕುಟುಂಬದಲ್ಲಿ ಹೊಸಬರ ಆಗಮನದ ನಿರೀಕ್ಷೆಯಿದೆ .ಆರ್ಥಿಕವಾಗಿ ಕೆಲವು ಅನುಕೂಲತೆಗಳು ಲಭಿಸಲಿವೆ . ಅಷ್ಟಮದ ಶನಿ,ಜನ್ಮ-ಸಪ್ತಮಗಳ ರಾಹು ಕೇತುಗಳಿಂದ ಕುಟುಂಬದಲ್ಲಿ ದು:ಖಕರ ಪ್ರಸಂಗಗಳು ಮನಸ್ತಾಪಗಳು ಎದುರಾಗುವುವು .ವಾಹನ ಚಾಲಕರು ಎಚ್ಚರವಾಗಿರಬೇಕು .ನರ ಎಲುಬಿನ ನೋವಿನ ಸಮಸ್ಯೆ ಬರಲಿದೆ ಶನಿ ಶಾಂತಿ ,ಗಣಪತಿ ಸೇವೆ ,ಸುಬ್ರಹ್ಮಣ್ಯ ಕ್ಷೇತ್ರ ದರ್ಶನದಿಂದ ಅನುಕೂಲವಾಗಲಿದೆ .
ಕನ್ಯಾ : ವರ್ಷಾರಂಭದಲ್ಲಿ ಮತ್ತು ವರ್ಷದ ಮಧ್ಯದಲ್ಲಿ ನವಮ-ಏಕಾದಶದ ಗುರುವು ದೈವಾನುಗ್ರಹವನ್ನು ಒದಗಿಸಿದರೂ ದಶಮದ ಗುರು ಮಿಶ್ರ ಫಲದಾಯಕನು . ಸಪ್ತಮದ ಶನಿ ದ್ವಿತೀಯದ ಕೇತು ಆಶುಭರು. ಈ ಅವಧಿಯಲ್ಲಿ ಗುಣ ದೋಷಗಳಿಂದ ಕೂಡಿದ ಮಿಶ್ರ ಫಲವನ್ನುಇವರು ಒದಗಿಸಲಿದ್ದಾರೆ .ಮನೋ ನಿಶ್ಚಿತ ಕೆಲಸಗಳು ,ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು .ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ .ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಯತ್ನ ಅಗತ್ಯವಿದೆ .ಎಲ್ಲಿಯೂ ತಾಳ್ಮೆಯನ್ನು ಕಳೆದು ಕೊಳ್ಳದಿರಿ .ಧನಹಾನಿ ಸಂತಾನ ಸಂಬಂಧ ದು:ಖ ಸ್ಥಾನ ಮಾನ ಹಾನಿಯಾಗುವ ಸಾಧ್ಯತೆ ಇರುವುದರಿಂದ ಗಣಪತಿ –ಶಿವ –ವಿಷ್ಣು ದೇವರ ಪಾರಾಯಣವನ್ನು ನಿತ್ಯವೂ ಮಾಡಿಕೊಂಡು ಬನ್ನಿರಿ .
ತುಲಾ : ಮೊದಲ ಒಂದೂವರೆ ತಿಂಗಳ ಹೊರತು ಉಳಿದಂತೆ ಸಾಕಷ್ಟು ದೈವಾನುಗ್ರಹವಿರುತ್ತದೆ .ಪ್ರಾರಂಭದಲ್ಲಿ ಮಯ್ 14 ರ ವರೆಗೆ ಅಷ್ಟಮದ ಗುರು ಆನಂತರ ಪಂಚಮದ ಶನಿಯಿಂದ ಆರೋಗ್ಯದಲ್ಲಿ ಏರುಪೇರು ,ವೃತ್ತಿ ಕ್ಷೇತ್ರದಲ್ಲಿ ಉದ್ಯೋಗ ವ್ಯವಹಾರದಲ್ಲಿ ಸೋಲು, ಅನೇಕ ರೀತಿಯಲ್ಲಿ ಚಿಂತೆ ಕಾಡ ಬಹುದು ,ಮುಂದೆ ಭಾಗ್ಯದ ಗುರು ಹಾಗೂ 6 ನೆಯ ಶನಿ ಫಲದಾಯಕರು .ಈ ಸಮಯದಲ್ಲಿ ವಿವಾಹಾದಿ ಶುಭ ಸಮಾರಂಭಗಳು ,ಉದ್ಯೋಗ ವ್ಯವಹಾರದಲ್ಲಿ ಅನುಕೂಲ ಉಂಟಾಗುವುದು .ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇರುತ್ತದೆ .ಮನೆಯಲ್ಲಿ ಶಾಂತಿ,ಸುಖ ಸಂತೋಷ ,ಗೌರವ ಲಭಿಸಲಿದೆ .ವಿಷ್ಣು ಸೇವೆ ,ಸುಬ್ರಹ್ಮಣ್ಯ ಸೇವೆ ಯಥಾ ಶಕ್ತಿ ನಡೆಸುವುದರಿಂದ ಶುಭವಾಗಲಿದೆ .
ವೃಶ್ಚಿಕ : ಗುರುವು ಮೇ 14 ರ ವರೆಗೆ ಸಪ್ತಮದಲ್ಲಿ ,ಅಕ್ಟೋಬರ್ 18 ರಿಂದ ದಶಂಬರ್ 5 ರ ವರೆಗೆ ಭಾಗ್ಯದಲ್ಲಿ ಇದ್ದು ಶುಭ ಫಲವನ್ನು ನೀಡಲಿದ್ದಾನೆ .ಈ ಸಮಯದಲ್ಲಿ ದೈವಾನುಗ್ರಹವಿರುತ್ತದೆ .ಕೆಲಸಗಳು ಅಡಚಣೆಗಳಿಲ್ಲದೆ ನಡೆಯುವುದು .ವಿವಾಹಾದಿ ಶುಭ ಕೆಲಸಗಳು ನಡೆಯುವುದು .ಸಂತಾನ ಲಾಭ ,ಧನ ಲಾಭ ಬರುವ ಸಾಧ್ಯತೆ ಇರುತ್ತದೆ .ಜನ್ಮ ರಾಶಿಯಿಂದ ಅಷ್ಟಮದ ಗುರು ,ಪಂಚಮದ ಶನಿ ಚತುರ್ಥದ ರಾಹು ಅಶುಭ ಪ್ರದರು .,ಚತುರ್ಥದ ರಾಹು ಅಶುಭ ಪ್ರದರು .ದೈವಾನುಗ್ರಹದ ಕೊರತೆ ಇರುತ್ತದೆ .ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಬೇಸರ ಇರುತ್ತದೆ . ತಾಯಿ-ತಂದೆ ಹಾಗೂ ಹಿರಿಯರ ಕುರಿತು ಜಾಗ್ರತೆ ಶ್ರದ್ಧೆ ವಹಿಸಬೇಕು ಶನಿ ಶಾಂತಿ.ರುದ್ರಾಭಿಷೇಕ ,ವಿಷ್ಣು ಸೇವೆ ಮಾಡುವುದರಿಂದ ಶುಭವಾಗಲಿದೆ .
ಧನು : ಗುರುವು ವರ್ಷಾರಂಭದ ಒಂದೂವರೆ ತಿಂಗಳು 6 ರಲ್ಲಿ ವರ್ಷದ ಮಧ್ಯದಲ್ಲಿ ಒಂದೂವರೆ ತಿಂಗಳು ಅಷ್ಟಮದಲ್ಲಿ ಆಶುಭನು ,ಉಳಿದಂತೆ ಜನ್ಮರಾಶಿಯಿಂದ ಸಪ್ತಮದಲ್ಲಿ ಸಂಚರಿಸುವ ಗುರು ದೈವಾನುಗ್ರಹವನ್ನು ನೀಡಲಿದ್ದಾನೆ , ತೃತೀಯದ ರಾಹುವೂ ಶುಭನು .ಭಾಗ್ಯ ಚೆನ್ನಾಗಿರುವಂತೆ ಅನಿಸುವುದು .ವಿವಾಹ ಶುಭ ಶೋಭಾನಾಡಿ ಕೌಟುಂಬಿಕ ಕಾರ್ಯಗಳು ನಡೆಯಲು ಸಕಾಲವಾಗಿದೆ .ಭೂ ವಾಹನಾದಿ ಸುಖಗಳು ಉಂಟಾಗುವುದು .6….8 ದ ಗುರು ಹಾಗೂ ವರ್ಷ ಪೂರ್ತಿ ಸುಖ ಸ್ಥಾನದ ಶನಿಯಿಂದ ಸ್ತ್ರೀ ಸುಖ ಗೃಹ ಸುಖಾದಿ ಗಳಿಂದ ವಂಚಿತರಾಗುವಿರಿ .ವಾಹನಾದಿಗಳಿಂದ ತೊಂದರೆ ಬರುವ ಸಾಧ್ಯತೆ ಇದೆ . ಅಶ್ವತ್ಥ ಸೇವೆ ,ರುದ್ರಾಭಿಷೇಕ ,ಗಣಪತಿ ಸೇವೆ ,ವಿಷ್ಣು ಸೇವೆ ಯಥಾ ಶಕ್ತಿ ನಡೆಸುವುದರಿಂದ ಶುಭವಾಗಲಿದೆ .
ಮಕರ : ಗುರುವು ಮೇ 14 ರ ವರೆಗೆ ಪಂಚಮದಲ್ಲಿ ,ಅಕ್ಟೋಬರ್ 18 ರಿಂದ ಒಂದೂವರೆ ತಿಂಗಳು ಸಪ್ತಮದಲ್ಲಿಯೂ ಶುಭಾನು.ವರ್ಷ ಪೂರ್ತಿ ತೃತೀಯದ ಶನಿಯು ಶುಭಾನು ,ಗೃಹದಲ್ಲಿ ಶುಭ ಸಮಾರಂಭಗಳು ನಡೆಯುವ ಸಮಯವಾಗಿದೆ .ಸಾಂಸಾರಿಕ ಕೌಟುಂಬಿಕ ಅಭಿವೃದ್ಧಿಯಿದೆ .ಭೂಮಿ ವಾಹನಾದಿ ಸುಖ ಸಂತಾನ ಸುಖ ,ಆರ್ಥಿಕ ಅಭಿವೃದ್ಧಿ ಕಾಣ ಬಹುದಾಗಿದೆ ವರ್ಷದ ಬಹುತೇಕ ಸಮಯ ಜನ್ಮ ರಾಶಿಯಿಂದ 6 ರಲ್ಲಿ ಸಂಚರಿಸುವ ಗುರು ದ್ವಿತೀಯ –ಅಷ್ಟಮಗಳ ರಾಹು ಕೇತುಗಳು ಕೆಲವೊಂದು ಅನಿರೀಕ್ಷಿತ ಅಶುಭ ಫಲಗಳಿಗೆ ಕಾರಣರಾಗುವರು ,ಗಣಪತಿ ಸೇವೆ,ವಿಷ್ಣು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಥಾ ಶಕ್ತಿ ಸೇವೆ ನಡೆಸುವುದರಿಂದ ಶುಭವಾಗಲಿದೆ .
ಕುಂಭ : ಗುರುವು ಮೇ 14 ರ ವರೆಗೆ ಚತುರ್ಥದಲ್ಲಿಯೂ ಅಕ್ಟೋಬರ್ 18 ರಿಂದ ಒಂದೂವರೆ ತಿಂಗಳು 6 ರಲ್ಲಿಯೂ ಆಶುಭನು. ವರ್ಷ ಪೂರ್ತಿ ಧನ ಸ್ಥಾನದಲ್ಲಿ ಸಾಡೇ ಸಾತ್ ಶನಿ ಜನ್ಮ – ಸಪ್ತಮಗಳ ರಾಹು ಕೇತುಗಳು ಎಲ್ಲರೂ ಪ್ರತಿಕೂಲ ಫಲಗಳನ್ನೇ ಸೂಚಿಸುವರು .ಆರೋಗ್ಯದ ಬಗ್ಗೆ ಜಾಗ್ರತೆ ಬೇಕು .ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು .ಮನೆಯವರೊಂದಿಗೆ ಹೊಂದಾಣಿಕೆಯು ಕಡಿಮೆಯಾಗದಂತೆ ತೋರುವುದು .ಪತನ –ಅಪಘಾತ ,ಅಂಗ ಭಂಗ ,ಮೋಸ ವಂಚನೆ ,ಕಾರ್ಯ ವಿಘ್ನ, ಕಳ್ಳ ತನ ಕಲಹ ಇತ್ಯಾದಿ ಅನುಭವವಾಗುವುದು .ಆದರೂ ವರ್ಷದ ಬಹುಪಾಲು ಜನ್ಮ ರಾಶಿಯಿಂದ 5 ರಲ್ಲಿ ಸಂಚರಿಸುವ ಗುರುವು ದೈವ ಬಲವನ್ನು ಒದಗಿಸುತ್ತಾನೆ .ನವಗ್ರಹ ಜಪ ,ವಿಷ್ಣು ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡುತ್ತಾ ಬರುವುದು ಉತ್ತಮವಾಗಿದೆ .
ಮೀನ : ಈ ವರ್ಷ ದೈವಾನುಗ್ರಹವಿಲ್ಲ ತೃತೀಯಾ-ಚತುರ್ಥದ ಗುರು ,ಜನ್ಮ ರಾಶಿಯಲ್ಲಿ ಸಾಡೇ ಸಾತ್ ಶನಿ ,ವ್ಯಯ ಸ್ಥಾನದ ರಾಹು ಎಲ್ಲರೂ ಪ್ರತಿಕೂಲರು .ವರ್ಷ ಮಧ್ಯದ ಒಂದೂವರೆ ತಿಂಗಳು ಮಾತ್ರಾ ಪಂಚಮದಲ್ಲಿ ಇರುವ ಗುರು ಶುಭದಾಯಕನು .ವೃತ್ತಿ –ಉದ್ಯೋಗದಲ್ಲಿ ಸ್ಪರ್ಧೆ –ಬದಲಾವಣೆ ,ಆರ್ಥಿಕ ಅಡಚಣೆಗಳು ,ವಾಸ ಸ್ಥಾನ ಬದಲಾವಣೆ , ಕಾರ್ಯಗಳಿಗೆ ವಿಘ್ನಗಳು ತೊಂದರೆಗಳು ಎದುರಾಗುವುವು .ಉದ್ಯೋಗ ಸಂಬಂಧ ಕಿರಿಕಿರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ .ಆರೋಗ್ಯ ಸಮಸ್ಯೆ ಬರುವುದರಿಂದ ಮನೋಬಲ ಕಳೆದುಕೊಳ್ಳದಂತೆ ನವಗ್ರಹ ಜಪ ,ಶನಿ ಜಪ,ವಿಷ್ಣು ಸೇವೆ ,ಪಾರಾಯಣ ಸುಬ್ರಹ್ಮಣ್ಯ ದೇವರ ಯಥಾ ಶಕ್ತಿ ಸೇವೆ ಮಾಡುತ್ತಾ ಬನ್ನಿರಿ.








































