ಜಿ.ಎಸ್.ಟಿ ಅನುಸರಣೆಯಲ್ಲಿ ಪ್ರಮಾಣ ಪತ್ರ ಕೋರ್ಸ್ ಆರಂಭ

Picture of RB NEWS

RB NEWS

Bureau Report


ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜುನಲ್ಲಿ ಜಿ.ಎಸ್.ಟಿ ಅನುಸರಣೆಗೆ ಸಂಬoಧಿಸಿದoತೆ ಹೊಸ ಪ್ರಮಾಣ ಪತ್ರ ಕೋರ್ಸ್ನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವು ವಾಣಿಜ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಯ ಮಾಹಿತಿಯನ್ನು ಆಳವಾಗಿ ಗ್ರಹಿಸಲು ಅವಕಾಶ ನೀಡುತ್ತದೆ.
ಎಸ್.ಬಿ.ಸಿ. ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಬಿ, ಕಾರ್ಯಕ್ರಮ ಉದ್ಘಾಟಿಸಿ, ಇತ್ತೀಚಿನ ವಾಣಿಜ್ಯ ನೀತಿ, ಜಿ.ಎಸ್.ಟಿ.ಯ ಸವಾಲುಗಳು ಮತ್ತು ಅನ್ವಯ ವಿಧಾನಗಳ ಕುರಿತು ಮಾತನಾಡಿದರು. ಈ ಕೋರ್ಸ್ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿ ಬಗ್ಗೆ ಉತ್ತಮ ಅವಗಾಹನೆ ನೀಡಲು ಉದ್ದೇಶಿಸಲಾಗಿದೆ. ಈ ಕೋರ್ಸ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಬಾರಿಗೆ ಭುವನೇಂದ್ರ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಚೇಂಬರ್ ಆಫ್ ಕಾಮರ್ಸ್ (ಕೆ.ಸಿ.ಸಿ.ಐ) ಅಧ್ಯಕ್ಷ ಆನಂದ ಜಿ. ಪೈ ಮಾತನಾಡಿ, ಈ ಕೋರ್ಸ್ ಉದ್ಯೋಗದ ಆಧಾರದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಅತಿಥಿಗಳಾಗಿ ಇನ್‌ಡೈರೆಕ್ಟ್ ಟ್ಯಾಕ್ಸ್ (ಕೆ.ಸಿ.ಸಿ.ಐ) ಅಧ್ಯಕ್ಷ ಸಿ.ಎ ಕೇಶವ ಎನ್. ಬಲಕುರಾಯ, ಜಿ.ಎಸ್.ಟಿ.ಯ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು.
ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top