ಡಿ.8: ಕಾರ್ಕಳ ರಾಮಕ್ಷತ್ರಿಯ ಕ್ರೀಡೋತ್ಸವ-2024

Picture of RB NEWS

RB NEWS

Bureau Report

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ರಾಮಕ್ಷತ್ರಿಯ ಸಂಘ(ರಿ)ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಲಿದ್ದಾರೆ.

ಉದ್ಘಾಟನೆಯನ್ನು ರಾಜ್ ಕುಮಾರ್ ಕಾರ್ನಾಡ್, ನಿವೃತ್ತ ಜನರಲ್ ಮೆನೇಜರ್, ಹೆಚ್.ಡಿ.ಎಫ್.ಸಿ (ಲಿ) ಮುಂಬೈ ಮತ್ತು ಮಾಜಿ ಅಧ್ಯಕ್ಷರು ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬೈ ಇವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಾರಾಯಣ ಸೇರ್ವೆಗಾರ್, ದೈಹಿಕ ಶಿಕ್ಷಣ ಶಿಕ್ಷಕರು, ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರು, ವಿಶ್ವನಾಥನ್.ಪಿ., ನಿವೃತ್ತ ಉಪ ತಹಶೀಲ್ದಾರರು, ಕಾರ್ಕಳ, ಪ್ರಭಾಕರ ರಾವ್, ನಿವೃತ್ತ ಮುಖ್ಯೋಪಾಧ್ಯಾಯರು, ಪಡಿಬೆಟ್ಟು, ಅಂಡಾರು ಭಾಗವಹಿಸಲಿದ್ದಾರೆ.

ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಗೌರವಾಧ್ಯಕ್ಷ ಪ್ರಸನ್ನ ಕೆ.ಬಿ, ಕಾರ್ಯದರ್ಶಿ ಪ್ರವೀಣ್.ಕೆ, ಕ್ರೀಡಾ ಕಾರ್ಯದರ್ಶಿ ಸಂಕೇತ್ ಎನ್.ರಾವ್ ಗೌರವ ಉಪಸ್ಥಿತರಿರುವರು.

ಸಮಾರೋಪ ಸಮಾರಂಭ ಸಾಯಂಕಾಲ 05.00ಕ್ಕೆ ನಡೆಯಲಿದೆ.

ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ವಹಿಸಲಿದ್ದಾರೆ. ಪಿ. ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೂಡಬಿದ್ರೆ ವಲಯ, ದ.ಕ. ಜಿಲ್ಲೆ ಬಹುಮಾನ ವಿತರಣೆಯನ್ನುಗೈಯ್ಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಗುರ್ಮೆ, ಕ್ಲಾಸ್ I, ಪಿ.ಡಬ್ಲ್ಯೂ.ಡಿ ಕಂಟ್ರಾಕ್ಟರ್, ಸತೀಶ್ಚಂದ್ರ ನಾಯಕ್, ಅಧ್ಯಕ್ಷರು, ರಾಮಕ್ಷತ್ರಿಯ ಯುವ ಸಂಘ ಉಡುಪಿ, ದಿನೇಶ್ ಸೇರ್ವೆಗಾರ್ ಅಂಡಾರು, ಪ್ರಗತಿಪರ ಕೃಷಿಕರು ಮತ್ತು ಶಂಕರ್ ರಾವ್, ನಿವೃತ್ತ ಪೋಸ್ಟ್ ಮೆನ್, ಬೈಲೂರು ಉಪಸ್ಥಿತರಿರುವರು.

ರಾಮಕ್ಷತ್ರಿಯ ಸಂಘ(ರಿ)ನ ಗೌರವಾಧ್ಯಕ್ಷರು ಹಾಗೂ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ (ರಿ)ಕಾರ್ಕಳದ ಅಧ್ಯಕ್ಷರಾದ ಪಾರ್ಥಸಾರಥಿ, ಸಂಘದ ಜೊತೆ ಕ್ರೀಡಾ ಕಾರ್ಯದರ್ಶಿ ಪ್ರತೀಕ್ ಪಿ., ಗೌರವ ಉಪಸ್ಥಿತರಿರುವರು.

ಈ ಸಮಾರಂಭದಲ್ಲಿ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಅರುಣಾಕಲಾ ಎಸ್.ರಾವ್ ಮತ್ತು ಕ್ರೀಡಾಪಟು ಪ್ರಣೀತಾ ಪಿ.ರಾವ್ ಅಂಡಾರು ಇವರನ್ನು ಗೌರವಿಸಿ, ಸನ್ಮಾನಿಸಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top