ಟೆರೆಸ್ ಮೇಲಿನಿಂದ ಕೆಳಕ್ಕೆ ಬಿದ್ದ ವೃದ್ಧ ಗಂಭೀರ

Picture of RB NEWS

RB NEWS

Bureau Report

ಕಾರ್ಕಳ : ಮನೆ ಟೆರೆಸ್ ನಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ವೃದ್ಧರೊಬ್ಬರು ಬೆನ್ನು ಮೂಳೆ ಮುರಿದುಕೊಂಡ ಘಟನೆ ಮಿಯಾರ್ ಗ್ರಾಮದ ಬೋರ್ಕಟ್ಟೆಯ ಮನ್ನಡ್ಕ ಎಂಬಲ್ಲಿ ಸಂಭವಿಸಿದೆ.

ಗೋಪಾಲ ಶೆಟ್ಟಿ (74) ಎಂಬವರು ಘಟನೆಯಲ್ಲಿ ಗಾಯಗೊಂಡವರು.‌ ಬೆಳಿಗ್ಗಿನ ಜಾವದಲ್ಲಿ ಅವರು ಮನೆಯ ಟೆರೆಸಿಗೆ ಹೋಗಿದ್ದರು.
ಮಳೆಗಾಲವಾಗಿದ್ದು ಟೆರೆಸಿನಲ್ಲಿ ಪಾಚಿಗಳು ತುಂಬಿಕೊಂಡಿರುವುದೇ ಕಾಲು ಜಾರಲು ಕಾರಣವೆನ್ನಲಾಗಿದೆ.
ಘಟನೆ ನಡೆದ ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ವಾಸವಾಗಿದ್ದುದರಿಂದ ಬೆಳಿಗ್ಗೆ 9.30ಕ್ಕೆ ನೆರೆಮನೆಯ ಉಮೇಶ್ ಶೆಟ್ಟಿ ಎಂಬವರು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದರು.
ಇದಾಗಿ ಕೇವಲ 20 ನಿಮಿಷದ ಅಂತರದಲ್ಲಿ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಅಗಮಿಸಿದೆ. ಪ್ರಥಮ‌ ಚಿಕಿತ್ಸೆ‌ ‌ನೀಡುವ ಮೂಲಕ ಗಾಯಾಳುವನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ‌ ದಾಖಲಿಸಲಾಗಿದೆ.

108 ಅಂಬುಲೆನ್ಸ್ ನ ಪೈಲೆಟ್ ಕೊಟ್ರಪ್ಪ ಜಿ , ಇ ಎಂ ಟಿ ದೇವಕಿ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಗಾಯಾಳುವಿನ ಯೋಗ ಕ್ಷೇಮ ವಿಚಾರಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top