ಡಿ. ಕೆ. ಶಿವಕುಮಾರ್ ಬಿಜೆಪಿ ಸೇರುವುದಿಲ್ಲ ಬದಲಾಗಿ….
- ವಿ. ಕೆ. ವಾಲ್ಪಾಡಿ
ಡಿ. ಕೆ. ಶಿವಕುಮಾರ್ ಅವರು ಬಿಜೆಪಿ ಸೇರುವುದಿಲ್ಲ ಅದರ ಬದಲು ತೃತೀಯ ಶಕ್ತಿಯಾಗಿ ಹೊಮ್ಮಲಿದ್ದಾರೆ. ಎಂದು ತಿಳಿದುಕೊಳ್ಳಬಹುದೇ?
ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತನ್ನ ವೈಯಕ್ತಿಕ ಹಿತಾಸಕ್ತಿಗೋಸ್ಕರ ಕಾಂಗ್ರೆಸ್ ತ್ಯಜಿಸಿಯಾರು ಎಂದಿತ್ಯಾದಿಯಾಗಿ ಪತ್ರಕರ್ತರ ಬರೆಹಗಳಲ್ಲಿ ಕಾಣುತ್ತಿದೆ ವಿನಾ ಅವರು ಬಿಜೆಪಿಗೆ ಸೇರ್ಪಡೆಗೊಳ್ಳರಂತೂ ನಿಜ ಎನ್ನಬಹುದು.
ಧಾರ್ಮಿಕ ಆಚರಣೆ,ಆಧ್ಯಾತ್ಮಿಕ ಒಲವುಗಳನ್ನು ಮೊದಲೇ ಅನುಭವಿಸಿಕೊಂಡು,ಆಚರಿಸಿಕೊಂಡು ಬರುತ್ತಿದ್ದ ಡಿಕೆಶಿವಕುಮಾರ್ ಕಾಂಗ್ರೆಸ್ಸಿನಲ್ಲಿ ಚರ್ಚೆಯ ನಾಯಕನಾಗಿ ಕಂಡುಬಂದಿರುವುದು ಎರಡೇ ಕಾರಣಗಳಿಂದ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಕುಂಭಮೇಳವನ್ನು ತಿರಸ್ಕರಿಸಿದ್ದು, ಸ್ನಾನದ ಬಗ್ಯೆ ಅಪಹಾಸ್ಯ ಮಾಡಿದ್ದಿರುವಾಗ ಆ ಮಾತಿಗೆ ವಿರೋಧವಾಗಿ ಡಿಕೆಶಿ ತನ್ನ ಕುಟುಂಬ ಸಮೇತ ಕುಂಭಮೇಳದಲ್ಲಿ ಮುಳುಗಿ ಮಿಂದೆದ್ದುದು.

ಎರಡನೆಯದು, ಜಗ್ಗಿ ವಾಸುದೇವ ಅವರನ್ನು ತನ್ನ ಮನೆಯೊಳಗೆ ಪ್ರವೇಶಿಸಲು ಅನುಮತಿಕೊಟದ್ದು ಹಾಗೆನೆ ಆಮಂತ್ರಣ ಸ್ವೀಕರಿಸಿ ಕೊಯಮತ್ತೂರಿನ ಇಶಾ ಫೌಂಡೇಶನೊಳಗೆ ಅಮಿತ್ ಶಾ ಇದ್ದಾಗಲೂ ಡಿಕೆಶಿ ಬಲಗಾಲಿಟ್ಟು ಪ್ರವೇಶಿಸಿದ್ದು.
ಕಾಂಗ್ರೆಸ್ಸಿನ ಬಹುತೇಕ ನಾಯಕರು ತಿಳಿದುಕೊಂಡಷ್ಟು ಡಿಕೆಶಿಯವರು ಮೂರ್ಖರಲ್ಲ. ಪಕ್ಷದ ಸಿದ್ಧಾಂತಗಳು ಈಗಿನ ಕಾಲಘಟ್ಟದಲ್ಲಿ ಗೊಡ್ಡು ಹರಟೆಗಳಾಗಿದೆ, ಸಮಾಜವಾದ ಮತ್ತು ಕಮ್ಯೂನಿಷ್ಟ್ ಪದ್ಧತಿ ಯಾವುದು ಕೂಡಾ ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ ಎಂಬುದನ್ನು ಅವರು ಆಧ್ಯಾತ್ಮ ಚಿಂತನೆಯಿಂದಲೇ ಅರ್ಥ ಮಾಡಿಕೊಳ್ಳಲಾರಂಭಿಸಿದ್ದಾರೆ.

ಇಂದಿನ ಪರಿಸ್ಥಿತಿಯಲ್ಲಿ ಭಾರತವಷ್ಟೇ ಅಲ್ಲ ,ವಿಶ್ವದ ಬಾಕಿ ಉಳಿದ ಬಹುತೇಕ ರಾಷ್ಟ್ರಗಳು ಮೂಲಭೂತವಾದಿ ತತ್ವ ಸಿದ್ಧಾಂತಗಳನ್ನೇ ಮುಂದಿಟ್ಟುಕೊಂಡು ನಾಯಕರಾಗಿತ್ತಿದ್ದಾರೆ. ಅಲ್ಲಿನ ನಾಗರಿಕರು ಅದನ್ನು ಒಪ್ಪುತ್ತಿದ್ದಾರೆ.
ದೇಶ ಭಕ್ತಿ ಮತ್ತು ಮೂಲಭೂತವಾದಿತ್ವ ಅದು ಎರಡು ಮಾತ್ರ ಪ್ರಬಲವಾಗುತ್ತಿದೆ. ಹೊಟ್ಟೆಗೆ ಆಹಾರವಿಲ್ಲ, ಖರ್ಚಿಗೆ ಕಾಸಿಲ್ಲ ಎನ್ನುವುದು ಸುಳ್ಳು. ಜನರೇ ಅದನ್ನು ಹೇಳಿಕೊಳ್ಳುವುದಿಲ್ಲ,ನಮ್ಮ ಧರ್ಮ ನಮ್ಮ ದೇಶ ಮುಖ್ಯ ಅನ್ನುತ್ತಾರೆ ಅಷ್ಟೆ.
ಡಿಕೆಶಿಯವರನ್ನು ಪ್ರತ್ಯೇಕ ಪಕ್ಷ ಕಟ್ಟುವುದಕ್ಕೆ ಬಿಜೆಪಿ ಪ್ರೇರೇಪಿಸಬಹುದು. ನೀನು ಮತ್ತೊಬ್ಬ ಎಸ್. ಬಂಗಾರಪ್ಪನಾಗು ಎನ್ನುವ ಸಲಹೆ ಕೊಡಲೂಬಹುದು.
ರಾಜ್ಯ ರಾಜಕೀಯದಲ್ಲಿ ಮೂರನೆಯ ಶಕ್ತಿಯೊಂದು ಬೇಕೇ ಬೇಕು. ಆ ರೀತಿಯಲ್ಲಿ ಪರ್ಷವೊಂದು ಹುಟ್ಚಿ ಆರಂಭದಲ್ಲಿಯೇ ಆನೆ ಬಲ ಪ್ರದರ್ಶಿಸಿದ್ದೇ ಆದರೆ ಉಳಿದ ಎರಡು ಪಕ್ಷಗಳನ್ನು ಸರಿಸಮಾನವಾಗಿ ಕಟ್ಟಿ ಹಾಕಬಹುದು.
ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಅಧಿಕೃತವಾಗಿ ವಿಲೀನ ಮಾತ್ರವೇ ಬಾಕಿಯಿರುವಾಗ ಸ್ವತಂತ್ರ ಸ್ಪರ್ಧೆ ಅಷ್ಟಕ್ಕಷ್ಟೆ ನಿಜ. ಅಂತಿರುವಾಗ, ಬಿಜೆಪಿಯ ಸಲಹೆಯಂತೆ ಹೊಸ ಪಕ್ಷ ರಚನೆಗೆ ಮುಂದಾಗುವುದು ಈ ಎಲ್ಲ ತೋರ್ಪಡಿಕೆಗಳಿಗಿಂತ ಹೆಚ್ಚು ಉತ್ತಮ ಅನಿಸಬಹುದು.
ಡಿಕೆಶಿವಕುಮಾರ್ ಅವರ ಬೆನ್ನಲ್ಲಿ ಶಾಸಕರ ಸಂಖ್ಯೆ ಸಾಕಷ್ಟಿಲ್ಲವಾಗಿದ್ದರೂ ಕೂಡ , ಅವರನ್ನು ಬಂಬಲಿಸುವ ಕಾರ್ಯಕರ್ತರು ಯಥೇಚ್ಚವಾಗಿದ್ದಾರೆ. ಯುವ ಕಾರ್ಯಪಡೆಗಳಿವೆ. ಬಿಜೆಪಿಯ ಅಮಿತ್ ಶಾ ಮರ್ಜಿಯ ವ್ಯಕ್ತಿಯೊಬ್ಬ ರಾಜ್ಯ ರಾಜಕೀಯದಲ್ಲಿಯೂ ಬೇಕು ಅನ್ನುವ ಅಪೇಕ್ಷೆ ರಾಜ್ಯದ ಬಿಜೆಪಿಯೇತರ ಯುವಕರ ಮನದಾಳದ ಬಯಕೆಯಾಗಿತ್ತು, ಎಲ್ಲ ಇದ್ದೂ ಸ್ವತಂತ್ರ ತೀರ್ಮಾನಕ್ಕೆ ಅಧಿಕಾರವಿಲ್ಲ ಎಂಬುದೂ ಡಿಕೆಶಿಯ ಮನಸಿನ ನೋವಾಗಿತ್ತು.
ಡಿಕೆಶಿಯವರಿಗೆ ಆಶಾದಾಯಕ ಸಂಗತಿಗಳ ಪಾಠ ಮಾಡುವುದರೊಂದಿಗೆ ಆತನನ್ನೇ ಮಾಯಾಮೋಹಿನಿಯನ್ನಾಗಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮುಗಿಸುವ ಯೋಚನೆ ಬಿಜೆಪಿಯದ್ದಾಗಿರಬಹುದು.
ಬಿಜೆಪಿಯೊಡನೆ ಮೈತ್ರಿ ತನಕ ಮುಂದುವರಿದುಕೊಂಡು ಬಂದಿರುವ ಹೆಚ್. ಡಿ. ಕುಮಾರಸ್ವಾಮಿಯವರ ಸಧ್ಯದ ಕತೆಯೇನೆಂಬುದನ್ನೂ ಡಿಕೆಶಿ ಅರ್ಥ ಮಾಡಿಕೊಳ್ಳದಿರರು. ಹಾಗಿರುವಾಗ ತನ್ನ ಬಲಾಢ್ಯತೆಯನ್ನು ತಾನು ಸ್ವತಂತ್ರವಾಗಿ ಬೆಳೆಸಿ ಗಟ್ಟಿಮಾಡಿಕೊಂಡರೆನೆ ಬಂಗಾರಪ್ಪನವರಿಗೆ ಅವಕಾಶ ಒದಗಿ ಬಂದಂತೆ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯಬಹುದು ಎಂದು ಡಿಕೆಶಿಯವರು ಚಿಂತಿಸಿದರೆ, ಅವರು ಬಿಜೆಪಿಗೆ ಸೇರುವ ಅಗತ್ಯವೇ ಕಾಣುವುದಿಲ್ಲ.
ಬಿಜೆಪಿಯು ಸಹ ಅವರನ್ನು ಪಕ್ಷಕ್ಕೆ ಈಗ ಸೇರಿಸಿಕೊಂಡರೆ ಕಾಂಗ್ರೆಸ್ಸ್ ನಾಯಕರು,ಕಾರ್ಯಕರ್ತರು ಖಂಡಿತ ಒಪ್ಪಲಾರರು. ಯಾಕೆಂದರೆ ಅವರೆಲ್ಲರೂ ಬಿಜೆಪಿಯೆದುರು ಮಲತಾಯಿ ಮಕ್ಕಳಂತೆ ಕಣ್ ಬಿಟ್ಚು ನೋಡಿಕೊಂಡಿರಬೇಕಾಗುತ್ತದೆ. ನಿರ್ಲಕ್ಷ್ಯಕ್ಕೊಳಗಾಗುತ್ತಾರೆ.
ಜಗ್ಗಿ ವಾಸುದೇವ ಅವರ ಆಧ್ಯಾತ್ಮಿಕ ವಚನಗಳು ಎಂಥ ಬಂಡೆಗಲ್ಲನ್ನೂ ಅಲುಗಾಡಿಸಬಲ್ಲವು ಎಂದಾಗಿರುವಾಗ ಡಿಕೆಶಿಯವರ ಮೆದುಳು ತೊಳೆಯುವುದಕ್ಕೆ ಜಗ್ಗಿ ವಾಸುದೇವರನ್ನು ಬಿಜೆಪಿ ಬಳಸಿಕೊಳ್ಳಬಹುದು, ಭಾವನಾತ್ಮಕವಾಗಿ ಯಶಸ್ಸು ಪಡೆಯುವಂತೆಯೂ ಅವರ ಮುದ್ದಿನ ಮಗಳಿಗೆ ಬೋಧನೆ ಕೊಡುವುದಕ್ಕೂ ಅವಕಾಶ ಬಳಕೆಯಾದೀತು. ಡಿಕೆಶಿಯವರು ರಾಜಕೀಯದಲ್ಲಿ ಬದಲಾಗುವ ಸೂಚನೆ ಮೇಲ್ನೋಟಕ್ಕೆ ತಿಳಿಯುವಂತಾಗುತ್ತಿದೆ.















