ದರೋಡೆಗೆ ಸಾಥ್ ನೀಡಿದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಹಿತ ಏಳು ಮಂದಿ ಆರೋಪಿಗಳ ಬಂಧನ

Picture of RB NEWS

RB NEWS

Bureau Report

ಸುದ್ದಿಗೋಷ್ಠಿ ನಡೆಸಿದ ಅವರು, ದರೋಡೆ ಪ್ರಕರಣಲ್ಲಿ ಭಾಗಿಯಾದ ಹೆಡ್ ಕಾನ್ಸ್‌ಟೇಬಲ್, ಹೋಂ ಗಾರ್ಡ್ ಸಹಿತ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣ ಬಯಲಿಗೆಳೆಯಲಾಗಿದ್ದು, ಇಲಾಖೆಯ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ ಭಾರಿ ಮೊತ್ತದ ನಗದು ಸೇರಿದಂತೆ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪೊಲೀಸ್‌ ಇಲಾಖೆಗೆ ಎಚ್ಚರಿಕೆ ಸಂದೇಶ ಕೂಡ ನೀಡಲಾಗಿದೆ ಎಂದರು.

ಪ್ರಕರಣದ ಹಿನ್ನಲ್ಲೆ: ರಘು ಎಂಬ ಬಂಗಾರ ಅಂಗಡಿಯ ಮಾಲಕ ಇತ್ತೀಚೆಗೆ ಬೈಕ್ ಮೇಲೆ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು.

ಆಂಧ್ರ ಗಡಿಯ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗುತ್ತಿರುವಾಗ ಅವರಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಣ, ಒಡೆವೆ ದರೋಡೆ ಮಾಡಲಾಗಿತ್ತು.

ಪ್ರಮುಖ ಆರೋಪಿ ತೌಸೀಫ್ ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕ್ ಅಲಿ ರೆಹಮಾನ್, ಆರೀಫ್ ಖದೀಮರಿದ್ದ ತಂಡ, ಸಿನಿಮೀಯ ರೀತಿಯಲ್ಲಿ ಈ ದರೋಡೆ ಮಾಡಿತ್ತು.

ಕಳ್ಳರು ಸೆರೆ ಸಿಕ್ಕಾಗ ಈ ಕಳ್ಳತನಕ್ಕೆ ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ಸಾಥ್ ನೀಡಿದ್ದರು ಎಂಬ ಸತ್ಯ ತನಿಖೆ ವೇಳೆ ಬಯಲಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top