ಡಿಸೆಂಬರ್ 12 ರಿಂದ ಮಂಗಳೂರು- ಕಾರ್ಕಳ ನಡುವೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ

Picture of RB NEWS

RB NEWS

Bureau Report

ಮೂಡುಬಿದಿರೆ : ಮಂಗಳೂರು- ಮೂಡುಬಿದಿರೆ- ಕಾರ್ಕಳ ನಡುವೆ ಡಿ 12 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಳ್ಳಲಿದೆ.

ಈ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಆರಂಭಿಸುವಂತೆ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರ ಬೇಡಿಕೆಯಾಗಿತ್ತು.

ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರ ವಿಶೇಷ ಪ್ರಯತ್ನದಿಂದ ಬಸ್ ಸಂಚಾರಕ್ಕೆ ಕೆ.ಎಸ್.ಆರ್.ಟಿ.ಸಿಯಿಂದ ಮಂಜೂರಾತಿ ಲಭಿಸಿದ್ದರೂ, ಸ್ಥಗಿತಗೊಂಡಿತ್ತು.

ಪ್ರಸ್ತುತ ಪ್ರತೀ ದಿನ ಏಳು ಬಸ್ಸುಗಳ ಸಂಚಾರಕ್ಕೆ ಪರವಾನಗಿ ಲಭಿಸಿದ್ದು ಡಿಸೆಂಬರ್ 12ರಿಂದ 4 ಬಸ್ಸುಗಳು ಪ್ರತಿ ದಿನ 28ಟ್ರಿಪ್ ನಡೆಸಲಿದೆ. ಈ ಮೂಲಕ ಈ ಭಾಗದ ಬಸ್ ಪ್ರಮಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿಯೇ ಆಶ್ರಯ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಕೆ ಎಸ್ ಆರ್ ಟಿ ಸಿ ಯವರ ಒಂದು ಚೆಕ್ ಪೋಸ್ಟ್ ಇದೆ ಎನ್ನುವುದೇ ಯಾರಿಗೂ ಗೊತ್ತಿರಲಾರದು.
-ಏಕೆಂದರೆ ಇದು ಇರುವುದು ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ನಡುವಿನಲ್ಲಿರುವ ಅತ್ಯಂತ ಚಿಕ್ಕ ಕೋಣೆಯೊಂದರಲ್ಲಿ.

ಅದಕ್ಕೆ ಸರಿಯಾಗಿ ಇಲ್ಲಿಗೆ ಆಗಮಿಸುವ ಕೆ ಎಸ್ ಆರ್ ಟಿ ಸಿ ಬಸ್ಸುಳು ಕೂಡ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ತೆರಳುತ್ತಿರುವುದು ವಿಪರ್ಯಾಸವೇ ಸರಿ.

ಅದಕ್ಕೆ ಪೂರಕವಾಗಿ ಮುಖ್ಯ ರಸ್ತೆಯ(ರಾಷ್ಟ್ರೀಯ ಹೆದ್ದಾರಿ) ಬದಿಯಲ್ಲಿರುವ ರಿಕ್ಷಾ ನಿಲ್ದಾಣ. ಅದರ ಬದಿಯ ಎಲೆಕ್ಟ್ರಿಕ್ ಕಂಬಕ್ಕೆ ಸಮಯ ಸಾರಣಿಯ ಪಟ್ಟಿ ತೂಗು ಹಾಕಲಾಗಿದೆ. ಇದರಿಂದಾಗಿ ಎಲ್ಲ ಬಸ್ಸುಗಳು ಅದೇ ಪ್ರದೇಶದಲ್ಲಿ ನಿಲ್ಲಿಸಿ ಮುಂದುವರಿಯುತ್ತಿದೆ.

ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಪ್ರದೇಶ ನಿಜವಾಗಿಯೂ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ಲಿಸುವ ಸ್ಥಳವಾಗಿರುತ್ತದೆ. ಆದರೆ ಖಾಸಗಿ ವಾಹನಗಳವರು ಅಲ್ಲಿ ನಿಲ್ಲಿಸುತ್ತಿರುವುದರಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಅವಕಾಶವೇ ದೊರಕುತ್ತಿಲ್ಲ.

ಇಷ್ಟು ಮಾತ್ರವಲ್ಲ ಆ ಕಾಂಪ್ಲೆಕ್ಸ್ ನ ಎದುರಿನ ಖಾಸಗೀ ವಾಹನಗಳು ನಿಲ್ಲಿಸುತ್ತಿರುವ ಸ್ಥಳ ಮುಂಬೈ, ಬೆಂಗಳೂರು ಇತ್ಯಾದಿ ಸ್ಥಳಗಳಿಗೆ ತೆರಳುವ ಖಾಸಗಿ ಬಸ್ಸುಗಳಿಗೂ ಕೂಡ ಅವಕಾಶ ಇರುತ್ತದೆ.

ಮುಖ್ಯರಸ್ತೆಯ ಬದಿಯಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸುವ ಕ್ರಮವನ್ನು ಮುಂದುವರಿಸುತ್ತಿದ್ದಾರೆ. ಮೂಡುಬಿದರೆ ಪುರಸಭೆಯವರು ಈ ಪ್ರದೇಶವನ್ನು ರಾಜ್ಯ ರಸ್ತೆ ಸಾರಿಗೆ ಹಾಗೂ ಹೊರರಾಜ್ಯಗಳಿಗೆ ತೆರಳುವ ಬಸ್ಸುಗಳವರಿಗೆ ನಿಲ್ಲಿಸಲು, ಪ್ರಯಾಣಿಕರಿಗೆ ಕಾಯಲು ಅವಕಾಶವನ್ನು ಮಾಡಿಕೊಡುವಂತೆ ಸಾರ್ವಜನಿಕರು ವಿನಂತಿಸುತ್ತಿದ್ದಾರೆ.

ಇದೀಗ ನಾಳೆಯಿಂದ ಮಂಗಳೂರು ಕಾರ್ಕಳ ನಡುವಿನ ರಾಜ್ಯ ರಸ್ತೆ ಸಾರಿಗೆ ಬಸ್ಸು ಕೂಡ ಆಗಮಿಸುತ್ತದೆ ಎನ್ನುವ ಮಾಹಿತಿ ಇರುವುದರಿಂದ ಅದಕ್ಕೂ ಇಲ್ಲಿಯೇ ಅವಕಾಶವನ್ನು ಮಾಡಿಕೊಡುವುದು ಯುಕ್ತ ಎನ್ನುವುದು ಹಲವರ ಅಭಿಪ್ರಾಯ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top