ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ 22 ಜುಲೈ ನಿಂದ 27ನೇ ಜುಲೈ 2024ರವರೆಗೆ – ಕಾಸ್ಮೆಟಾಲಜಿ ಶಿಬಿರ ( ಸೌಂದರ್ಯವರ್ಧಕ )
ರಿಯಾಯಿತಿ ದರದಲ್ಲಿ ತಜ್ಞರ ಸಮಾಲೋಚನೆ ಮತ್ತು ಕೆಮಿಕಲ್ ಪೀಲ್ ಪ್ರೊಸೀಜರ್
ಚರ್ಮ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಕೆಮಿಕಲ್ ಪೀಲ್ ಚಿಕಿತ್ಸೆಯು ಉತ್ತಮ ಪರಿಹಾರ ಎಂದು ತಜ್ಞರ ಅಭಿಪ್ರಾಯ
ಕಾರ್ಕಳ: ಸಾಮಾನ್ಯ ಚರ್ಮ ಸಂಬಂಧಿತ ಸಮಸ್ಯೆಗಳಾದ ಮೊಡವೆ, ಮುಖದ ಮೇಲಿನ ನೆರಿಗೆಗಳು, ಸುಕ್ಕುಗಳು, ರೇಖೆಗಳು, ಪಿಗಮೆಂಟೇಷನ್, ಮತ್ತು ಗಾಯದ ಗುರುತುಗಳು ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಕೆಮಿಕಲ್ ಪೀಲ್ ಪ್ರೂಸೀಜರ್ ಬಹಳ ಪರಿಣಾಮಕಾರಿ ಆಗಿದೆ ಎಂದು ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದ ಚರ್ಮ ರೋಗ ತಜ್ಞೆ ಡಾ.ಅನುಷಾ ಡಿಸೋಜಾ ಅವರು ತಿಳಿಸಿದ್ದಾರೆ.

ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ವಿಶ್ವ ಚರ್ಮ ತ್ವಚೆ ಆರೋಗ್ಯ ದಿನದ ಪ್ರಯುಕ್ತ ಕಾಸ್ಮೆಟಾಲಜಿ (ಸೌಂದರ್ಯವರ್ಧಕ) ಶಿಬಿರವನ್ನು 22ನೇ ಜುಲೈ ನಿಂದ 27ನೇ ಜುಲೈ 2024 ರ ವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ವೈಯಕ್ತಿಕರಿಸಿದ ಸಮಾಲೋಚನೆಯ ಜೊತೆಗೆ ಕೆಮಿಕಲ್ ಪೀಲ್ ಪ್ರೊಸೀಜರ್ ಮತ್ತು ತಜ್ಞರ ಸಮಾಲೋಚನೆ ಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.
ಶಿಬಿರದ ವಿವರಗಳು:
ದಿನಾಂಕ: 22ನೇ ಜುಲೈ ಸೋಮವಾರದಿಂದ 27ನೇ ಜುಲೈ 2024 ಶನಿವಾರದವರೆಗೆ
ಸಮಯ: ಬೆಳಗ್ಗೆ 9 ರಿಂದ ಸಂಜೆ 5 ರ ತನಕ
ಸ್ಥಳ: ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಚರ್ಮರೋಗ ವಿಭಾಗ
ಪೂರ್ವ ನಿಗಧಿ ಕಡ್ಡಾಯ
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ: 08258-230583/9731601150
ಡಾ. ಕೀರ್ತಿನಾಥ ಬಲ್ಲಾಳ
ಮುಖ್ಯ ವೈದ್ಯಾಧಿಕಾರಿ , ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ.






































