ಜ್ಞಾನದಲ್ಲಿ ಹಿರಿಯರು! ಮನೆಯೊಳಗಿನ ಹಿರಿಯರು!
ಮುದುಕರಾಗ ಬಯಸದಿರಿ! ಮುದಿತನದ ಹಿರಿ ತಲೆಗಳೇ!
ಬದುಕ ಅನುಭವಿಸಿದವರು! ನೀವು! ಅನುಭವಗಳ ಹಂಚಿರೋ!! ಪಲ್ಲವಿ!!
ಮನೆಗೊಂದು ಮಗುವು ಬೇಕು! ಮಗುವಿಗೆ ಬೇಕು! ಬದುಕಿನ ಪಾಠ!
ತೆನೆಯನು ಗೊನೆ! ಯೊಳಗಿರಿಸಿದಂತೆ! ಹೊಸ ಚಿಗುರಿಗೆ ಬೇಕು! ಹಳೆಯ ಬೇರು!! ೧ !!
ಜ್ಞಾನದಲ್ಲಿ! ಧನಿಕರು ನೀವು! ಸ್ಥಾನ ಮಾನ! ಅರಿತವರು!
ಯಾನ ಮುಗಿಯುವುದರೊಳಗೆ ಅರಿತು! ಜ್ಞಾನ ದಾನ ಮಾಡಿರೋ!! ೨ !!
ತೆಪ್ಪಗೆ ಮಲಗಿ! ಕಾಲನ ಕಾಯದೆ! ತಪ್ಪು ಸರಿಯ ಪಾಠ ಮಾಡಿರಿ!
ಅಪ್ಪ ತಿಮ್ಮಪ್ಪ ನಮ್ಮ! ಪಡುತಿರುಪತಿಯ ದೊರೆ!
ಚಪ್ಪರ ಶ್ರೀನಿವಾಸನು! ಒಪ್ಪಿ ಕೊಳ್ಳುವನು!! ೩ !!

































