ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ರಾಜ್ಯ ಸರಕಾರವನ್ನು ಎಚ್ಚರಿಸಿದ ಸಿಪಿಐ(ಎಂ) ಮುಖಂಡ ಮುನೀರ್ ಕಾಟಿಪಳ್ಳ

Picture of RB NEWS

RB NEWS

Bureau Report

ಮಂಗಳೂರು : ಮಂಗಳೂರಿನಲ್ಲಿ ಕ್ರಿಮಿನಲ್ ಗಳಿಗೆ ಯಾವ ಭಯವೂ ಇಲ್ಲ. ಇಲ್ಲಿ ಮೂರನೆ ದರ್ಜೆಯ ಕ್ರಿಮಿನಲ್ ಗಳು ಆಟೋ ಚಾಲಕನನ್ನು ಬಾಡಿಗೆ ನೆಪದಲ್ಲಿ ಕರೆದೊಯ್ದು ಹತ್ಯೆ ಮಾಡುತ್ತಾರೆ. ಪರ ಊರಿನ ಹೆಣ್ಣುಮಗಳನ್ನು ಕಾಮುಕ ಗಂಡಸರ ಗುಂಪು ಎಳೆದೊಯ್ದು ಗ್ಯಾಂಗ್ ರೇಪ್ ಮಾಡಿ ಬಿಸಾಡುತ್ತದೆ. ಐಪಿಎಲ್ ಹಿನ್ನಲೆಯಲ್ಲಿ ವೈಟ್ ಕಾಲರ್ ಬುಕ್ಕಿಗಳು ಮಂಗಳೂರಿನಲ್ಲಿ ವ್ಯವಸ್ಥಿತವಾದ ಬೆಟ್ಟಿಂಗ್ ಜಗತ್ತನ್ನೆ ನಿರ್ಮಾಣ ಮಾಡಿಕೂತಿದ್ದಾರೆ. ನದಿಗಳನ್ನು ಅಕ್ರಮವಾಗಿ ಬಗೆದು ರಾಜೋರೋಷವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇಸ್ಪೀಟು, ಮಸಾಜ್ ಪಾರ್ಲರುಗಳು ನಿರಾತಂಕವಾಗಿ ದಂಧೆ ನಡೆಸುತ್ತವೆ. ಮಾದಕ ದ್ರವ್ಯದ ಸಣ್ಣ ಪುಟ್ಟ ಕೊಂಡಿಗಳನ್ನು ಹಿಡಿಯಾಲಗುತ್ತದೆಯೆ ಹೊರತು, ಆ ಮಾಫಿಯಾದ ಬಾಸ್ ಗಳ ಕೂದಲೂ ಕೊಂಕುವುದಿಲ್ಲ ಎಂದು ಸಿಪಿಐ(ಎಂ) ಮುಖಂಡ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗ ಉಳ್ಳಾಲದಲ್ಲಿ ನಡೆದಿರುವ ಗ್ಯಾಂಗ್ ರೇಪ್ ಇಡೀ ಮಂಗಳೂರು ನಾಚಿಕೆಯಿಂದ ಮುಖ ಮುಚ್ಚುವಂತೆ ಮಾಡಿ ಬಿಟ್ಟಿದೆ. ಕಾನೂನು ಸುವ್ಯವಸ್ಥೆಯ ಹುಳುಕುಗಳನ್ನೆಲ್ಲ ಹೊರ ಹಾಕಿದೆ. ಇದಕ್ಕೆಲ್ಲ ನೇರ ಹೊಣೆಗಾರರಾದ ಪೊಲೀಸ್ ಕಮೀಷನರ್ ಅಗ್ರವಾಲ್ ರನ್ನು ಇಲ್ಲಿನ ರಾಜಕೀಯ “ಬಾಸ್” ಗಳು ಅಕ್ಕರೆಯಿಂದ ಸಲಹುತ್ತಲೆ ಇದ್ದಾರೆ. ಕೆಲವು ಅವಕಾಶವಾದಿಗಳು, ಪ್ರಚಾರ ಪ್ರಿಯರು ಹೂ ಹಾರ ಹಾಕಿ ಸನ್ಮಾನ ಬೇರೆ ಮಾಡಿದ್ದಾರೆ, ತಾವೇ ಸ್ವತಹ ಹಾಸ್ಯಾಸ್ಪದರಾಗಿದ್ದಾರೆ.

ತನ್ನ ನಿರ್ಲಕ್ಷ್ಯದಿಂದ ಹೆಸರು ಕೆಡಿಸಿಕೊಂಡಿರುವ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಈಗಲಾದರು ಎಚ್ಚೆತ್ತುಕೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರು ಪೊಲೀಸ್ ಇಲಾಖೆಗೆ ಸರಿಯಾದ ಚಿಕಿತ್ಸೆ ಮಾಡಲಿ. ಇಲ್ಲದಿದ್ಧಲ್ಲಿ ಮತ್ತೊಮ್ಮೆ ಪೊಲೀಸ್ ಕಮೀಷನರ್ ಹಠಾವೊ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top