ಜೀವನದಲ್ಲಿ ನಗು ಮತ್ತು ಪೌಷ್ಟಿಕ ಆಹಾರ ಪದ್ದತಿ ಸರ್ವತೋಮುಖ ಆರೋಗ್ಯಕ್ಕೆ ಪೂರಕ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಮತ್ತು ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಸಹಯೋಗದಲ್ಲಿ ವಿಶ್ವ ದಿನಾಚರಣೆಯ ಅಂಗವಾಗಿ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು .

ಕಾರ್ಕಳದ ಲೆಕ್ಕಪರಿಶೋಧಕರು, ದಾನಿಗಳು ಆಗಿರುವ ಕೆ ಕಮಲಾಕ್ಷ ಕಾಮತ್ ಇವರು ಕಾರ್ಕಳದ ಅನಂತಶಯನ ವ್ರತ್ತದಲ್ಲಿ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಡಿಗೆಯು ಕಾರ್ಕಳ ಮುಖ್ಯ ರಸ್ತೆಯಲ್ಲಿ ಸಾಗಿ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಂಪನ್ನಗೊಂಡಿತು. ಕಾರ್ಕಳ ಪರಿಸರದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ನೌಕರ ಭಾಂದವರು, ವಿವಿಧ ಸಂಘ ಸಂಸ್ಥೆಗಳು ಜಾತಾದಲ್ಲಿ ಭಾಗವಹಿಸಿದ್ದವು. ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪ್ರಹಸನದ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೃದ್ರೋಗ ತಜ್ನ ಡಾ.ಪದ್ಮನಾಭ ಕಾಮತ್, ಕೆಎಂಸಿ, ಮಂಗಳೂರು ಇವರು ಭಾಗವಹಿಸಿ ದೀಪ ಬೆಳಗಿಸಿ ವಿಶ್ವ ಹೃದಯ ದಿನದ ಮಹತ್ವ ಮತ್ತು ಉತ್ತಮ ಹೃದಯ ಆರೋಗ್ಯಕ್ಕಾಗಿ ಪಾಲಿಸಬೇಕಾದ ಆಹಾರ ಕ್ರಮ ಮತ್ತು ವ್ಯಾಯಾಮ ಚಟುವಟಿಕೆಗಳ ಕುರಿತು ಮಾತನಾಡಿದರು.
ಕಾರ್ಕಳದ ತಹಶೀಲ್ದಾರ್ ಪ್ರತಿಭಾ ಅವರು ಅತಿಥಿಗಳಾಗಿ ಭಾಗವಹಿಸಿ ತಮ್ಮ ಮಾತಿನಲ್ಲಿ “ಜೀವನದಲ್ಲಿ ನಗು ಮತ್ತು ಪೌಷ್ಟಿಕ ಆಹಾರ ಪದ್ದತಿ ಸರ್ವತೋಮುಖ ಆರೋಗ್ಯಕ್ಕೆ ಪೂರಕ” ಎಂದು ಹೇಳಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ ಭರತೇಶ್ ಆದಿರಾಜ್ ಪ್ರಾಸ್ತಾವಿಕವಾಗಿ ಮಾತಾಡಿದರು,
































