ಡಾ. ಶ್ರೀ ಪ್ರಣವಾನಂದ ಸ್ವಾಮೀಜಿಯ ಭೇಟಿಯಾದ ಪರಶುರಾಮ ಪ್ರತಿಮೆಯ ಶಿಲ್ಪಿ ಕೃಷ್ಣ ನಾಯಕ್

Picture of RB NEWS

RB NEWS

Bureau Report

ಡಾ. ಶ್ರೀ ಪ್ರಣವಾನಂದ ಸ್ವಾಮೀಜಿಯ ಭೇಟಿಯಾದ ಪರಶುರಾಮ ಪ್ರತಿಮೆಯ ಶಿಲ್ಪಿ ಕೃಷ್ಣ ನಾಯಕ್

ಬೆಂಗಳೂರು: ಕಾರ್ಕಳ ಎರ್ಲಪ್ಪಾಡಿಯ ಉಮ್ಮಿಕಲ್ಲು ನಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮ ಪ್ರತಿಮೆಯ ಶಿಲ್ಪಿ ಕೃಷ್ಣ ನಾಯಕ್ ಅವರು ತಮ್ಮ ಕುಲದ ಸ್ವಾಮಿ
ಪೂಜ್ಯ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿಗಳನ್ನು ಭೇಟಿಯಾಗಿರುವ ಮಾಹಿತಿ ಲಭಿಸಿದೆ‌.

ಶ್ರೀಗಳನ್ನು ಭೇಟಿ ಮಾಡಿ ತನ್ನ ಅಳಲನ್ನು ತೋರಿಕೊಂಡ, ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿದ ಈಡಿಗ ಕುಲಬಾಂಧವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಕೃಷ್ಣ ನಾಯಕ್ ರವರು ತಾನು ಜೈಲಿಗೆ ಹೋಗಿದ್ದೂ ಸೇರಿದಂತೆ ನಡೆದ ಎಲ್ಲಾ ಸತ್ಯಾಸತ್ಯತೆಗಳನ್ನು ತಿಳಿಸಿದರು‌.

ಅದೇ ಸಂದರ್ಭ ಸಂಪೂರ್ಣ ದಾಖಲಾತಿಗಳನ್ನು ಶ್ರೀಗಳಿಗೆ ನೀಡಿದರು‌. ನಮ್ಮವರೆಂದು ತಿಳಿದುಕೊಂಡವರು ನನಗೆ ಸಂಪೂರ್ಣ ಅನ್ಯಾಯ ಮಾಡಿ ನನ್ನನ್ನು ಜೈಲಿಗೆ ಕಳಿಸಿದರು‌. ಇದರಿಂದ ಕೋಟ್ಯಾಂತರ ಹಣ ನಷ್ಟವಾಗಿದೆ. ನಾನು ಕೆಲಸ ಮಾಡುವ ಜಾಗಕ್ಕೆ ಬಂದು ಶಿಲ್ಪಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಪೊಲೀಸಿನವರು ಸ್ವಾದೀನ ಪಡಿಸಿಕೊಂಡಿದ್ದಾರೆ‌.

ಈ ಎಲ್ಲಾ ಬೆಳವಣಿಗೆ ಸಮಾಜದಲ್ಲಿ ನನಗಿರುವ ಗೌರವವನ್ನು ಕೂಡ ಕಳೆದುಕೊಂಡಿದ್ದೇನೆ . ಎಲ್ಲಾ ನೋವುಗಳನ್ನು ಶ್ರೀಗಳಿಗೆ ತಿಳಿಸಿದ್ದೇನೆ ಅನಂತರ ಮಾತನಾಡಿದ ಶ್ರೀಗಳು ಈ ವಿಷಯವನ್ನ ಸಂಪೂರ್ಣವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕುಲಬಾಂಧವರಾದ ಕೃಷ್ಣ ನಾಯಕ್ ರವರಿಗೆ ನ್ಯಾಯ ಕೊಡಿಸುತ್ತೇನೆಂದು ಶ್ರೀಗಳು ತಿಳಿಸಿದರು.

ವರದಿ: ನಾಗರಾಜ್ ನಾಯಕ್ ರಾಜ್ಯ ಉಪಾಧ್ಯಕ್ಷರು ರಾಷ್ಟ್ರೀಯ ಈಡಿಗ ಮಹಾಮಂಡಳಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top