ಜಿಲ್ಲಾ ಮಿನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಸಮಾವೇಶ

Picture of RB NEWS

RB NEWS

Bureau Report

ಉಡುಪಿ: ಜಿಲ್ಲಾ ಮಿನುಗಾರರ ಮತ್ತು ಮೀನು ಕಾರ್ಮಿಕರ ಸಂಘ.ರಿ. (ಸಿಐಟಿಯು) ಇದರ ಸಮಾವೇಶ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರುಗಿತು.

ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ದುಡಿಯುವ ವರ್ಗದ ಕಾರ್ಮಿಕರಿಗೆ ಸರಕಾರದ ಕೆಲವು ಕಾನೂನು ತಿದ್ದುಪಡಿಯಿಂದಾಗಿ ಸರಿಯಾದ ವೇತನ,ಕೆಲಸ ಸಿಗುತ್ತಿಲ್ಲ.ಮೀನುಗಾರಿಕೆಯಲ್ಲಿ ದುಡಿಯುವ ಕಾರ್ಮಿಕರು ಇಂದು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆ ಯನ್ನು ಕೆ.ಶಂಕರ್ ವಹಿಸಿದ್ದರು.

ಬೀಡಿ ಅಂಡ್ ಟೊಬ್ಯಾಕೋ ಲೆಬರ್ ಯೂನಿಯನ್ ಉಡುಪಿ ಇದರ ಕಾರ್ಯದರ್ಶಿ ಉಮೇಶ್ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಮೀನುಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಪ್ರಾಸ್ತಾವಿಕ ವಾಗಿ ಮಾತಾನಾಡಿದು. ಮುಖಂಡರಾದ ಅನ್ವರ್ ಕಟಪಾಡಿ,ಇಸ್ಮಾಯಿಲ್ ಕಾಪು,ಇಕ್ಬಾಲ್ ಉಡುಪಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top