ಜ್ಞಾನ ವಿಕಾಸ ಕೇಂದ್ರ ಪ್ರತಿಭೆಯನ್ನು ವ್ಯಕ್ತ ಪಡಿಸಲು ಉತ್ತಮ ವೇದಿಕೆ

Picture of RB NEWS

RB NEWS

Bureau Report

  • ಚಿನ್ನಾ ಕಲ್ಲಡ್ಕ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಪೊಳಲಿ ವಲಯದ ಬೆಂಜನಪದವು ಬ್ರಹ್ಮರಕೊಟ್ಲು ಮೇರೇ ಮಜಲು, ಕೊಡಮನ್ ಕಾರ್ಯಕ್ಷೇತ್ರದ ಶ್ರೀ ದುರ್ಗಾ, ಸೌಭಾಗ್ಯ, ವ್ಯಾಘ್ರಶ್ವರಿ, ಅಮ್ಮ ಜ್ಞಾನವಿಕಾಸ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಬೆಂಜನಪದವುನಲ್ಲಿ ಜರಗಿತು.

ಅಖಿಲ ಕರ್ನಾಟಕ ಜನಜಗೃತಿ ವೇದಿಕೆ ಬಂಟ್ವಳ ತಾಲೂಕಿನ ಅಧ್ಯಕ್ಷ ರೋನಾಲ್ಡ್ ಡಿ ಸೋಜ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರಿಗೆ ಜ್ಞಾನ ವಿಕಾಸ ಕೇಂದ್ರ ಪ್ರತಿಭೆ ಯನ್ನು ವ್ಯಕ್ತ ಪಡಿಸಲು ಉತ್ತಮ ವೇದಿಕೆ ವಾಗಿದೆ. ಮಹಿಳೆಯರ ಸಮಸ್ಯೆಯನ್ನು ಅರಿತು ಕೊಂಡು ಮಾತೃಶ್ರೀ ಹೇಮಾವತಿ ಹೆಗ್ಡೆ ಯವರು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಜ್ಞಾನವಿಕಾಸ ಕೇಂದ್ರ ಪ್ರಾರಂಭ ಮಾಡಿದ್ದಾರೆ ಇದರ ಸದುಉಪಯೋಗ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾರ್ಧನ ಬಾರಿಂಜೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಂಟ್ವಾಳ ಎಸ್ ವಿ ಎಸ್ ಶಾಲಾ ಶಿಕ್ಷಕಿ ಪೂರ್ಣಿಮಾ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಹಿಳೆ ವಿದ್ಯಾವಂತರಾದರೆ ಒಂದು ಕುಟುಂಬದ ಚಿತ್ರಣವೇ ಬದಲಾಗುತ್ತದೆ. ಮಕ್ಕಳು ಹೆಚ್ಚಾಗಿ ಅಮ್ಮಂದಿರರ ಒಡನಾಟಿನಲ್ಲಿ ಇರುವುದರಿಂದ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿ, ಕಷ್ಟದ ಜೀವನವನ್ನು ನಮ್ಮ ಮಕ್ಕಳಿಗೂ ತಿಳಿಸಬೇಕು. ಆಚಾರ ವಿಚಾರದ ಬಗ್ಗೆ ಮಕ್ಕಳಿಗೂ ತಿಳಿಸಬೇಕು ಎಂದರು.

ವಲಯದ ಅಧ್ಯಕ್ಷರು ಜನಾರ್ಧನ ಪುಂಚಮೇ, ಉದ್ಯಮಿ ಉಮೇಶ್ ಸಲ್ಯಾನ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವಾಮನ ಆಚಾರ್ಯ, ಬ್ರಹ್ಮರಕೂಟ್ಲು ಒಕ್ಕೂಟ ದ ಕಾರ್ಯದರ್ಶಿ ಡೇವಿಡ್ ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಭವ್ಯ, ಶೋಭಾ ಶೈಲಜಾ, ಒಕ್ಕೂಟ ಅಧ್ಯಕ್ಷರು,ಪದಾಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

ಪೊಳಲಿ ವಲಯದ ಮೇಲ್ವಿಚಾರಕಿ ಹರಿನಾಕ್ಷಿ ಸ್ವಾಗತಿಸಿದರು.
ಸೇವಾಪ್ರತಿನಿಧಿ ರತ್ನ ವಂದಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top