ಜೀವನ ಸಾರ್ಥಕತೆಗೆ ಕಲಿಕೆ ನಿರಂತರವಾಗಿರಲಿ : ಶ್ರೀನಿವಾಸ ಪೈ
ಕಾರ್ಕಳ : ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆ . ಬಾಲ್ಯದಿಂದ ತೊಡಗಿ ಶಾಲಾ ಕಾಲೇಜುಗಳ ಶೈಕ್ಷಣಿಕ ಹಂತ ಒಂದು ಘಟ್ಟವಾದರೆ , ಬಳಿಕ ಲಭಿಸುವ ನಿಜಜೀವನದ ಪಾಠ
ಗಳು ಮನುಷ್ಯನ ಉನ್ನತಿ ಏಳಿಗೆಗೆ ಮೆಟ್ಟಿಲುಗಳಾಗಿ ಪರಿಣಮಿಸುತ್ತವೆ. ಬದುಕಿನ ಎಲ್ಲ ಸಂದರ್ಭ ಸನ್ನಿವೇಶ ಘಟನೆಗಳನ್ನು ಚೆನ್ನಾಗಿ ಪರಾಮರ್ಶಿಸಿ , ತಪ್ಪು ಒಪ್ಪುಗಳನ್ನು ಅರಿತು ಮುನ್ನಡೆದರೆ ಜೀವನ ಸಾರ್ಥಕ ಮಾಡಿಕೊಳ್ಳಬಹುದು ಎಂದು ಸಿವಿಲ್ ಇಂಜಿನಿಯರ್ ಶ್ರೀನಿವಾಸ ಜಿ. ಕೆ. ಪೈ ಹೇಳಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಕಂಪೋಸಿಟ್ ಪಿ. ಯು . ಕಾಲೇಜಿನ ವಿದ್ಯಾರ್ಥಿನಿ , ರಾಜ್ಯಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದ ಕಾರ್ಕಳ ತಾಲೂಕು ಶಿರ್ಲಾಲುವಿನ ಎಂ. ಅಕ್ಷತಾ ಶೆಣೈ ಅವರನ್ನು ಪೆರ್ವಾಜೆ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಧ್ಯಾನ ಮಂದಿರದಲ್ಲಿ ಸನ್ಮಾನಿಸಿ ಮಾತನಾಡಿದರು.
ವೀಣಾ ವಿನಾಯಕ ಶೆಣೈ , ಪ್ರತೀಕ್ಷಾ ಪ್ರಭು , ಪಿ ಡಬ್ಲ್ಯೂ ಡಿ ಕಂಟ್ರಾಕ್ಟರ್ ವೆಂಕಟೇಶ ಪ್ರಭು ಶಿರ್ಲಾಲು, ಮಂದಿರದ ಪ್ರವರ್ತಕರಾದ ನಿರ್ಮಲಾ ಎಸ್. ಪೈ ಉಪಸ್ಥಿತರಿದ್ದರು.
ಶೈಲಜಾ ಶೆಟ್ಟಿ ಸ್ವಾಗತಿಸಿದರು. ಶ್ಯಾಮ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಸುಕೇಶ್ ಎ. ವಂದಿಸಿದರು.



































