





ದೀಪಾವಳಿಗೆ ಪಟಾಕಿಗಳನ್ನು ಏಕೆ ಸುಡಬೇಕು?
ನಮ್ಮ ದೀಪಾವಳಿಗೂ ಪಟಾಕಿಗಳಿಗೂ ಯಾವ ಸಂಬಂಧವೂ ಇಲ್ಲ. ದ್ವಾಪರ ಯುಗದ ದೀಪಾವಳಿಗೆ ಕಲಿಯುಗದ ಪಟಾಕಿಗಳಿಗೆ ಸಂಬಂಧವೆಲ್ಲಿದೆ ?ಸಂಬಂಧವಿದ್ದರೂ ಸತ್ಪಲಿತವಿದೆ. ಬೆಳಕು ಜ್ಞಾನದ ಪ್ರತೀಕ! ಸಂತೋಷದ ಸಂಕೇತ!
ಕತ್ತಲು (ಕಪ್ಪು)ಅಜ್ಞಾನದ ಪ್ರತೀಕ! ದುಃಖದ ಸಂಕೇತ!
ಕ್ರಿ.ಶ . 9 ನೆಯ ಶತಮಾನದಲ್ಲಿ ಪ್ರಥಮವಾಗಿ ಚೈನಾ ದೇಶದವರು ಪಟಾಕಿಯನ್ನು ಕಂಡು ಹಿಡಿದರೆ . 15ನೇ ಶತಮಾನದಿಂದ ಪಟಾಕಿಗಳ ತಯಾರಿಕೆ ಎಲ್ಲಾ ದೇಶಗಳಿಗೂ ಬಂದಿದೆ. ಭಾರತ ದೇಶದಲ್ಲಿ ಕೇವಲ 500 ವರ್ಷಗಳಿಂದ ಪಟಾಕಿಗಳನ್ನು ತಯಾರಿಸುವುದು ಪ್ರಾರಂಭವಾಗಿದೆ .ದೀಪಾವಳಿ ಹಬ್ಬಕ್ಕೆ ಮಾತ್ರ ಪಟಾಕಿಗಳನ್ನು ಏಕೆ ಸುಡಬೇಕು ದೀಪಾವಳಿ ಹಬ್ಬ ನಮಗೆ ಬಂದ ಕಾರಣವೇನು? ದೀಪಾವಳಿ ಯಾಕೆ ಮಾಡಬೇಕು? ದೀಪಾವಳಿ ಹಬ್ಬ ಮಾಡುವುದಕ್ಕೆ ಒಂದು ಶಾಸ್ತ್ರೀಯ ಪ್ರಯೋಜನವಿದೆ. ಸರ್ವ ಮಾನವರ ಹಿತವಿದೆ! ಧಾರ್ಮಿಕ ಲಾಭವಿದೆ. ಆರೋಗ್ಯ ರಹಸ್ಯವಿದೆ .ಮಳೆಗಾಲ ಮುಗಿಯುತ್ತದೆ. ಶರದ ಋತುನಲ್ಲಿ ಬರುವ ದೀಪಾವಳಿ ಹಬ್ಬದ ಸಮಯಕ್ಕೆ ಭೂಮಿಯಿಂದ ಕೋಟಿ ಕೋಟಿ ಕ್ರಿಮಿ ಕೀಟಗಳು ಹುಟ್ಟಿ ಬರುತ್ತವೆ. ಈ ಕ್ರಿಮಿಕೀಟ ಗಳಿಂದ ಮನುಷ್ಯರಿಗೂ ಮತ್ತು ಪಶುಸಂಪತ್ತಿಗೂ , ಆಹಾರ ಬೆಳೆಗಳಿಗೂ ವಿಪರೀತವಾದ ಹಾನಿಯಾಗುತ್ತದೆ .ಈ ಸಮಸ್ಯೆಯ ನಿವಾರಣಾರ್ಥವಾಗಿ ನಮ್ಮ ಪೂರ್ವಜರು ದೀಪಗಳ ಹಬ್ಬವನ್ನು ಪ್ರಕಾಶ ಪಡಿಸಿದ್ದಾರೆ ತದನಂತರ ಪಟಾಕಿಗಳು ಸೃಷ್ಟಿಯಾಗಿ ದೀಪಾವಳಿ ಹಬ್ಬದಲ್ಲಿ ಭಾಗವಹಿಸಿದವು .ಹಳೆಯ ಕಾಲದಲ್ಲಿ ದೀಪಾವಳಿಗೆ ಔಡಲ ಎಣ್ಣೆ ಅರಳಿ ಎಣ್ಣೆ , ಎಳ್ಳಿನ ಎಣ್ಣೆ ಮುಂತಾದ ಎಣ್ಣೆಗಳಿಂದಲೇ ನೂರಾರು ದೀಪಗಳನ್ನು ಹಚ್ಚುತ್ತಿದ್ದರು. ದೀಪಾವಳಿಯ ದೀಪಾರಾಧನೆಗೆ ಔಡಲ ಎಣ್ಣೆಯೇ ಪ್ರಶಸ್ತವೆಂದು ಹೇಳುತ್ತಾರೆ. ಚಿತ್ರ ವಿಚಿತ್ರವಾದ ಹುಳುಗಳು ಕೀಟಗಳು ದೀಪಗಳ ಬೆಳಕಿಗೆ ಆಕರ್ಷಿತವಾಗಿ ಬಂದು ಸಾಯುತ್ತವೆ. ನಾವು ಸುಡುವ ಪಟಾಕಿಗಳಲ್ಲಿ ಗಂಧಕವೆಂಬ ರಾಸಾಯನಿಕ ಪದಾರ್ಥವಿರುತ್ತದೆ ಈ ಗಂಧಕದ ಹೊಗೆಗೆ ಕ್ರಿಮಿಗಳು ನಾಶವಾಗುತ್ತವೆ. ನಮ್ಮ ಹತ್ತಾರು ರೋಗಗಳು ವಾಸಿಯಾಗುತ್ತವೆ. ಮಳೆಗಾಲದಲ್ಲಿ ನಾವು ಕುಡಿಯುವ ಹೊಸ ನೀರಿನಿಂದಾಗಿ ವಾಂತಿ, ಭೇದಿ, ಕಣ್ಣಿನ ರೋಗ ,ಅಜೀರ್ಣ ರೋಗ ,ನೆಗಡಿ ಮುಂತಾದ ರೋಗಗಳಿಗೆ ಔಡಲ ಎಣ್ಣೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ . ಅಶ್ವಯುಜ ಅಮಾವಾಸ್ಯೆ ದಿoದ ಕಾರ್ತಿಕ ಅಮಾವಾಸ್ಯೆದವರೆಗೂ ಈ ತೈಲ ದೀಪಗಳನ್ನು ಬೆಳಗುತ್ತಾರೆ.
ದೀಪಾವಳಿಯ ಕಥೆಯನ್ನು ಕೇಳೋಣ ಉತ್ತರ ಭಾರತ ದೇಶದ ಮಹಾರಣ್ಯ ಪ್ರದೇಶದಲ್ಲಿ ನರಕನೆಂಬುವನು ರಾಕ್ಷಸ ಪ್ರವೃತ್ತಿಯಲ್ಲಿ ಭೈರವ ಪೂಜೆಯನ್ನು ಮಾಡುತ್ತಾ ಕ್ಷುದ್ರ ಮಂತ್ರೋಪ ಶಕ್ತನಾಗಿ ಕನ್ಯೆಯರನ್ನು ಅಪಹರಿಸುತ್ತ ಪ್ರಜಾ ಕಂಟಕನಾಗಿದ್ದನು .ಅಂಗ ,ವಂಗ ,ಕಳಿಂಗ, ಕಾಶ್ಮೀರ, ಕರ್ನಾಟಕ ಕಾಂಬೋಜ , ಕುರುವೀರ ಮದ್ರ , ಮಹಿಶ್ಮತಿ, ಮಗಧ,ಮಧುರ, ಮಾವೆಲ್ಲಿಕ, ಮತ್ತ್ಯ ಆಂಧ್ರ ,ಅಂಧಕ ಲಾಟ, ಮರಾಠ ,ದ್ರಾವಿಡ , ಕೊಂಕಿ ಣಿ, ಶರಭ, ಸಾವೇರ, ಸೌರಾಷ್ಟ್ರ, ಪುಂಡ್ರ,ಯವನ, ಕಗಣ ಮುಂತಾದ ಭಾರತದ 56 ರಾಜ್ಯಗಳಿಂದ 16,000 ಕನ್ಯೆಯರನ್ನು ಭೈರವನಿಗೆ ಬಲಿಕೊಡಲು ಸಿದ್ದ ಮಾಡಿದನು. ಈ ನರಕನು ಭೂದೇವಿ ಅಂಶದಿಂದ ಜನಿಸಿದವನು .ತನ್ನ ತಾಯಿ ಅಲ್ಲದೆ ಬೇರೆ ಯಾರಿಂದಲೂ ಮರಣವೂ ಬರದಂತೆ ಬ್ರಹ್ಮನಿಂದ ವರವನ್ನು ಪಡೆದನು .
ಶ್ರೀಮನ್ನಾರಾಯಣ ಸ್ವರೂಪನಾದ ಕೃಷ್ಣನಿಗೆ ನರಕಾಸುರನ ಪಾಪ ವೃತ್ತಾಂತವೆಲ್ಲ ತಿಳಿಯಿತು. ಶ್ರೀಕೃಷ್ಣನ ಕೈಯಲ್ಲಿ ಶಿಶುಪಾಲ, ದಂತ ವೃಕ್ತ,ಕಾಲಯವನ ,ಜರಾಸಂಧ, ಕಂಸ , ಪೂತನ, ಶಕಟಾಸುರ ದೇನು ಕಾಸುರ ಅಪೂಸುರ ಮುಂತಾದ ರಾಕ್ಷಸರು ಸಾವನ್ನಪ್ಪಿದ್ದಾರೆ ಶ್ರೀ ಕೃಷ್ಣನ ಅವತಾರವೇ ಧರ್ಮದ ಉಳಿವಿಗೆ, ಅಧರ್ಮದ ಅಳಿವಿಗೆ ಆಗಿದೆ ಯಲ್ಲವೇ! ಆದರೆ ಕೃಷ್ಣನ ಕೈಯಲ್ಲಿ ನರಕನಿಗೆ ಸಾವಿಲ್ಲ ಕೃಷ್ಣನ ಹೆಂಡತಿ ಸತ್ಯ ಭಾಮೆ ಭೂದೇವಿಯ ಅಂಶದಿಂದ ಜನ್ಮಿಸಿದವಳು. ಈ ಕಾರಣದಿಂದ ಸತ್ಯಭಾಮೆಯ ಕೈಯಲ್ಲಿಯೇ ನರಕನ ಮರಣವಾಗಬೇಕಾಗಿದೆ.ಶ್ರೀ ಕೃಷ್ಣನು ಸತ್ಯಭಾಮ ಸಮೇತನಾಗಿ ಸೈನ್ಯದೊಂದಿಗೆ ಹೋಗಿ ನರಕಾಸುರನನ್ನು ಸತ್ಯಭಾಮೆಯ ಕೈಯಿಂದ ಪರಲೋಕಕ್ಕೆ ಕಳುಹಿಸಿದನು. ನರಕಾಸು ನನ್ನ ಪೀಡೆಯಿಂದ ಲೋಕಕ್ಕೆ ವಿಮುಕ್ತಿ ದೊರೆಯಿತು. ನರಕಾಸುರನ ವಧೆಯಿಂದ ಲೋಕಕ್ಕೆ ಕಲ್ಯಾಣವಾಯಿತು. ಸರ್ವ ಜನರು ಸಂತೋಷದಿಂದ ಮೈಮರೆತರು. ಪ್ರಪಂಚದ ನಾನಾ ರಾಜ್ಯಗಳಿಂದ ಅಪರಿಸಿಕೊಂಡು ತಂದು ಪಾತಾಳದ ಲ್ಲಿ ಬಂಧನದಲ್ಲಿಟ್ಟ 16000 ರಾಜಕನ್ಯೆಯರು ವಿಮುಕ್ತಿಗೊಂಡರು ನರಕಾಸುರನ ವಧೆಯಿಂದ ಸಮಸ್ತ ರಾಜ್ಯಗಳ ಪ್ರಜೆಗಳು ಅಶ್ವಯುಜ ಅಮಾವಾಸ್ಯೆಯ ದಿನದಂದು ದೀಪಗಳನ್ನು ಬೆಳಗಿಸಿ ಸಂತೋಷಪಡುವುದು ರೂಢಿಯಾಗಿ ಬಂತು. ತದನಂತರದ ಕಾಲದಲ್ಲಿ ಪಟಾಕಿಗಳು ಈ ಹಬ್ಬಕ್ಕೆ ಸೇರ್ಪಡೆಯಾದವು. ದೀಪಾವಳಿಗೆ ಪಟಾಕಿಗಳು ಸುಡಲೇ ಬೇಕಂಬ ನಿಯಮವೇನು ಇಲ್ಲ. (ಅತಿಯಾದ ರಾಸಾಯನಿಕ ವಸ್ತುಗಳ ಹೊಗೆಯಿಂದ ಹಾಗೂ ಅತಿಯಾದ ಶಬ್ದಗಳಿಂದ ಪ್ರಾಣಿ ಪಕ್ಷಿಗಳಿಗೆ ಅಶಕ್ತರಿಗೆ, ಗರ್ಭಿಣಿ ಸ್ತ್ರೀಯರಿಗೆ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತದೆ.ಪರಿಸರ ಮಾಲಿನ್ಯವು ಆಗುವುದು ಖಚಿತ ಆದ್ದರಿಂದ ವಿದ್ಯಾವಂತರಾದ ನಾವು ವಿವೇಚನೆಯಿಂದ ವರ್ತಿಸ ಬೇಕು.
ಈತ್ತೀಚೀನ ದಿನಗಳಲ್ಲಿ ಪಟಾಕಿಗೆ ಎಷ್ಟೆಲ್ಲ ನಿಷೇಧಗಳಿವೆ. ಕಳೆದ ವರ್ಷದ ದೀಪಾವಳಿಯಲ್ಲಿ ಬಹುತೇಕ ರಾಜ್ಯಗಳು ಪಟಾಕಿಯನ್ನು ನಿಷೇಧಿಸಿದ್ದರೂ, ಒಟ್ಟಾರೆ ಇಡೀ ದೇಶದಲ್ಲಿ 6 ಸಾವಿರ ಕೋಟಿ ರೂ. ಮೌಲ್ಯದ ಪಟಾಕಿಗಳನ್ನು ಸಿಡಿಸಲಾಗಿತ್ತು. ಅಂಥ ನಿಷೇಧ ಈ ಬಾರಿಯೂ ಇದ್ದೇ ಇದೆ. ಆದರೂ, ಕಳೆದ ವರ್ಷಕ್ಕಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆ ಇದೆ. ಪಟಾಕಿ ಹಚ್ಚುವುದು ಕೇವಲ ದೀಪಾವಳಿಯಲ್ಲಷ್ಟೇ ಅಲ್ಲ. ಭಾರತ ಪಂದ್ಯಗಳನ್ನು ಗೆದ್ದಾಗ, ಚುನಾವಣೆಗಳಲ್ಲಿ ಗೆಲುವು ಕಂಡಾಗ, ಮದುವೆಯಂಥ ಶುಭ ಸಮಾರಂಭಗಳಲ್ಲೂ ಪಟಾಕಿಗಳ ಸದ್ದು ಕೇಳುತ್ತದೆ. ದೀಪಾವಳಿ ಶ್ರೀಮಂತರ ಹಬ್ಬ. ಸಂಕ್ರಮಣವು ಬಡವರ ಹಬ್ಬ. ದೀಪಾವಳಿಯನ್ನು ಉತ್ತರ ಭಾರತೀಯರು ಅತಿ ವೈಭವದಿಂದ ಮಾಡುತ್ತಾರೆ. ಈ ಹಬ್ಬಕ್ಕೆ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ವ್ಯಾಪಾರಸ್ಥರು ತಮ್ಮ ಲಾಭ ನಷ್ಟಗಳ ಪರಿಶೀಲನೆ ಮಾಡುತ್ತಾರೆ . ಈ ಹಬ್ಬಕ್ಕೆ ಕೆಲವರು ತಮಗೆ ಸಾಧ್ಯವಾದಷ್ಟು ಬೆಳ್ಳಿ ಬಂಗಾರ ಖರೀದಿ ಮಾಡುತ್ತಾರೆ . ದೀಪಾವಳಿ ಮಕ್ಕಳ ಹಬ್ಬ!

ಡಾ. ಮಾಲತಿ ಪೈ ಕಾರ್ಕಳ


‘


































