ಭಾಗ-14
ಇಸ್ಮಾಯಿಲ್ ಕೊಲೆ ಪ್ರಕರಣ : ತಿರುಗಿ ಬಿದ್ದ ಪ್ರಾಸಿಕ್ಯೂಷನ್ ಪರ ಸಾಕ್ಷಿ
ಇಸ್ಮಾಯಿಲ್ ಕೊಲೆ ಪ್ರಕರಣದ ತನಿಖೆಯ ಸಂದರ್ಭ ಸಿಓಡಿ ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹಲವಾರು ಮಂದಿಯನ್ನು ಸಾಕ್ಷಿಗಳನ್ನಾಗಿ ಆರೋಪ ಪಟ್ಟಿಯಲ್ಲಿ ಸೇರಿಸಿದ್ದರು. ಆ ಸಾಕ್ಷಿಗಳೆಲ್ಲರೂ ಒಂದಲ್ಲ ಒಂದು ಕಾರಣದಿಂದಾಗಿ ಪೊಲೀಸ್ ಠಾಣೆಗೆ ಹೋಗಿ ಬಂದವರೇ ಆಗಿದ್ದರು. ಅಂತವರ ಪೈಕಿ ಒಬ್ಬರಾದ ಸಾಕ್ಷಿ ವೆಂಕಟಯ್ಯ ಸಫಲಿಗ. ಅವರು ತಮ್ಮ ಹೇಳಿಕೆಯಲ್ಲಿ ನನ್ನನ್ನು 22-3-77ರಂದು ಬಂಟ್ವಾಳ ಪೊಲೀಸರು ಕರೆದರು. ಅಲ್ಲಿ ಆಗ ಪೊಲೀಸರು ಇದ್ದರು. ಅವರು ಯಾರೆಂದು ನನಗೆ ಹೇಳಲು ಸಾಧ್ಯವಿಲ್ಲ. ಅಥವಾ ಪೊಲೀಸ್ ಸ್ಟೇಶನ್ನಲ್ಲಿ ಇತರರು ಯಾರು ಇದ್ದರೆಂದು ಹೇಳಲೂ ನನಗೆ ಸಾಧ್ಯವಿಲ್ಲ’ ಎಂದು ಹೇಳಿದೊಡನೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಇವರನ್ನು ಪ್ರಾಸಿಕ್ಯೂಶನ್ ವಿರೋಧ ಸಾಕ್ಷಿ ಎಂದು ಪರಿಗಣಿಸಬೇಕೆಂದು ಕೇಳಿಕೊಂಡಿದ್ದಕ್ಕೆ ನ್ಯಾಯಾಧೀಶರು ಅಪ್ಪಣೆ ಕೊಟ್ಟರು. ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಅವರ ಅಡ್ಡ ವಿಚಾರಣೆ ನಡೆಸಿನೀವು 3ನೇ ಆರೋಪಿ ಈಶ್ವರ ಭಟ್ಟರು ಮಾದರಿ ಕೈಬರಹ ಬರೆದುಕೊಡುವಾಗ ಅಲ್ಲಿದ್ದೀರಿ. ಹಾಗೂ ಹಾಗೆ ಬರೆದುಕೊಟ್ಟ ಮಾದರಿ ಕೈಬರಹಕ್ಕೆ ಮತ್ತು ಆ ಸಂಬAಧ ತಯಾರಿಸಿದ ಮಹಜರಿಗೆ ಸಹಿ ಹಾಕಿದ್ದೀರಿ’ ಎಂದು ಹೇಳಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
53ನೇ ಕೃಷ್ಣ ಸ್ವಾಮಿಯವರು ನ್ಯಾಯಾಲಯದಲ್ಲಿ ಹೇಳಿಕೆ ನೀಡುತ್ತಾ ನಾನು ಬಂಟ್ವಾಳದಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಅಸಿಸ್ಟೆಂಟ್ ಇಂಜಿನಿಯರ್ ಅವರ ಅಪ್ಪಣೆಯ ಮೇರೆಗೆ ನಾನು 7-10-77ರಂದು ಕಲ್ಲಡ್ಕಕ್ಕೆ ಹೋಗಿ ಈ ಪ್ರÀಕರಣದ 1ನೇ ಸಾಕ್ಷಿ ನರಸಿಂಹ ಮಡಿವಾಳರವರು ತೋರಿಸಿಕೊಟ್ಟಂತೆ ಇಸ್ಮಾಯಿಲ್ ಅವರ ಅಂಗಡಿ ಹಾಗೂ ಆಸುಪಾಸು ಸ್ಥಳ ಮತ್ತು ವಿದ್ಯುತ್ ಕಂಬಗಳನ್ನು ಗುರುತಿಸಿ ನಕ್ಷೆ ತಯಾರಿಸಿದೆ. ಅಲ್ಲಿಂದ ಮೃತ ಇಸ್ಮಾಯಿಲ್ ಅವರ ಹೆಣ ನೇತ್ರಾವತಿ ನದಿ ಮಧ್ಯದಲ್ಲಿ ಸಿಕ್ಕಿದ ಸ್ಥಳಕ್ಕೆ ಹೋಗಿ ಅಲ್ಲಿ ಹಮೀದ್ ಎಂಬವರು ತೋರಿಸಿಕೊಟ್ಟ ಪ್ರಕಾರ ಅಲ್ಲಿ ಕೂಡ ನಕ್ಷೆ ತಯಾರಿಸಿದೆ. ಆಮೇಲೆ ಬಿಸಿರೋಡ್, ಕಲ್ಲಡ್ಕ, ಮಾಣಿ ಮತ್ತಿತರ ಸ್ಥಳಗಳ ಒಂದು ನಕ್ಷೆ ತಯಾರಿಸಿದೆ’ ಎಂದು ಹೇಳಿದರು. ಮೃತ ಇಸ್ಮಾಯಿಲ್ ಅವರ ಮನೆಯ ಮುಂಭಾಗ ಅಥವಾ ಅಂಗಳದಿAದ ಅವರ ಅಂಗಡಿ ಕಾಣಿಸುವುದಿಲ್ಲ ಎಂದು ಆರೋಪಿ ಪರ ವಕೀಲರ ಅಡ್ಡ ವಿಚಾರಣೆಯಲ್ಲಿ ಸಾಕ್ಷಿ ಒಪ್ಪಿಕೊಂಡರು. ಜೀಪುಗಳ ತನಿಖೆ ನಡೆಸಿದೆ 54ನೇ ಸಾಕ್ಷಿ ಕುರುವೆಲ್ಲ ಅವರು ತಮ್ಮ ಹೇಳಿಕೆಯಲ್ಲಿನಾನು ಸಿಓಡಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ 1974ನೇ ಇಸವಿಯಿಂದ ಕೆಲಸ ಮಾಡುತ್ತಿದ್ದೇನೆ. ತಾ. 9-9-76ರಂದು ನನ್ನನ್ನು ಈ ಕೇಸಿನ ತನಿಖೆಗೆ ಸಿಓಡಿ ಡಿಎಸ್ಪಿಯವರಿಗೆ ಸಹಾಯ ಮಾಡುವಂತೆ ಸ್ಪೆಶಲ್ ಡ್ಯೂಟಿಯಲ್ಲಿ ಕಳುಹಿಸಿದ ಮೇರೆಗೆ ನಾನು ಬಂಟ್ವಾಳಕ್ಕೆ ಬಂದೆ. ತಾ. 10-9-76ರಲ್ಲಿ ಮಂಗಳೂರಿನ ಆರ್ಟಿಓ ಆಫೀಸಿಗೆ ಹೋಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಜೀಪುಗಳ ಪಟ್ಟಿಯನ್ನು ಕೊಡಬೇಕೆಂದು ಕೇಳಿಕೊಂಡೆ. ಅದರಂತೆ ಅವರು ಕೊಟ್ಟ ಪಟ್ಟಿಯ ಮೇರೆಗೆ ಜೀಪುಗಳನ್ನು ನಾನು ಹಾಗೂ ಸೈಂಟಿಫಿಕ್ ಆಫೀಸರ್ ಕೆಂಚಪ್ಪ ಇಬ್ಬರೂ ತನಿಖೆ ಮಾಡಿದೆವು. ಇದರ ಬಗ್ಗೆ ನಾನು ಸಿಓಡಿ ಡಿಎಸ್ಪಿಯವರಿಗೆ ಒಂದು ವರದಿ ಕೊಟ್ಟೆ’ ಎಂದು ವಿವರಿಸಿದರು.
ಆಮೇಲೆ ತಾ. 3-10-76ರಂದು ನಾನು 12 ಜೀಪುಗಳನ್ನು. ತಾ 5-10-76ರಿಂದ 7-10-76ರವರೆಗೆ 21 ಜೀಪುಗಳನ್ನು ಚೆಕ್ ಮಾಡಿದುದಾಗಿ ಹೇಳಿದ ಕುರುವೆಲ್ಲ ಅವರು ತಾ 8-10-76ರಂದು ನನ್ನನ್ನು ಸ್ಪೆಶಲ್ ಡ್ಯೂಟಿಯಲ್ಲಿ ಕೊಡಗು ಜಿಲ್ಲೆಗೆ ಕಳುಹಿಸಿದರು. ಅಲ್ಲಿ ಆ ಮೊದಲು ಡಿಸ್ಮಿಸ್ ಅಥವಾ ಸಸ್ಪೆನ್ಶನ್ ಆಗಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಕಾನ್ಸ್ಟೇಬಲ್ಗಳ ಬಗ್ಗೆ ನಾನು ತನಿಖೆ ನಡೆಸಿದೆ. ಆದರೆ ಅದರಿಂದ ಈ ಕೇಸಿಗೆ ಸಂಬAಧಪಟ್ಟ ಯಾವ ಸುಳಿವೂ ಸಿಗಲಿಲ್ಲ’ ಎಂದು ವಿವರಿಸಿದರು.
ತಾವು ಪೊಲೀಸ್ ಜೀಪುಗಳನ್ನು ಪರೀಕ್ಷಿಸಿರುವುದಾಗಿಯೂ ಈ ಎಲ್ಲಾ ತನಿಖೆಗಳಲ್ಲಿ ಈ ಕೇಸಿಗೆ ಸಂಬAಧಪಟ್ಟ ಯಾವ ಕುರುಹುಗಳೂ ಸಿಗಲಿಲ್ಲ ಎಂದೂ ಸಾಕ್ಷಿ ಹೇಳಿದರು.
ಅಡ್ಡ ವಿಚಾರಣೆಯಲ್ಲಿ ತಾವು ಪರೀಕ್ಷಿಸಿದ ಜೀಪುಗಳಲ್ಲಿ ಕೆಲವು ಹಸಿರು ಬಣ್ಣದ ಜೀಪುಗಳೂ, ತಿಳಿ ಹಸಿರು ಬಣ್ಣದ ಜೀಪುಗಳೂ, ಬಲಬದಿಗೆ ಸ್ಟೇರಿಂಗ್ ಇರುವ ಜೀಪುಗಳೂ ಇದ್ದವೆಂದೂ, ಆರ್ಟಿಓ ಅವರು ಕೊಟ್ಟ ಜೀಪುಗಳ ಪಟ್ಟಿಯಲ್ಲಿ ದ.ಕ.ದ ಹೊರಗಿನ ಜಿಲ್ಲೆಗಳಲ್ಲಿ ಕೊಟ್ಟ ನಂಬರಿನ ಜೀಪುಗಳೂ ಇದ್ದವೆಂದು ಅವರು ತಿಳಿಸಿದರು.
ಅರ್ಜಿ ಮೇಲೆ ತನಿಖೆ
55ನೇ ಸಾಕ್ಷಿ ಕೃಷ್ಣಪ್ಪ ಅವರು ತಮ್ಮ ಹೇಳಿಕೆಯಲ್ಲಿ 1977 ಜನವರಿಯಲ್ಲಿ ನಾನು ಬೆಳ್ತಂಗಡಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೆ. ತಾ. 27-1-77ರಲ್ಲಿ ವೆಂಕಟ್ರಮಣ ಭಟ್ಟ ಎಂಬವರು ಬಂದು ಒಂದು ಅರ್ಜಿಯನ್ನು ನನ್ನಲ್ಲಿ ರಾತ್ರಿ 8.30ರ ಸುಮಾರಿಗೆ ಕೊಟ್ಟರು. ಆ ಅರ್ಜಿ ಸಿಕ್ಕಿದ ಕೂಡಲೇ ನಾನು ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ರಲ್ಲಿಗೆ ಹೋಗಿ ಅರ್ಜಿಯ ಬಗ್ಗೆ ತಿಳಿಸಿದೆ. ಸ್ಥಳಕ್ಕೆ ಹೋಗಿ ಅರ್ಜಿಯಲ್ಲಿ ಹೇಳಲಾದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳುವಂತೆ ಅವರು ನನಗೆ ತಿಳಿಸಿದರು. ಮರುದಿನ ಬೆಳಿಗ್ಗೆ 8 ಗಂಟೆಗೆ ನಾನು ಬೆಳ್ತಂಗಡಿಗೆ ಮರಳಿ ಮೇಲೆ ಹೇಳಿದ ವೆಂಕಟ್ರಮಣ ಭಟ್ಟರೊಂದಿಗೆ ಈ ಕೇಸಿನ ಮೂರನೇ ಆರೋಪಿ ಈಶ್ವರ ಭಟ್ಟರ ಕೊಯ್ಯೂರಿನಲ್ಲಿರುವ ಮನೆಗೆ ಎಂ.ಇ.ಎಕ್ಸ್ 391 ಕಾರಿನಲ್ಲಿ ಹೋದೆ’ ಎಂದು ವಿವರಿಸಿದರು. ಆ ಕಾರಿನ ಚಾಲಕ 20ನೇ ಸಾಕ್ಷಿ ಅಣ್ಣಿ ಆಚಾರಿಯಾಗಿದ್ದರೆಂದು ತಿಳಿಸಿದ ಅವರುನನ್ನ ಜತೆಯಲ್ಲಿ ಇನ್ನೊಬ್ಬ ಹೆಡ್ ಕಾನ್ಸ್ಟೇಬಲ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಇದ್ದರು. ನಾವು ಈಶ್ವರ ಭಟ್ಟರ ಮನೆಯ ಹತ್ತಿರವಿರುವ ಕೆರೆಯ ಬಳಿಗೆ ಹೋದೆವು.ಆ ಕೆರೆಯಲ್ಲಿ ತೇಲಾಡಿಕೊಂಡು ಒಂದು ಕಟ್ಟು ಇತ್ತೆಂದು ವೆಂಕಟ್ರಮಣ ಭಟ್ಟರು ತೋರಿಸಿದರು. ಆದರೆ ಆಗ ಆ ಕಟ್ಟು ತೇಲಾಡಿಕೊಂಡು ಕಾಣುತ್ತಿರಲಿಲ್ಲ. ನಾನು ಈಶ್ವರ ಭಟ್ಟರ ಒಕ್ಕಲು ಬಾಬು ಪೂಜಾರಿಯವರ ಸಹಾಯದಿಂದ ಒಂದು ದೋಟಿಯ ಮೂಲಕ ಆ ಕಟ್ಟನ್ನು ಮೇಲಕ್ಕೆತ್ತಿ ಹೊದಿಕೆ ತೆಗೆದಾಗ ಅದು ಒಂದು ಪ್ಲಾಸ್ಟಿಕ್ ಚೀಲ ಎಂದು ತಿಳಿಯಿತು. ಅದರ ಬಾಯಿ ಕಟ್ಟಿತ್ತು. ಆ ಚೀಲದ ಬಾಯಿಯನ್ನು ಬಿಡಿಸಿದಾಗ ಅದರಲ್ಲಿ ಖಾಕಿ ಶರ್ಟ್ಗಳು, ಪ್ಯಾಂಟುಗಳು, ಟೊಪ್ಪಿಗಳು ಮೊದಲಾದವುಗಳು ಇದ್ದವು. ಅವುಗಳ ಅಳತೆಗಳನ್ನು ತೆಗೆದು ಮಹಜರು ಮಾಡಿ ಅವುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡೆ. ಆ ಮಹಜರಿಗೆ ಅಣ್ಣಿ ಆಚಾರಿ, ಬಾಬು ಪೂಜಾರಿ ಮತ್ತಿತರರ ಸಹಿಗಳನ್ನು ತೆಗೆದುಕೊಂಡಿದ್ದೇನೆ’ ಎಂದು ವಿವರಿಸಿದರು.
ಆ ಬಳಿಕ ಸ್ವಾಧೀನಪಡಿಸಿದ ಆ ಸೊತ್ತುಗಳನ್ನು ರಿಪೋರ್ಟ್ನೊಂದಿಗೆ ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಿದೆ. ಮ್ಯಾಜಿಸ್ಟೆçÃಟ್ರವರು ಆ ಡ್ರೆಸ್ಗಳನ್ನು ನಮ್ಮ ಪೊಲೀಸ್ ಸ್ಟೇಶನ್ನಲ್ಲಿ ಇರಿಸಿಕೊಳ್ಳುವಂತೆ ಅನುಮತಿ ನೀಡಿದರು. ಆ ಬಳಿಕ ಆ ಡ್ರೆಸ್ಗಳನ್ನು ಸಿಓಡಿ ಡಿಎಸ್ಪಿಯವರ ಮುಂದೆ ಹಾಜರುಪಡಿಸಿದೆ. ಅವುಗಳನ್ನು ಪ್ರತ್ಯೇಕ ಮಹಜರು ಮೂಲಕ ಸಿಓಡಿ ಡಿಎಸ್ಪಿಯವರು ಸ್ವಾಧೀನಕ್ಕೆ ಪಡೆದುಕೊಂಡರು’ ಎಂದು ಸಾಕ್ಷಿ ಹೇಳಿದರು. ಅಡ್ಡ ವಿಚಾರಣೆಯಲ್ಲಿ ಮೂರನೇ ಆರೋಪಿ ಈಶ್ವರ ಭಟ್ಟರನ್ನು ಎರಡು-ಮೂರು ಬಾರಿ ದಸ್ತಗಿರಿ ಮಾಡಿಕೊಂಡು ಹೋಗಿಲ್ಲವೆಂದೂ ಮತ್ತು ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿಲ್ಲವೆಂದೂ, ಮೂರನೇ ಆರೋಪಿ ಈಶ್ವರ ಭಟ್ಟರು ಬೆಂಗಳೂರು ಹೈಕೋರ್ಟ್ನಲ್ಲಿ ದಾಖಲು ಮಾಡಿದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬAಧ ತಾನೂ ಒಂದು ಆಫಿದಾವಿತ್ ದಾಖಲು ಮಾಡಿದುದಾಗಿಯೂ ಸಾಕ್ಷಿ ಹೇಳಿದರು. ವೆಂಕಟ್ರಮಣ ಭಟ್ಟರು ಯಾವ ಅರ್ಜಿಯನ್ನು ಕೊಟ್ಟದ್ದೂ ಇಲ್ಲ; ಕೆರೆಯಲ್ಲಿ ಬಟ್ಟೆ ಕಟ್ಟು ಸಿಕ್ಕಿದುದೂ ಇಲ್ಲ. ಇದೆಲ್ಲ ಸಿಓಡಿ ಪೊಲೀಸರ ಸ್ಪಷ್ಟನೆಯಾಗಿದೆ’ ಎಂದು ಆರೋಪಿ ಪರ ವಕೀಲರು ಹೇಳಿದಾಗ ಸಾಕ್ಷಿಯವರು ಅದನ್ನು ನಿರಾಕರಿಸಿದರು.
ಮೆಟಲ್ ಡಿಟೆಕ್ಟರ್ ಕೊಂಡುಹೋದೆ
56ನೇ ಸಾಕ್ಷಿ ಚೆಯ್ಯಣ್ಣರವರು ತಮ್ಮ ಹೇಳಿಕೆಯಲ್ಲಿ ನಾನು ಬಂಟ್ವಾಳದಲ್ಲಿ ಫುಡ್ ಮೊಬೈಲ್ ಸ್ಕೆ÷್ವÃಡ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 20-2-77ರಂದು ನನಗೆ ಬಂಟ್ವಾಳದಲ್ಲಿ ಸಿಓಡಿ ಡಿಎಸ್ಪಿಯವರು ಒಂದು ಮೆಟಲ್ ಡಿಟೆಕ್ಟರ್ ಕೊಟ್ಟರು. ಅವರ ಸೂಚನೆಯಂತೆ ನಾನು ಅದನ್ನು ತೆಗೆದುಕೊಂಡು ನಿಡಿಂಗಲ್ಲು ಸೇತುವೆಗೆ ಹೋದೆ. ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ಹಿರೇಮಠ್ ಅವರು ನಾನು, ಪೊಲೀಸರು ಮತ್ತಿತರ ಸಾಕ್ಷಿಗಳು ಜತೆಯಲ್ಲಿ ಮೆಟಲ್ ಡಿಟೆಕ್ಟರ್ ಮಾಡಿದ ಸಂಜ್ಞೆ ಪ್ರಕಾರ ಆ ಸ್ಥಳದಲ್ಲಿ ಹೊಯಿಗೆ ತೆಗೆದು ನೋಡಿದಾಗ ಅಲ್ಲಿ ಒಂದು ಜಾಲರಿ ಸಿಕ್ಕಿತು. ಆ ಬಳಿಕ ಮುಂದೆ ಹುಡುಕಿದಾಗ ಅಲ್ಲಿಂದ ಸುಮಾರು 25 ಅಡಿ ದೂರದಲ್ಲಿ ಮೆಟಲ್ ಡಿಟೆಕ್ಟರ್ ಮತ್ತೆ ಸಂಜ್ಞೆ ಮಾಡಿತು. ಆ ಸ್ಥಳದಲ್ಲಿ ಹೊಯಿಗೆ ತೆಗೆದು ನೋಡಿದಾಗ ನಂಬರ್ ಪ್ಲೇಟ್ ಸಿಕ್ಕಿತು. ಅವೆರಡನ್ನೂ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡೆವು’ ಎಂದು ಹೇಳಿದರು. ನೀವು ಅಲ್ಲಿಗೆ ಹೋದುದೇ ಇಲ್ಲ. ಇದೆಲ್ಲಾ ಸುಳ್ಳು’ ಎಂದು ಅಡ್ಡ ವಿಚಾರಣೆಯಲ್ಲಿ ಆರೋಪಿ ಪರ ವಕೀಲರು ಕೇಳಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
ಬಾವಿಯಲ್ಲಿ ನಂಬರ್ ಪ್ಲೇಟ್
57ನೇ ಸಾಕ್ಷಿ ನಾರಾಯಣ ಅವರು ತಮ್ಮ ಹೇಳಿಕೆ ನೀಡುತ್ತಾ ನಾನು ಮಂಗಳೂರು ಫಯರ್ ಸ್ಟೇಶನ್ನಲ್ಲಿ ಫಯರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 23-2-77ರಲ್ಲಿ ನಾನು ನನ್ನ ಆಫೀಸರರೊಡನೆ ಪಂಪ್ ಇರುವ ಫಯರ್ ಇಂಜಿನ್ ಸಹಿತ ಬಂಟ್ವಾಳಕ್ಕೆ ಹೋದೆ. ಬಂಟ್ವಾಳದಲ್ಲಿ ಸಿಓಡಿ ಇನ್ಸ್ಪೆಕ್ಟರ್ ಕಾಣ ಸಿಕ್ಕಿದರು. ಅವರು ಮತ್ತು ನಾವು ಅಲ್ಲಿಂದ ಬಡಕಾಯಿಕೊಂಬು ಎಂಬ ಸ್ಥಳಕ್ಕೆ ಹೋದೆವು. ಅಲ್ಲಿ ಇತರ ಸಾಕ್ಷಿಗಳೂ ಇದ್ದರು. ಅಲ್ಲಿ ಸಿಓಡಿ ಇನ್ಸ್ಪೆಕ್ಟರ್ ಹೇಳಿದ ಮೇರೆಗೆ ಮನೆಯ ಸಮೀಪದಲ್ಲಿದ್ದ ಬಾವಿಯ ನೀರನ್ನು ಖಾಲಿ ಮಾಡಿದೆವು. ಅನಂತರ ಬಾವಿಗಿಳಿದು ಹುಡುಕಿದಾಗ ಒಂದು ನಂಬರ್ ಪ್ಲೇಟ್ ಅಲ್ಲಿ ಸಿಕ್ಕಿತು. ಅದನ್ನು ಮೇಲಕ್ಕೆ ತಂದೆ’ ಎಂದು ವಿವರಿಸಿದರು. ಆಮೇಲೆ ಮನೆಯಲ್ಲಿ ಒಂದು ಉಷಾ ಹೊಲಿಗೆ ಯಂತ್ರದ ತಲೆ ಮತ್ತು ಅದರ ಕವರ್ ಸಿಕ್ಕಿತೆಂದೂ ಆ ಮೂರನ್ನೂ ಒಂದು ಮಹಜರು ಮುಖೇನ ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು ಸಾಕ್ಷಿ ಹೇಳಿದರು. 58ನೇ ಸಾಕ್ಷಿ ಕುಂಟಯ್ಯರವರು ತಮ್ಮ ಹೇಳಿಕೆ ನೀಡುತ್ತಾ ನಾನು ಸಿಓಡಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಸಿಓಡಿ ಡಿಎಸ್ಪಿಯವರು ಹೇಳಿದಂತೆ ತಾ. 29-4-77ರಂದು ಅವರು ಕೊಟ್ಟ ಒಂದು ಸೀಲ್ಡ್ ಕವರನ್ನು ಬೆಂಗಳೂರಿನ ಎಫ್ಎಸ್ಎಲ್ಗೆ ಕೊಂಡು ಹೋಗಿ ಕೊಟ್ಟಿರುತ್ತೇನೆ. ಪುನ: 5-7-77ರಂದು ನನ್ನನ್ನು ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ದಕ್ಷಿಣ ಮೂರ್ತಿಯವರು ಎಫ್ಎಸ್ಎಲ್ಗೆ ಕಳುಹಿಸಿದರು. ಅಲ್ಲಿ ನನ್ನ ವಶ ಕೊಟ್ಟ ಕವರನ್ನು ಪುನ: ತಂದು ಸರ್ಕಲ್ ಇನ್ಸ್ಪೆಕ್ಟರ್ರ ಕೈಗೆ ಕೊಟ್ಟೆ. ತಾ. 8-7-77ರಂದು ಪುನ: ನನ್ನನ್ನು ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ಎಫ್ಎಸ್ಎಲ್ಗೆ ಕಳುಹಿಸಿದರು. ಅಲ್ಲಿಂದ ಅವರು ಕೊಟ್ಟ ಕವರನ್ನು ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ದಕ್ಷಿಣ ಮೂರ್ತಿಯವರ ಕೈಗೆ ತಂದು ಕೊಟ್ಟೆ’ ಎಂದು ವಿವರಿಸಿದರು.
59ನೇ ಸಾಕ್ಷಿ ಗೋಪಾಲ ಅವರು ತಮ್ಮ ಹೇಳಿಕೆಯಲ್ಲಿ ನಾನು ಬಂಟ್ವಾಳ ಪೊಲೀಸ್ ಸ್ಟೇಶನ್ನಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 6-2-77ರಂದು ನನ್ನನ್ನು ಸಿಓಡಿ ಡಿಎಸ್ಪಿಯವರು ಬೆಂಗಳೂರಿನ ಎಫ್ಎಸ್ಎಲ್ಗೆ ಕಳುಹಿಸಿದರು. ಹಾಗೆ ಕಳುಹಿಸುವಾಗ ನನ್ನಲ್ಲಿ ಒಂದು ಕಟ್ಟನ್ನು ಕೊಟ್ಟರು. ಅದನ್ನು ನಾನು ಎಫ್ಎಸ್ಎಲ್ಗೆ ಕೊಟ್ಟು ಬಂದೆ’ ಎಂದು ಹೇಳಿದರು. 60ನೇ ಸಾಕ್ಷಿ ನರಸಿಂಹ ಮೂರ್ತಿಯವರು ತಮ್ಮ ಹೇಳಿಯಲ್ಲಿನಾನು ಸಿಓಡಿಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 13-9-76ರಂದು ಸಿಓಡಿ ಡಿಎಸ್ಪಿಯವರು ಕೊಟ್ಟ ಸೀಲ್ಡ್ ಪ್ಯಾಕೇಟ್ ಒಂದನ್ನು ಬೆಂಗಳೂರಿನ ಆಫೀಸಿನಲ್ಲಿ ಕೊಟ್ಟೆ’ ಎಂದು ಹೇಳಿದರು.
61ನೇ ಸಾಕ್ಷಿ ಲಕ್ಷö್ಮಣ್ ಅವರು ತಮ್ಮ ಹೇಳಿಕೆಯಲ್ಲಿ ನಾನು ಬಂಟ್ವಾಳ ಪೊಲೀಸ್ ಸ್ಟೇಶನ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 13-9-76ರಂದು ಸಿಓಡಿ ಡಿಎಸ್ಪಿಯವರು ಕೊಟ್ಟ ಸೀಲ್ಡ್ ಪ್ಯಾಕೇಟ್ ಒಂದನ್ನು ಬೆಂಗಳೂರಿನ ಎಫ್ಎಸ್ಎಲ್ಗೆ ಕೊಟ್ಟೆ’ ಎಂದು ವಿವರಿಸಿದರು. ಡಿಎಸ್ಪಿಯವರಿಗೆ ಸಹಕರಿಸಿದೆ 62ನೇ ಸಾಕ್ಷಿಯಾದ ವಿ.ಕೆ. ಹಿರೇಮಠ್ ಅವರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ನೀಡುತ್ತಾನಾನು ಸಿಓಡಿಯಲ್ಲಿ ಇನ್ಸ್ಪೆಕ್ಟರ್ ಆಗಿ 26-6-1975ರಿಂದ ಕೆಲಸ ಮಾಡುತ್ತಿದ್ದೇನೆ. ಈ ಕೇಸಿನಲ್ಲಿ ಸಿಓಡಿ ಡಿಎಸ್ಪಿಯವರಿಗೆ ಸಹಕರಿಸಿದೆ’ ಎಂದು ಹೇಳಿದರು.
` ತಾ. 15-8-76ರಂದು ಡಿಎಸ್ಪಿಯವರ ಸೂಚನೆಯಂತೆ ನಾನು ಬಂಟ್ವಾಳ ಹಾಗೂ ವಿಟ್ಲ ಪೊಲೀಸ್ ಸ್ಟೇಶನ್ ಸರಹದ್ದಿನಲ್ಲಿರುವ ಚೆಕ್ ಪೋಸ್ಟ್ಗಳು ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ತ. 4-9-76ರಂದು ಜೀಪುಗಳು ಹೋದ ಹಾಗೂ ಪೆಟ್ರೋಲ್ ಹಾಕಿದ ವಿಷಯಗಳನ್ನು ತನಿಖೆ ಮಾಡಿದೆ. ಅದರಲ್ಲಿ ಈ ಕೇಸಿಗೆ ಬೇಕಾದ ಯಾವುದೇ ಕುರುಹು ಕಂಡು ಬರಲಿಲ್ಲ. ಅದರಂತೆ ಸಿಓಡಿ ಡಿಎಸ್ಪಿಯವರ ಆದೇಶದ ಮೇರೆಗೆ ತಾ. 4-9-76ರ ಮೊದಲು ಮೃತ ಇಸ್ಮಾಯಿಲ್ರವರು ಮಾಡಿದ ಟ್ರಂಕ್ ಕಾಲ್ಗಳ ಬಗ್ಗೆ ತನಿಖೆ ನಡೆಸಿದೆ. ಆ ತನಿಖೆಯಲ್ಲಿಯೂ ಈ ಕೇಸಿಗೆ ಸಂಬAಧಪಟ್ಟ ಯಾವುದೇ ಸುಳಿವು ಸಿಗಲಿಲ್ಲ. ತಾ. 18-10-76ರಂದು ಸಿಓಡಿ ಡಿಎಸ್ಪಿಯವರ ನಿರ್ದೇಶನದಂತೆ ಮಲ್ಪೆ, ಮಂಗಳೂರು ಮತ್ತಿತರ ಸ್ಥಳಗಳಲ್ಲಿರುವ ಕಳ್ಳ ಸಾಗಾಣಿಕೆದಾರರಿಗೆ ಮತ್ತು ಮೀಸಾದಲ್ಲಿ ಬಂಧಿಸಲ್ಪಟ್ಟ ಕಳ್ಳ ಸಾಗಾಣಿಕೆದಾರರಿಗೆ ಈ ಕೇಸಿನ ಸಂಬoಧ ಏನಾದರೂ ಕೈವಾಡ ಇದೆಯೇ ಎಂದು ತನಿಖೆ ನಡೆಸಿದೆ. ಆದರೆ ಆಗಲೂ ಯಾವುದೇ ತರದ ಸುಳಿವು ಸಿಗಲಿಲ್ಲ’ ಎಂದು ಹಿರೇಮಠ್ ವಿವರಿಸಿದರು.
ಮುಂದುವರಿಯುವುದು…































