ಜಿ.ಕೆ. ಎಸ್ಟೇಟ್ನಲ್ಲಿ ಸಿಓಡಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ಶ್ರೀಧರ ಭಟ್
ಭಾಗ-15
ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಓಡಿ ಪೊಲೀಸರು ಆರೋಪಿಗಳ ವಿವಿಧ ಕಡೆಗಳಲ್ಲಿ ಬಂಧಿಸಿದ್ದರೂ ಅದನ್ನು ದಾಖಲೆಯ ಮೂಲಕ ರುಜುವಾತುಪಡಿಸಿದ್ದು, ಬೇರೆ ಬೇರೆ ಕಡೆಗಳಲ್ಲಿ. ಇಸ್ಮಾಯಿಲ್ ಅವರನ್ನು ಕೊಲೆಗೈದ ತಂಡದಲ್ಲಿ ಇದ್ದ ಆರೋಪಿಗಳ ಪೈಕಿ ಶ್ರೀಧರ ಭಟ್ ಅವರೂ ಒಬ್ಬರು. ಅವರನ್ನು ಬಂಧಿಸಿದAತಹ ಸಿಓಡಿ ಇನ್ಸ್ಪೆಕ್ಟರ್ ಹಿರೇಮಠ್ ಅವರು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ಗೆ ಪೂರಕವಾಗಿ ಸಾಕ್ಷö್ಯ ನುಡಿದರು. ಅವರ ಹೇಳಿಕೆ ಈ ರೀತಿ ಇದೆ.
ತಾ. 13-2-77ರಲ್ಲಿ ಸಿಓಡಿ ಡಿಎಸ್ಪಿಯವರು 1ನೇ ಆರೋಪಿ ಶ್ರೀಧರ ಭಟ್ಟರನ್ನು ತಲಾಶ್ ಮಾಡಲು ನನ್ನನ್ನು ನೇಮಿಸಿದರು. ಅಂದು ನಾನು ಪೆರಾಜೆಗೆ ಹೋಗಿ ನೋಡಿದಾಗ ಅಲ್ಲಿ 1ನೇ ಆರೋಪಿ ಇರಲಿಲ್ಲ. ತಾ. 14-2-77ರಂದು ಬೆಳಿಗ್ಗೆ 7.30 ಗಂಟೆಗೆ ನಾನು ಮಡಿಕೇರಿ ಹತ್ತಿರವಿರುವ ಜಿ.ಕೆ. ಎಸ್ಟೇಟ್ನ ಕರ್ನಂಗಡಿ ಎಂಬಲ್ಲಿಗೆ ಸಿಓಡಿ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಿಕಿ ಅವರ ಜೊತೆಯಲ್ಲಿ ಹೋದೆ. ಆಗ ಅಲ್ಲಿ 1ನೇ ಆರೋಪಿ ಶ್ರೀಧರ ಭಟ್ಟರು ಗೋಪಾಲ ಕೃಷ್ಣ ಅವರ ಮನೆಯ ಅಂಗಳದಲ್ಲಿ ಇದ್ದರು. ಪುತ್ತೂರಿಗೆ ಡಿಎಸ್ಪಿಯವರ ಹತ್ತಿರ ಬರುವಂತೆ ನಾವು 1ನೇ ಆರೋಪಿಯನ್ನು ಕೇಳಿಕೊಂಡಾಗ ಅವರು ನಮ್ಮೊಡನೆ ಬಂದರು. ಅಂದೇ ಅವರನ್ನು ಸಿಓಡಿ ಡಿಎಸ್ಪಿಯವರ ಮುಂದೆ ಪುತ್ತೂರಿನಲ್ಲಿ ಹಾಜರುಪಡಿಸಿದೆವು’ ಎಂದು ಹಿರೇಮಠ್ ಹೇಳಿದರು.
ನಿಡಿಂಗಲ್ಲು ಬ್ರಿಡ್ಜ್ ಬಳಿ
ತಾ. 18-2-77ರಂದು 1ನೇ ಆರೋಪಿ ಶ್ರೀಧರ ಭಟ್ಟರು ತೋರಿಸಿದಂತೆ ಸಿಓಡಿ ಡಿಎಸ್ಪಿಯವರ ಜೊತೆ ನಿಡಿಂಗಲ್ಲು ಬ್ರಿಡ್ಜ್ ಸಮೀಪಕ್ಕೆ ಸಾಕ್ಷಿಗಳೊಂದಿಗೆ ನಾನೂ ಹೋದೆ. ಅಲ್ಲಿಗೆ ತಲುಪುವಾಗ ಸುಮಾರು ರಾತ್ರಿ 8 ಅಥವಾ 8.30 ಗಂಟೆಯಾಗಿರಬಹುದು. ಅಲ್ಲಿ 1ನೇ ಆರೋಪಿ ಶ್ರೀಧರ ಭಟ್ಟರು ನಂಬರ್ ಪ್ಲೇಟು ಬಿಸಾಡಿದ ಸ್ಥಳವನ್ನು ತೋರಿಸಿದರು. ಆತ ರಾತ್ರಿ ಸಮಯವಾದ್ದರಿಂದ ನಂಬರ್ ಪ್ಲೇಟು ಹುಡುಕಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಒಂದು ಮಹಜರು ತಯಾರು ಮಾಡಿದರು. ಆಮೇಲೆ ನಾನು ಮತ್ತು ಇನ್ನೊಬ್ಬ ಕಾನ್ಸ್ಟೇಬಲ್ ಆ ಸ್ತಳದಲ್ಲೇ ಸುತ್ತಮುತ್ತಲಿನ ವಠಾರವನ್ನು ಕಾವಲು ಮಾಡಿದೆ. ಮಾರನೇ ದಿನ ಸುಮಾರು 9.30ರ ವೇಳೆಗೆ ಸಿಓಡಿ ಡಿಎಸ್ಪಿಯವರು ಅಲ್ಲಿಗೆ ಬಂದರು. ಅಚ್ಟರಲ್ಲಿ ಅಲ್ಲಿಗೆ ಬಾಕಿ ಸಾಕ್ಷಿಯವರೂ, ಇತರ ಪೊಲೀಸರೂ ಬಂದರು.
ನಾವೆಲ್ಲರೂ ಸೇರಿ ಆ ಹೊಳೆಯಲ್ಲಿ ಸಂಕದ ಬದಿಗಳಲ್ಲಿ ಸಂಜೆಯವರೆಗೆ ಹುಡುಕಾಡಿದೆವು. ಆದರೆ ನಂಬರ್ ಪ್ಲೇಟು ಸಿಗಲಿಲ್ಲ. ಅದರ ಬಗ್ಗೆ ಒಂದು ಮಹಜರು ತಯಾರು ಮಾಡಿದರು. ಆ ದಿನವೂ ನಾನು ಮತ್ತು ಇನ್ನೊಬ್ಬ ಕಾನ್ಸ್ಟೇಬಲ್ ಅಲ್ಲಿಯೇ ಕಾವಲು ನಿಂತೆವು’ ಎಂದವರು ವಿವರಿಸಿದರು.
ಮಾರನೆಯ ದಿನ ಬೆಳಿಗ್ಗೆ ಸಬ್ ಇನ್ಸ್ಪೆಕ್ಟರ್ ಚೆಯ್ಯಣ್ಣರವರು ಮೆಟಲ್ ಡಿಟೆಕ್ಟರ್ ತೆಗೆದುಕೊಂಡು ಬಂದರು. ಆ ಬಳಿಕ ಸಾಕ್ಷಿಗಳ ಸಹಿತ ನಾವೆಲ್ಲರೂ ಮೆಟಲ್ ಡಿಟೆಕ್ಟರ್ನ ಸಹಾಯದಿಂದ ಹೊಳೆಯಲ್ಲಿ ಹುಡುಕಾಡಿದೆವು. ಸಂಜೆ 3.30ರ ಸಮಯ ಮೆಟಲ್ ಡಿಟೆಕ್ಟರ್ ಮಾಡಿದ ಸಂಜ್ಞೆಯ ಸ್ಥಳದಲ್ಲಿ ಹೊಯಿಗೆಯಡಿಯಲ್ಲಿ ಒಂದು ಜಾಲರಿ ಸಿಕ್ಕಿತು. ಅನಂತರ ಅಲ್ಲಿಂದ ಸುಮಾರು 25 ಅಡಿ ದೂರದಲ್ಲಿ ಮೆಟಲ್ ಡಿಟೆಕ್ಟರ್ ಇನ್ನೊಮ್ಮೆ ಸಂಜ್ಞೆ ಮಾಡಿತು. ಆ ಸ್ಥಳದಲ್ಲಿ ಹೊಯಿಗೆ ತೆಗೆದು ನೋಡಿದಾಗ ನಂಬರ್ ಪ್ಲೇಟು ಸಿಕ್ಕಿತು. ಇವೆಲ್ಲವನ್ನೂ ಮಹಜರು ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡೆ’ ಎಂದು ಹೇಳಿದರು.
ಕೈಯ್ಯಲ್ಲಿ ವಾಚಿತ್ತು
ಅಡ್ಡ ವಿಚಾರಣೆಯಲ್ಲಿ ಮೆಟಲ್ ಡಿಟೆಕ್ಟರ್ ಸುಮಾರು ಒಂದೂವರೆ ಅಡಿ ಆಳದಲ್ಲಿ ಕಬ್ಬಿಣದ ವಸ್ತುಗಳಿದ್ದರೆ ಸಂಜ್ಞೆ ಮಾಡುತ್ತದೆಂದೂ , ಸಾಕ್ಷಿಯವರು ಹೇಳಿ ನಿಡಿಂಗಲ್ಲು ಸೇತುವೆ ಬಳಿ ಮೆಟಲ್ ಡಿಟೆಕ್ಟರ್ಉಪಯೋಗಿಸಿದ ಸಂದರ್ಭದಲ್ಲಿ ತಮ್ಮ ಕೈಯ್ಯಲ್ಲಿ ವಾಚೊಂದು ಇತ್ತೆಂದು ಒಪ್ಪಿಕೊಂಡರು.
1ನೇ ಆರೋಪಿ ಶ್ರೀಧರ ಭಟ್ಟರನ್ನು ನೀವು ಅಲ್ಲಿ ದಸ್ತಗಿರಿ ಮಾಡಿದ್ದಲ್ಲ. ಅವರು ಆ ಮೊದಲೇ ಪೊಲೀಸರ ಸ್ವಾಧೀನದಲ್ಲಿದ್ದರು’ ಎಂದು ಆರೋಪಿ ಪರ ವಕೀಲರು ಹೇಳಿದಾಗ ಅದನ್ನು ಹಿರೇಮಠ್ ನಿರಾಕರಿಸಿ ಅದು ಸರಿಯಲ್ಲವೆಂದು ಹೇಳಿದರು.
ನಿಡಿಂಗಲ್ಲು ಸೇತುವೆ ಬಳಿ ನಂಬರ್ ಪ್ಲೇಟು ಹುಡುಕಾಡಿದುದು ಸುಳ್ಳು. ಅದೆಲ್ಲ ಸಿಓಡಿಯವರ ಸ್ಪಷ್ಟನೆ’ ಎಂದು ಆರೋಪಿಗಳ ಪರ ವಕೀಲರು ಹೇಳಿದುದನ್ನು ಸಾಕ್ಷಿ ನಿರಾಕರಿಸಿದರು. ಮೂರು ಜೀಪುಗಳ ನಂಬ್ರಗಳು ಇರಲಿಲ್ಲ 63ನೇ ಸಾಕ್ಷಿ ಎಚ್. ವಿ. ತಿಮ್ಮಯ್ಯ ಅವರು ತಮ್ಮ ಹೇಳಿಕೆ ನೀಡುತ್ತಾ ನಾನು ಮಂಗಳೂರಿನಲ್ಲಿ ಎಸಿಸ್ಟೆಂಟ್ ರೀಜನಲ್ ಟ್ರಾನ್ಸ್ಪೋರ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಸಿಓಡಿ ಸಬ್ ಇನ್ಸ್ಪೆಕ್ಟರ್ ಅವರು ನಮ್ಮ ಕಚೇರಿಗೆ ಬಂದು ದಕ್ಷಿಣ ಕನ್ನಡದಲ್ಲಿರುವ ಜೀಪುಗಳ ಒಂದು ಪಟ್ಟಿಯನ್ನು ಕೊಡಬೇಕೆಂದು ಕೇಳಿದ ಮೇರೆಗೆ ನಾನು ಒಂದು ಪಟ್ಟಿಯನ್ನು ಕೊಟ್ಟಿದ್ದೇನೆ. ಈ ಜೀಪುಗಳ ಬಗ್ಗೆ ಇರುವ ದಾಖಲೆಗಳು ಅನೇಕ ಪುಸ್ತಕಗಳಲ್ಲಿವೆ. ಅವರು ಕೂಡಲೇ ಆ ಪಟ್ಟಿ ಕೊಡಬೇಕೆಂದು ಕೇಳಿದ ಕಾರಣ ಆ ಯಾದಿಯನ್ನು ಕೊಡುವಾಗ ಮೂರು ಜೀಪುಗಳ ನಂಬ್ರ ಬಿಟ್ಟು ಹೋಗಿದೆ. ಹಾಗೆ ಬಿಟ್ಟು ಹೋದ ಜೀಪುಗಳ ಎಂವೈಜಿ 3501(ನೆರಿಯಾ ಎಸ್ಟೇಟಿನವರ ಜೀಪು), ಎಂವೈಜಿ 3490(ತೋಡಿಕಾನದ ಕೆ.ಎಸ್. ನಾರಾಯಣ ಭಟ್ಟರ ಜೀಪು) ಮತ್ತು ಎಂವೈಜಿ 3536 (ದ.ಕ. ಎಸ್ಪಿಯವರದು) ಆಗಿದೆ’ ಎಂದು ತಿಳಿಸಿದರು.
ಬೆಂಚ್ ಕ್ಲರ್ಕರ ಹೇಳಿಕೆ
64ನೇ ಸಾಕ್ಷಿ ಕೆ.ಆರ್. ಪುತ್ತೂರಾಯ ಅವರು ತಮ್ಮ ಹೇಳಿಕೆಯಲ್ಲಿ `ನಾನು ಬಂಟ್ವಾಳ ಮೆಜಿಸ್ಟೆçÃಟ್ ಕೋರ್ಟಿನಲ್ಲಿ ಬೆಂಚ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ. ಜೂನ್ 75ರಿಂದ ನಾನು ಆ ಕೆಲಸದಲ್ಲಿದ್ದೇನೆ ಬಂಟ್ವಾಳ ಪೊಲೀಸ್ ಸ್ಟೇಶನ್ನ ಕ್ರೆöÊಂ ನಂಬ್ರ 87/74ನೇ ಕೇಸಿನಲ್ಲಿ ಹಾಕಿದ ಚಾರ್ಜ್ಶೀಟನ್ನು ತಾ. 30-5-74ರಲ್ಲಿ ಸಿ.ಸಿ..563/74 ಆಗಿ ದಾಖಲು ತೆಗೆದುಕೊಳ್ಳಲಾಯಿತು. ಅದರಲ್ಲಿ ಒಟ್ಟು 37 ಮಂದಿ ಆರೋಪಿಗಳಿದ್ದರು. ಆ ಕೇಸಿನಲ್ಲಿ ಡಾ. ಪ್ರಭಾಕರ ಭಟ್ಟರು 2ನೇ ಆರೋಪಿಯಾಗಿದ್ದರು. ಈ ಕೇಸಿನ 2ನೇ ಆರೋಪಿ ಪುರಂದರ ಭಟ್ಟರು ಆ ಕೇಸಿನಲ್ಲಿ 3ನೇ ಆರೋಪಿಯಾಗಿದ್ದರು. ಈ ಕೇಸಿನ 4ನೇ ಆರೋಪಿ ಮಹಾಬಲ ದೇವಾಡಿಗರು ಆ ಕೇಸಿನಲ್ಲಿ 12ನೇ ಆರೋಪಿಯಾಗಿದ್ದರು. ತಾ. 13-9-76ರಂದು ಆ ಕೇಸಿನ ವಿಚಾರಣೆಯಿದ್ದರೂ ಆ ದಿನ ಪುರಂದರ ಭಟ್ಟರು ಮತ್ತು ಮಹಾಬಲ ದೇವಾಡಿಗರು ಹಾಜರಾಗÀಲಿಲ್ಲ. ಬಳಿಕ ಕೇಸನ್ನು 30-10-76ಕ್ಕೆ ಮುಂದೂಡಲಾಯಿತು. ಆದರೆ ಆ ದಿನ ಪುರಂದರ ಭಟ್ಟರು ಮತ್ತು ಮಹಾಬಲ ದೇವಾಡಿಗರು ಹಾಜರಿರಲಿಲ್ಲ. ಆಮೇಲೆ ಕೇಸು 27-11-76ಕ್ಕೆ ವಾಯಿದೆಯಾಯಿತು. ಅಂದೂ ಪುರಂದರ ಭಟ್ಟರು ಮತ್ತು ಮಹಾಬಲ ದೇವಾಡಿಗರು ಹಾಜರಿರಲಿಲ್ಲ. ಆ ದಿನ ಪುರಂದರ ಭಟ್ಟರು ಮೃಸಾದಲ್ಲಿ ಒಳಗಿರುವುದಾಗಿ ಅರ್ಜಿ ಹಾಕಲಾಯಿತು. ಮಹಾಬಲ ದೇವಾಡಿಗರಿಗೆ ಅರೆಸ್ಟ್ ವಾರೆಂಟ್ ಕಳುಹಿಸುವಂತೆ ಮೆಜಿಸ್ಟೆçÃಟ್ರವರು ಆಜ್ಞೆ ಮಾಡಿದರು. ಆ ಬಳಿಕ ತಾ 18-12-76ರಲ್ಲೂ ಮಹಾಬಲ ದೇವಾಡಿಗರು ಹಾಜರಿರದೆ ಅಂದು ಕೂಡಾ ಅವರಿಗೆ ಅರೆಸ್ಟ್ ವಾರೆಂಟ್ ಕಳುಹಿಸಲಾಯಿತು. ಮತ್ತು ಕೇಸನ್ನು 6-1-77ಕ್ಕೆ ಮುಂದೂಡಲಾಯಿತು. ತಾ.6-1-77ರಂದು ಕೂಡಾ ಮಹಾಬಲ ದೇವಾಡಿಗರು ಹಾಜರಿರಲಿಲ್ಲ. ಅಂದು ಕೂಡಾ ಅವರಿಗೆ ಅರೆಸ್ಟ್ ವಾರೆಂಟ್ ಕಳುಹಿಸಲಾಯಿತು. ಮತ್ತು 19-1-77ಕ್ಕೆ ವಾಯಿದೆಯಾಯಿತು. ತಾ. 19-1-77ರಂದು ಕೂಡಾ ಮಹಾಬಲ ದೇವಾಡಿಗರು ಗೈರು ಹಾಜರಾದ ಕಾರಣ ಕೇಸನ್ನು 4-2-77ಕ್ಕೆ ಮುಂದೂಡಿ ಮಹಾಬಲ ದೇವಾಡಿಗರಿಗೆ ಅರೆಸ್ಟ್ ವಾರೆಂಟ್ ಕಳುಹಿಸಲಾಯಿತು. ತಾ. 4-2-77ರಂದು ಕೂಡಾ ಮಹಾಬಲ ದೇವಾಡಿಗರು ಹಾಜರಿರದ ಕಾರಣ ಅವರ ಬಗ್ಗೆ ಕೇಸನ್ನು ವಿಂಗಡಿಸಿ ಪ್ರತ್ಯೇಕ ಕೇಸು ಇಟ್ಟಿತು ಎಂದು ವಿವರಿಸಿದರು.
ಅಡ್ಡ ವಿಚಾರಣೆಯಲ್ಲಿ ತಾ 13-9-76ರಂದು ಆರೋಪಿಗಳು ಇಲ್ಲದ ಬಗ್ಗೆ ವಕೀಲರು ಅರ್ಜಿಯೊಂದನ್ನು ಕೊಟ್ಟಿದ್ದರೆಂದೂ, ಆರೋಪಿಗಳ ಪರವಾಗಿ ಎನ್. ಎಸ್. ಕೆದಿಲಾಯರು ವಕೀಲರಾಗಿದ್ದರೆಂದೂ, ಮಹಾಬಲ ದೇವಾಡಿಗರು ಜೂನ್ 26ರಿಂದಲೇ ಕೇಸಿಗೆ ಹಾಜರಾಗುತ್ತಿರಲಿಲ್ಲವೆಂದೂ ಸಾಕ್ಷಿಯವರು ಹೇಳಿದರು.
ಇಷ್ಟಲ್ಲದೆ ಮೇಲೆ ಹೇಳಿದ ಕೇಸಿನಲ್ಲಿ ಇಸ್ಮಾಯಿಲ್ ಅವರು ಸಾಕ್ಷಿ ಹೇಳಿದ್ದರೆಂದೂ, ಮತ್ತು ಸದಾನಂದ ಪೈಯವರ ಹೆಸರು ಸಾಕ್ಷಿಗಳ ಪಟ್ಟಿಯಲ್ಲಿತ್ತೆಂದೂ ಪುತ್ತೂರಾಯರು ತಿಳಿಸಿದರು.
ಮೇಲಿನ ಎಲ್ಲಾ ಆರೋಪಿಗಳನ್ನು ಕೋರ್ಟಿನಲ್ಲಿ ಅರೋಪಗಳಿಂದ ಬಿಡುಗಡೆ ಮಾಡಲಾಯಿತೆಂದೂ, ಮಹಾಬಲ ದೇವಾಡಿಗರ ಮೇಲಿನ ಪ್ರತ್ಯೇಕಿಸಲಾದ ಕೇಸನ್ನು ತೆಗೆದುಹಾಕಲಾಗಿದೆಯೆಂದೂ ಸಾಕ್ಷಿಯವರು ಹೇಳಿದರು.
ಮುಂದುವರಿಯುವುದು…..




































