ತೆಂಗಿನ ಮರದಿಂದ ಬಿದ್ದು ಬದುಕಿನಲ್ಲಿ ಅಂತ್ಯ
ಮಂಗಳೂರು : ಕೋಟೆಕಾರು ಸಮೀಪದ ಕನೀರುತೋಟದಲ್ಲಿ ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ದಾರುಣ ರೀತಿಯಲ್ಲಿ ಅಂತ್ಯ ಕಂಡ ಘಟನೆ ಎ.11ರಂದು ಸಂಭವಿಸಿದೆ.
ಕೊಲ್ಯ ಕನೀರುತೋಟದ ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ್ (46) ಬದುಕಿನಲ್ಲಿ ಅಂತ್ಯ ಕಂಡು ದುರ್ದೈವಿ.
ತನ್ನ ಮನೆ ಸಮೀಪದ ತೋಟವೊಂದರ ಬಳಿ ಶೇಂದಿ ತೆಗೆಯುತ್ತಿದ್ದಾಗ ಆಯತಪ್ಪಿ ತೆಂಗಿನ ಮರದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷಗಳಿಂದ ಯಶೋಧರ್ ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದರು. ಈ ಹಿಂದೆ ಕೆಲಸದ ವೇಳೆ ಕಡಿಮೆ ರಕ್ತದೊತ್ತಡದಿಂದಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಹೀಗಾಗಿ ಈಗಲೂ ಅದೇ ಕಾರಣದಿಂದ ಆಯತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.





































