ಡೀಸೆಲ್ ಸೋರಿಕೆ: ಸರಣಿ ಅಪಘಾತ

Picture of RB NEWS

RB NEWS

Bureau Report

ಕಾರ್ಕಳ: ರಾಷ್ಟ್ರೀಯ ಹೆದ್ದಾರಿ-169ರ ಚಿಕ್ಕಮಗಳೂರು-ಉಡುಪಿ ಗಡಿಭಾಗ ಮಾಳ ಘಾಟ್‌ನಲ್ಲಿ ಸೋಮವಾರ (ಜು.20) ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಡೀಸೆಲ್ ಸೋರಿಕೆಯಾಗಿ ಸರಣಿ ವಾಹನ ಅಪಘಾತ ಸಂಭವಿಸಿದೆ.

ಡೀಸೆಲ್‌ ಸೋರಿಕೆಯಾಗಿ ರಸ್ತೆ ಜಾರಲು ಕಾರಣವಾಗಿದೆ. ಪರಿಣಾಮವಾಗಿ ಹಿಂಬದಿಯಿಂದ ಬಂದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರು ಪಲ್ಟಿಯಾಗಿದೆ. ವಾಹನಗಳಲ್ಲಿದ್ದ ಕೆಲವರಿಗೆ ಅಲ್ಪಪ್ರಮಾಣದಲ್ಲಿ ಗಾಯಗಳಾಗಿದೆ.

ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಮೇಲೆ ಮರಳು ಹಾಕಿ ಸ್ವಚ್ಚತೆಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು.

ನಿರಂತರ ಮಳೆಯಿಂದ ಘಾಟ್ ರಸ್ತೆಗಳು ಜಾರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಹಾಗೂ ವೇಗ ನಿಯಂತ್ರಿಸಿಕೊಂಡು ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top