ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ: ಹಗ್ಗ ಜಗ್ಗಾಟ ಸ್ಪರ್ಧೆ ರಾಮಕ್ಷತ್ರಿಯ ಸಂಘ ಕಾರ್ಕಳಕ್ಕೆ ದ್ವಿತೀಯ ಪ್ರಶಸ್ತಿ

Picture of RB NEWS

RB NEWS

Bureau Report

ಉಡುಪಿ: ರಾಮಕ್ಷತ್ರಿಯ ಯುವ ಸಂಘ ನೀಲಾವರ ಘಟಕದ ನೇತೃತ್ವದಲ್ಲಿ ರಾಮಕ್ಷತ್ರಿಯ ಯುವ ಸಂಘ ಉಡುಪಿ, ರಾಮಕ್ಷತ್ರಿಯ ಸಂಘ(ರಿ)ಉಡುಪಿ, ರಾಮಕ್ಷತ್ರಿಯ ಮಹಿಳಾ ಮಂಡಲ ಉಡುಪಿ, ಸಾಸ್ತಾನ, ಸಂತ್ಯಾರು, ಕಾಪು, ಉಡುಪಿ ನಗರ ಘಟಕಗಳ ಸಹಕಾರದಿಂದ ದಶಮಾನೋತ್ಸವ ಪ್ರಯುಕ್ತ ದಶಮಿಯಂದು ದಶಮ ಸಂಭ್ರಮದ ಅಂಗವಾಗಿ
ಅಕ್ಟೋಬರ್ 13ರಂದು ‌ಸೀತಾನದಿ ತಟದ ಪಂಚಮಿ ಕಾನನದಲ್ಲಿ ಜರುಗಿತು.

ರಾಮಕ್ಷತ್ರಿಯ ಸಮಾಜಬಾಂಧವರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಯುವಕರ ತಂಡ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ.

ಅಲ್ಲದೇ ವೈಯಕ್ತಿಕವಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಈ ತಂಡವು ಒಟ್ಟು 24 ಬಹುಮಾನಗಳನ್ನು ತನ್ನದಾಗಿಸಿಕೊಂಡಿತು.


ವಿಜೇತ ತಂಡಕ್ಕೆ ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಅಧ್ಯಕ್ಷರಾದ ಗುರುಪ್ರಸಾದ್ ರಾವ್ ಅಜೆಕಾರ್ ಸಂಘದ ಪರವಾಗಿ ಅಭಿನಂದಿಸಿದ್ದಾರೆ.

ತಂಡದಲ್ಲಿ ನಲ್ಲೂರು, ಕೆರ್ವಾಶೆ ಹಾಗೂ ಅಂಡಾರಿನ ಯುವಕರಾದ ಸುಶಾಂತ್, ನಾಗರಾಜ್, ನಿಖಿಲ್, ವಿಘ್ನೇಶ್, ಮಹೇಶ್ ರಾವ್, ಸುಶಾಂತ್ ರಾವ್, ನಾಗರಾಜ್ ರಾವ್, ವಿಘ್ನೇಶ್ ರಾವ್,ವಿಶ್ವನಾಥ್, ಸುಮಂತ್, ಪ್ರತೀಕ್ಷ್, ಅಕ್ಷಯ್, ವಿಘ್ನೇಶ್, ದೀಪಕ್, ಮನೋಜ್ ಹಾಗೂ ಆದರ್ಶ್ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top