“ಜೀವನದ ಬೆಳಕು” ಬಿಡುಗಡೆ

Picture of RB NEWS

RB NEWS

Bureau Report

ಬೆಳ್ತಂಗಡಿ : ಲೇಖಕಿ ಶ್ವೇತಾ ದಿಲೀಪ್ ಕುತ್ಲೂರು ನಾರಾವಿ ಅವರ ಚೊಚ್ಚಲ ಕೃತಿ “ಜೀವನದ ಬೆಳಕು” ಬಿಡುಗಡೆಗೊಂಡಿತು.
ಪುತ್ತೂರಿನ ವಿದ್ಯಾಮಾತ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ, ಪುತ್ತೂರು ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಹಾಗೂ ಆಮಂತ್ರಣ ಟೀಮ್ ಗಾನಯಾನದ ಜೋಡಿಗಾಯನ ಸಮಾರಂಭದ ಅಂಗವಾಗಿ ಈ ಕೃತಿ ಅನಾವರಣಗೊಂಡಿತು.
ಹಿರಿಯ ಮುತ್ಸದ್ದಿ ಹಾಗೂ ಆಮಂತ್ರಣ ಗೌರವ ಸಲಹೆಗಾರರಾದ ಬಿ. ಭುಜಬಲಿ (ಧರ್ಮಸ್ಥಳ) ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕಿ ಶ್ವೇತಾ ದಿಲೀಪ್ ನಾರಾವಿ, ಸ್ವರ್ಣಲತಾ ವೀರೇಂದ್ರ ಕುಮಾರ್ ಕಾಯರ್ತಡ್ಕ, ಅಮ್ಮಾಜಿ ಬಿ. ಜೈನ್, ದಿಲೀಪ್ ಕುಮಾರ್ ಜೈನ್, ಪೃಥ್ವಿರಾಜ್ ಜೈನ್ (ಬೆಂಗಳೂರು) ಮತ್ತು ಆದಿತ್ಯ ಜೈನ್ ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಆಮಂತ್ರಣ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್. ರೈ ಕಡೇಶಿವಾಲಯ, ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮೂಡುಬಿದಿರೆ, ಉಡುಪಿ ಆಮಂತ್ರಣ ಜಿಲ್ಲಾಧ್ಯಕ್ಷೆ ಪುಷ್ಪಪ್ರಸಾದ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಮಲ್ಲಿನಾಥ್ ಜೈನ್ (ಧರ್ಮಸ್ಥಳ), ಪುತ್ತೂರು ಆಮಂತ್ರಣ ವೇದಿಕೆಯ ನೂತನ ಅಧ್ಯಕ್ಷ ಆಶಾಮಯ್ಯ, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅರುಣ್ ಅರುವ ಹಾಗೂ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್ ಅವರು ಲೇಖಕಿಯ ಪರಿಚಯವನ್ನು ಮಾಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top