ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್ ಯು ಎಸ್ ) ಅಧ್ಯಕ್ಷರಾಗಿ ಎಡವಾದಿ ವಿದ್ಯಾರ್ಥಿ ಸಂಘಟನೆಯ (ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್) ಮುಖಂಡ ಧನಂಜಯ್ ಭರ್ಜರಿ ಜಯಭೇರಿಗಳಿಸಿದ್ದಾರೆ.
ಧನಂಜಯ್ ಅವರು ಬಿಹಾರದ ಗಯಾಗೆ ಸೇರಿದವರಾಗಿದ್ದು, ಜೆ ಎನ್ ಯು ನ ಇತಿಹಾಸದಲ್ಲಿ ಎರಡನೇ ದಲಿತ ಅಧ್ಯಕ್ಷರಾಗಿದ್ದಾರೆ.

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ನ ಧನಂಜಯ್ ಅವರು 2598 ಮತಗಳನ್ನು ಗಳಿಸಿದ್ದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ನ ಉಮೇಶ್ ಸಿ ಅಜ್ಮೀರಾ 1676 ಮತಗಳನ್ನು ಗಳಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಅವಿಜಿತ್ ಘೋಷ್ ಆಯ್ಕೆಯಾಗಿದ್ದು ಇವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು ಸೋಲಿಸಿದ್ದಾರೆ.
ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಶನ್ನ ಎಡ ಬೆಂಬಲಿತ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದರು. ಅವರು ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು 926 ಮತಗಳಿಂದ ಸೋಲಿಸಿದರು. ಆರ್ಯ 2887 ಮತಗಳನ್ನು ಪಡೆದರೆ ಆನಂದ್ 1961 ಮತಗಳನ್ನು ಪಡೆದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡಪಕ್ಷಗಳ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ ಡಾಂಗಿ ಅವರನ್ನು 508 ಮತಗಳಿಂದ ಸೋಲಿಸಿದರು. ಎಲ್ಲಾ ನಾಲ್ಕು ವಿಜೇತರಲ್ಲಿ ಇವರದು ಅತ್ಯಂತ ಕಡಿಮೆ ಅಂತರದ ಗೆಲುವು ಆಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್ಯುಎಸ್ಯು) ಮೂರು ಸ್ಥಾನಗಳನ್ನು ಯುನೈಟೆಡ್ ಲೆಫ್ಟ್ ಪ್ಯಾನೆಲ್ ಗೆದ್ದುಕೊಂಡರೆ, ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ (ಬಾಪ್ಸಾ) ಒಂದು ಹುದ್ದೆಯನ್ನು ಗೆದ್ದಿದೆ.
ಎಬಿವಿಪಿ ಸಂಘಟನೆಯು ಚುನಾವಣೆ ತೊಡಗಿಸಿಕೊಂಡ ಯಾವುದೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲಗೊಂಡಿದೆ.





































