ತ್ರೋಬಾಲ್ ಪಂದ್ಯಾಟ:
ಕಲಂಬಾಡಿ ಪದವು ಸ.ಹಿ.ಪ್ರಾ.ಶಾಲೆಗೆ ಪ್ರಥಮ
ಕಾರ್ಕಳ : ಬೆಳ್ಮಣ್ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ ಆಗಮಿಸಿದ ಕಲಂಬಾಡಿ ಪದವು ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿಯರ ತಂಡವನ್ನು ಸ್ವಾಗತಿಸಿ ಅಭಿನಂದಿಸಲಾಯಿತು.
ಎಸ್ ಡಿಎಂ ಸಿ ಅಧ್ಯಕ್ಷ ಸಂಗೀತ ಆಚಾರ್ಯ, ಉಪಾಧ್ಯಕ್ಷ ಜಯಂತ್ ನಾಯಕ್, ಮಾಜಿ ಎಸ್ಡಿಎಂಸಿ ಅಧ್ಯಕ್ಷ ದಯಾನಂದ ನಾಯಕ್ , ಉಪಾಧ್ಯಕ್ಷರ ಆಶಾಮೂಲ್ಯ, ಎಸ್ ಡಿ ಎಂಸಿ ಸದಸ್ಯರಾದ ರಾಜೇಶ್ ಆಚಾರ್ಯ , ದಿನೇಶ್ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಬಿ ಉಪಸ್ಥಿತರಿದ್ದರು.
ಶಿಕ್ಷಕರಾದ ವಿಜಯಲಕ್ಷ್ಮಿ ಸ್ವಾಗತಿಸಿದರು. ಆಶಾ ವಂದಿಸಿದರು. ನಮಿತಾ ನಿರೂಪಿಸಿದರು.































