ತೋಕೂರು : ಓವರ್ ಹೆಡ್ ಟ್ಯಾಂಕ್ ಶಿಲಾನ್ಯಾಸ
ಮೂಡುಬಿದಿರೆ : ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಗ್ರಾಮದ ಸರ್ಕಾರಿ ಹಿಂದೂಸ್ತಾನಿ ಶಾಲೆಯ ಬಳಿ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ನಿಧಿಯಿಂದ ರೂ. 25 ಲಕ್ಷದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಅನುದಾನ ಸದ್ಬಳಕೆಯಾಗಿ ಗ್ರಾಮದ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.





































