ಜಿ .ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ.),ಉಡುಪಿ ಜಿಲ್ಲೆ 12ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಮತ್ತು ಜಿಎಸ್ಬಿ ಪ್ರತಿಭಾ ಪುರಸ್ಕಾರ :2025-26
ಉಡುಪಿ : ಜಿ .ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ (ರಿ.),ಉಡುಪಿ ಜಿಲ್ಲೆ 12ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಮತ್ತು ಜಿಎಸ್ಬಿ ಪ್ರತಿಭಾ ಪುರಸ್ಕಾರ :2025-26 ಆಗಸ್ಟ್ 17ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ನೆರವೇರಲಿದೆ.
ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದು,ಶೈಕ್ಷಣಿಕ ಸಾಧನೆಗೈದಿರುವರಾಜ್ಯದ ಯಾವುದೇ ಜಿಲ್ಲೆ ಮತ್ತು ದೇಶದ ಯಾವುದೇ ರಾಜ್ಯದಲ್ಲಿ ಅಥವಾ ವಿದೇಶದಲ್ಲಿ ನೆಲೆಸಿರುವ ಜಿಎಸ್ಬಿ ಸಮಾಜದ ಕುಟುಂಬಗಳ ಶೈಕ್ಷಣಿಕ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ಪೋಷಕ ನಿಧಿವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪ್ರೋತ್ಸಾಹಕ ನಗದು ಬಹುಮಾನದಜೊತೆಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರ ಯಾವುದೇ ಜಿಲ್ಲೆಗಳಿಂದ ಸಮಾರಂಭದಲ್ಲಿ ಭಾಗವಹಿಸಲು ಪ್ರಯಾಣ ವೆಚ್ಚ ( ಬಸ್ಸು ಅಥವಾ ರೈಲು ಟಿಕೆಟ್ ) ನೀಡಲಾಗುವುದು.
ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 61೦ ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ (ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಪಡೆದಿರುವ ವಿದ್ಯಾರ್ಥಿಗಳಿಗೆ 625ರಲ್ಲಿ 605 ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕಗಳಿಸಿದವರಿಗೆ.)
ಕಳೆದ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 585ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ (ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 600 ಅಂಕಗಳಲ್ಲಿ 575 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದವರಿಗೆ.
CET,NEET,COMED_K,JEE ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 100ರ ಒಳಗೆ ರ್ಯಾಂಕ್ ಗಳಿಸಿದವರಿಗೆ, KAS,IAS,IPS,IRS ಮೊದಲಾದ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ.
ಕಳೆದ ಸಾಲಿನಲ್ಲಿ ಯಾವುದೇ ಪದವಿ ,ಇಂಜಿನಿಯರಿಂಗ್ ವೈದ್ಯಕೀಯ,ಫಾರ್ಮಸಿ ಕಾನೂನು, ಸ್ನಾತಕೋತ್ತರ ಪದವಿಯಲ್ಲಿ Rank ಗಳಿಸಿದವರಿಗೆ.
ಯಾವುದೇ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಪಡೆದವರಿಗೆ.
ಸಿಎ ಮತ್ತು ಸಿಎಸ್ ಪರೀಕ್ಷೆ ಉತ್ತೀರ್ಣರಾದವರಿಗೆ
ಈ ಮೇಲಿನ ಯಾವುದೇ ಶೈಕ್ಷಣಿಕ ವಿಭಾಗಗಳಲ್ಲಿ ಈ ಮೇಲೆ ತಿಳಿಸಿರುವಂತಹ ಅತ್ಯುನ್ನತ ಸಾಧನೆ ಮಾಡಿದ ಜಿಎಸ್ಬಿ ಸಮಾಜದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಭಾವಚಿತ್ರ, ಹೆಸರು, ಹೆತ್ತವರ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ವಿವರಗಳನ್ನು ಜುಲೈ 31ರ ಒಳಗಾಗಿ ನೋಂದಾಯಿತ ಅಂಚೆ ಮೂಲಕ ಕಳುಹಿಸಿಕೊಡಬೇಕು.
ಹೆಚ್ಚಿನ ವಿವರಗಳಿಗಾಗಿ ವೇದಿಕೆಯ ಮೊಬೈಲ್ ವಾಟ್ಸಪ್ ಸಂಖ್ಯೆ 9480231630 ಸಂಪರ್ಕಿಸಬಹುದು.
ಜಿ.ಎಸ್. ಬಿ .ಸಮಾಜ ಹಿತ ರಕ್ಷಣಾ ವೇದಿಕೆ (ರಿ.), ಆಭರಣ ಜ್ಯುವೆಲ್ಲರ್ಸ್ ಮುಂಭಾಗ, ರಥಬೀದಿ, ಕಾರ್ಕಳ _ 574 104 ಉಡುಪಿ ಜಿಲ್ಲೆ
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.)
ಆರ್ಥಿಕವಾಗಿ ಹಿಂದುಳಿದ ಜಿ ಎಸ್ ಬಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ 2025-26:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದಿರುವ ಜಿಎಸ್ ಬಿ ಕುಟುಂಬಗಳ ವಿದ್ಯಾರ್ಥಿಗಳಿಗೆ ” ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ” ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹತ್ತನೇ ತರಗತಿ (ಎಸ್ ಎಸ್ ಎಲ್ ಸಿ) ಮತ್ತು ಮೇಲ್ಪಟ್ಟು ಯಾವುದೇ ಪದವಿ ಶಿಕ್ಷಣದ ವರೆಗೆ ಆರ್ಥಿಕವಾಗಿ ಹಿಂದುಳಿದಿರುವ ( ವಾರ್ಷಿಕ ಆದಾಯ ರೂ 2,40,000/-ಮೀರದವರಿಗೆ ಮಾತ್ರ )ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ
ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ
ಉಡುಪಿ, ದ.ಕ.,ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನು ಕಳೆದುಕೊಂಡಿರುವ ಜಿ ಎಸ್ ಬಿ ಸಮಾಜದ ವಿದ್ಯಾರ್ಥಿಗಳು ಯಾವುದೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೂ ಕೂಡ ಈ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಫಾರ್ಮ್ಗಳಿಗಾಗಿ ಹಿತರಕ್ಷಣಾ ವೇದಿಕೆಯ ವಾಟ್ಸಪ್ ನಂಬರ್ 9480231630 ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಅರ್ಜಿ ಫಾರ್ಮ್ ಗಳನ್ನು ಪಡೆದುಕೊಳ್ಳಬಹುದು.
ಅರ್ಜಿ ಫಾರ್ಮ್ ಪ್ರಿಂಟ್ ತೆಗೆದು ವಿವರಗಳನ್ನು ತುಂಬಿಸಿ ಅರ್ಜಿ ಫಾರ್ಮನಲ್ಲಿ ತಿಳಿಸಿರುವ ವೇದಿಕೆಯ ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸಿ ಕೊಡಬೇಕೆಂದು ವಿದ್ಯಾ ಪೋಷಕ ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷರಾದ ಸಿಎ ಎಸ್ ಎಸ್ ನಾಯಕ್, ಜಿಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ ,ಅಧ್ಯಕ್ಷರಾದ ಜಿ. ಸತೀಶ್ ಹೆಗಡೆ, ಕೋಟ ಮತ್ತು ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ


























