ತುತ್ತು ಕೂಳಿಗೆ ನರಳುವ ಮಂದಿ
“ತುತ್ತು ಕೂಳಿಗೆ ನರಳುವ ಮಂದಿ” ಕಾಣುತ್ತಿತ್ತು/
ಸಭೆ ಸಮಾರಂಭ ಕಾರ್ಯಕ್ರಮ ಇಲ್ಲಿ ನಡೆದಿತ್ತು/
ಜನರ ಜಂಗುಳಿ ಎಲ್ಲೆಡೆ ತುಂಬಿ ತುಳುಕುತ್ತಿತ್ತು/
ನೋಡುಗರ ಕಣ್ಣಿಗೆ ಹೊಸ ಬಟ್ಟೆಗಳಿಂದ ತೂರುತ್ತಿತ್ತು//{೦೧}//
ಆಟ ಪಾಠ ಮಕ್ಕಳೆಲ್ಲ ಸಂಭ್ರಮ ಹೇಳತೀರದಾಗಿತ್ತು/
ಸಮಾರಂಭಕ್ಕೆ ಬಂದ ಜನರ ಹಸಿವು ಹೊಟ್ಟೆ ಕೊರೆಯುತ್ತಿತ್ತು/
ತಟ್ಟೆಎಲೆಯಲ್ಲಿ ನೀಡಿದ್ದ ಅನ್ನಆಹಾರವು ತೊಟ್ಟಿಯನ್ನು ಸೇರಿತ್ತು/
ಹೊರಗೆ ಹೊಟ್ಟೆ ಹಸಿದ ಮಕ್ಕಳ ಆಹಾಕಾರವಿತ್ತು//{೦೨}//
ಸಮಾಜದಲ್ಲಿ ತುತ್ತು ಅನ್ನಕ್ಕೆ ಉದರ ಪರಿತಪಿಸುತ್ತಿತ್ತು/
ಚಿಂದಿ ಬಟ್ಟೆ ಮೈ ಮುಚ್ಚಲು ಪ್ರಯತ್ನಿಸುತ್ತಿತ್ತು/
ಮಳಿ, ಚಳಿ, ಗಾಳಿ,ಗೆ ನಡುಗಿ ದೇಹ ನಲುಗುತ್ತಿತ್ತು/
ಕಣ್ಣಲ್ಲಿ ಕಂಡವರ ವಸ್ತ್ರ ಒಡವೆಯ ಆಕರ್ಷಿಸುತ್ತಿತ್ತು //{೦೩}//
ಮುಖ ಮಾರಿ ನೋಡಿ ಮಾತನಾಡಿಸುವ ಪರಿಯಿತ್ತು/
ನಯವಿನಯ ಸರಳತೆ ಸೌಜನ್ಯ ಗುಣವು ಮೌಣವಾಗಿತ್ತು/
ಬೀಗರು ಬಿಜ್ಜರ ನೆಂಟರ ಸಂಬಂಧಗಳು ಬೆಸೆದಿತ್ತು/
ಶುಭ ಸಮಾರಂಭದಲ್ಲಿ ಆಡಿಕೊಳ್ಳುವ ಬಣಒಣಜಂಭ ಮಾಡಿತ್ತು//{೦೪}//
ಅಸಲಿಗೆ ಬರಿ ನಕಲಿ ಒಡವೆಗಳು ಮಿಂಚುತ್ತಿತ್ತು/
ಜಗದಲ್ಲಿ ಜನರು ನಿಜಕ್ಕೂ ತುಂಬಾ ಬೇಸರಿಸಿತ್ತು/
ಸತ್ಯ ನಿಷ್ಠವಂತರಿಗೆ ಇದು ಕಾಲವಲ್ಲ ಎನಿಸಿತ್ತು/
“ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಆಯ್ತು”//{೦೫}//*
✍️ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಪ್ರಶಸ್ತಿ ಪುರಸ್ಕೃತ,





































