ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಚರ್ಮ ರೋಗ ತಪಾಸಣಾ ಶಿಬಿರ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಶುಕ್ರವಾರ , ಏಪ್ರಿಲ್ 05, 2024ರಂದು ಉಚಿತ ಚರ್ಮ ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ ಗಂಟೆ 9:30ರಿಂದ ಸಂಜೆ ಗಂಟೆ 05:00ರವರೆಗೆ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಚರ್ಮ ರೋಗ ಚಿಕಿತ್ಸಾಲಯದಲ್ಲಿ ನಡೆಯಲಿದೆ. ಚರ್ಮ, ಕೂದಲು ಮತ್ತು ಉಗುರಿನ ಸಮಸ್ಯೆ ಉಳ್ಳವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

ಮೊಡವೆಗಳು/ ಪಿಂಪಲ್ಸ್ , ಪಿಗ್ ಮೆಂಟೇಷನ್ ಮತ್ತು ನೆರಿಗೆ , ಬಿಳಿ ಕಲೆಗಳು , ಉರಿಗುಳ್ಳೆ ಮತ್ತು ಸನ್ ಬರ್ನ್ , ಕೂದಲು ಉದುರುವಿಕೆ , ಫಂಗಲ್ ಸೋಂಕು , ಚರ್ಮದಲ್ಲಿನ ಯಾವುದೇ ಭಾಗದಲ್ಲಿ ನಿರಂತರ ತುರಿಕೆ ಸೇರಿದಂತೆ ಎಲ್ಲಾ ರೀತಿಯ ಚರ್ಮ, ಕೂದಲು ಮತ್ತು ಉಗುರು ಸಂಬಂಧಿತ ಸಮಸ್ಯಗಳಿದ್ದವರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಚರ್ಮ ರೋಗ ತಜ್ಞೆ ಡಾ ಅನುಷಾ ಡಿ ಸೋಜ ತಿಳಿಸಿದ್ದಾರೆ. ಸಮಾಲೋಚನೆ ಉಚಿತವಾಗಿದ್ದು ಔಷಧಿಗಳ ಮೇಲೆ ಶೇಕಡಾ 10 ರವರೆಗೆ ರಿಯಾಯಿತಿ ನೀಡಲಾಗುವುದು. ಮೊದಲು ನೋಂದಾಯಿಸಿದ 100 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583.ಸಂಪರ್ಕಿಸಲು ಕೋರಲಾಗಿದೆ.

ಈ ಉಪಕ್ರಮವು ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಆರೋಗ್ಯ ಸೇವೆಗಳು ಮತ್ತು ವಿಶೇಷ ಸಮಾಲೋಚನೆಗಳನ್ನು ನೀಡುವ ಮೂಲಕ ಆಸ್ಪತ್ರೆಯು ಚರ್ಮರೋಗದ ಕಾಳಜಿಯನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಗುರಿಯನ್ನು ಹೊಂದಿದೆ, ಇದು ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲಿದೆ.

ಮುಖ್ಯ ವೈದ್ಯಾಧಿಕಾರಿಗಳು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top