ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರ್ಟಿ ಅಮಾವಾಸ್ಯೆ

Picture of RB NEWS

RB NEWS

Bureau Report

ಕಾರ್ಕಳ : ಹಿಂದಿನವರು ಆರಂಭಿಸಿಕೊಂಡು ಬಂದ ಆಟಿ ಅಮಾವಾಸ್ಯೆಯ ಕಷಾಯ ಕುಡಿಯುವ ಕ್ರಮ ಇಂದಿಗೂ ನಮ್ಮಲ್ಲಿದೆ ತುಳುನಾಡಿನಲ್ಲಿ ವರ್ಷದ ಮೊದಲ ಹಬ್ಬ ಆರಂಭವಾಗುವುದೇ ಈ ಆರ್ಟಿ ಅಮಾವಾಸ್ಯೆ ಯಂದು. ಸೂರ್ಯೋದಯಕ್ಕೆ ಮುನ್ನ ಕಾಲ ವೃಕ್ಷ ಅಥವಾ ಹಾಳೆ ಮರದ ಕೆತ್ತೆಯ ಕಷಾಯ ಕುಡಿಯುವುದು ಸಂಪ್ರದಾಯ ಎಂದು ನಾಟಿವೈದ್ಯ ಶುಭಾ ಕೆದಿಲಾಯ ಆಟಿಯ ಮಹತ್ವ ಕುರಿತು ಮಾಹಿತಿ ನೀಡಿದರು.

: ತುಳುವರಿಗೆ ಆಟಿ ಎಂದರೆ ಒಂದು ಮಹತ್ವದ ತಿಂಗಳು. ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆಯುವುದಿಲ್ಲ. ಹೆಣ್ಣು ಮಕ್ಕಳು ತವರು ಮನೆಗೆ ಬರುತ್ತಿದ್ದರು ಅತ್ತಿಗೆ ನಾದಿನಿಯರು ಚೆನ್ನೆಮಣೆ ಆಡುವ ಸಂಭ್ರಮವಿತ್ತು. ಮಳೆಗಾಲಕ್ಕೆಂದು ಶೇಖರಿಸಿದ್ದ ಸೌತೆಕಾಯಿ, ಕುಂಬಳಕಾಯಿ ಮುಂತಾದ ತರಕಾರಿಗಳು ಮುಗಿದು ಹೋಗಿರುತ್ತಿತ್ತು.

ಅಲ್ಲದೆ ಹಾಕಿದ್ದ ಹಲಸಿನ ತೊಳೆ ಮಾವಿನಕಾಯಿ ಗಳಿಂದ ತಿಂಡಿಗಳನ್ನು ಮಾಡುತ್ತಿದ್ದರು. ಪ್ರಕೃತಿ ಸಸ್ಯ ಜನ್ಯಗಳಿಂದ ಮಾಡಿದ ಆಹಾರ ತಿನ್ನುವುದರಿಂದ ಅಂದಿನ ಜನರು ಬಹುಕಾಲ ಆರೋಗ್ಯದಿಂದ ಬದುಕುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ್ ಆಟಿಯ ಮಹತ್ವ ಮತ್ತು ಆಟಿ ಅಡುಗೆಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.

ಶಾಂತಲಾ ಮತ್ತು ಗೆಳತಿಯರ ಪ್ರಾರ್ಥನೆಗೈದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾವೇರಿ ಬಳಗದವರು ಬಗೆ ಬಗೆಯ ಅಡುಗೆಯ ಸ್ಪರ್ಧೆ ಏರ್ಪಡಿಸಿದ್ದರು. ಸುಲಭ ದಾಮಲೆ ಬಹುಮಾನ ಪ್ರಯೋಜಿಸಿದ್ದರು.

ಮಳೆಗಾಲದ ಅಪರೂಪದ ತಿಂಡಿಗಳಾದ ಹಲಸಿನ ಬೀಜದ ಬೋಂಡ,.. ಬಾಳೆ ಹೂವಿನ ಕಟ್ಲೆಟ್.. ನುಗ್ಗೆ ಸೊಪ್ಪಿನ ಪತ್ರೊಡೆ.. ಹಲಸಿನ ತೊಳೆಯ ಉನ್ಲಿಗ. ಕೆಸುವಿನ ಪತ್ರೊಡೆ.. ಆಟಿಗಂಜಿ.. ಹಲಸಿನ ಹಣ್ಣಿನ ಮುಳ್ಕ… ಚ ಗಟ್ಟೆ ಸೊಪ್ಪಿನ ವಡೆ… ಕಷಾಯ ಮುಂತಾದ ಹಲವು ಬಗೆಯ ಗ್ರಾಮೀಣ ತಿಂಡಿಗಳನ್ನು ಸದಸ್ಯರು ಹಾಗೂ ತೀರ್ಪುಗಾರರು ಬಾಯಿ ಚಪ್ಪರಿಸಿಕೊಂಡು ತಿಂದರು .ಪ್ರತಿ ತಿಂಗಳು ಅಧ್ಯಕ್ಷರು ನೀಡುವ ಅದೃಷ್ಟವಂತ ಮಹಿಳೆಯನ್ನು ಕಾರ್ಯದರ್ಶಿ ಸುಧಾ ಪ್ರಭು ಆರಿಸಿದರು.

ಕಾವೇರಿ ಬಳಗದ ವಿನಯ ಪಾಠಕ ನಿರ್ವಹಿಸಿದರು. ಕೋಶಾಧಿಕಾರಿ ಶೈಲಜಾ ರತ್ನಾಕರ್ ಧನ್ಯವಾದ ಸಲ್ಲಿಸಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top