ಡೀಸೆಲ್ ಕಳ್ಳತನ : ಚೋರ ಸಹೋದರರು ಪೊಲೀಸ್ ಬಲೆಗೆ

Picture of RB NEWS

RB NEWS

Bureau Report

ಉಡುಪಿ : ಹಿರಿಯಡ್ಕ ಸಮೀಪದ ಪೆರ್ಡೂರಿನ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನ ಡೀಸೇಲ್‌ ಕಳ್ಳತನ ಮಾಡಿದ ಆರೋಪಿಗಳಿಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ‌.

ಬಂಧಿತ ಆರೋಪಿಗಳನ್ನು ಸಯ್ಯದ್ ಜಾಫರ್(26), ಸಯ್ಯದ್ ಹಸೇನ್(23) ಎಂದು ತಿಳಿದು ಬಂದಿದೆ.

ಕೃತ್ಯಕ್ಕೆ ಬಳಸಿದ್ದ KA 14 C 0906 ನೇ ಮಿನಿ ಗೂಡ್ ವಾಹನ (ಅಂದಾಜು ಮೌಲ್ಯ 2 ಲಕ್ಷ ರೂ), ಡಿಸೇಲ್ ಕಳ್ಳತನಕ್ಕೆ ಬಳಸಿದ್ದ ಕ್ಯಾನ್, ಹಾಗೂ ಸ್ಕ್ಯಾನರನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳು ಸಹೋದರರಾಗಿದ್ದು ಅವರು ಕಳ್ಳತನ ಕೃತ್ಯದಲ್ಲಿ ಕುಖ್ಯಾತರಾಗಿದ್ದು ಅವರ ವಿರುದ್ದ ಈ ಹಿಂದೆ ಶಿವಮೊಗ್ಗ ಉಡುಪಿ ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿದುಬಂದಿರುತ್ತದೆ.

ಪ್ರಕರಣದ ವಿವರ:

2024 ಫೆ. 16 ರಂದು ಮುಂಜಾನೆ ಪೆರ್ಡೂರು ಸಿದ್ದಿವಿನಾಯಕ ಡೀಸೆಲ್ ವರ್ಕ್ಸ್ ಗ್ಯಾರೇಜ್ ಬಳಿಯಲ್ಲಿ ನಿಲ್ಲಿಸಿದ್ದ KA 42 2905 ನೇ ಟಿಪ್ಪರ್ ಲಾರಿಯ ಡಿಸೇಲ್ ಕಳ್ಳತನ ಮಾಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top