ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ ಕುಮಾರ್ ಗೆ ಮುಖ್ಯಮಂತ್ರಿ ಪದಕ

Picture of RB NEWS

RB NEWS

Bureau Report

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ.ಅರುಣ್ ಕುಮಾರ್ ಐ. ಪಿ. ಎಸ್ ಅವರ ಸೇವಾ ವಿಶಿಷ್ಟತೆಯನ್ನು ಪರಿಶೀಲಿಸಿ ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ.
ಹೃದಯ ತಜ್ಞ (ಕಾರ್ಡಿಯಾಲೊಜಿಸ್ಟ್) ವೈದ್ಯನಾಗಿರುವ ಡಾ.ಅರುಣ್ ಕುಮಾರ್ ಐ. ಪಿ. ಎಸ್, ಬಹಳ ಶಿಸ್ತು ಮತ್ತು ಕಾನೂನಿನ ಚೌಕಟ್ಟಿನೊಳಗೇ ಹಠ ಹಿಡಿದು ಆಡಳಿತ ಮಾಡುವುದರಿಂದ ಕೆಲವೊಮ್ಮೆ ಅನೇಕರಿಗೆ ತುಂಬಾ ಮುಜುಗರ ಮತ್ತು ಅಸಹನೆ ಉಂಟಾಗುವುದು ಹೊರತು ಪಡಿಸಿದರೆ ಅವರೊಬ್ಬ ಉತ್ತಮ ಪೊಲೀಸ್ ಅಧಿಕಾರಿ ಅನ್ನುವುದಕ್ಕೆ ಮತ್ಸರವಿಲ್ಲ.
ಅವರೊಬ್ಬ , ಅಡ್ಡ/ಅಡ್ಡೆ,ದಂಧೆಗಳನ್ನು ,ಅಕ್ರಮ ವಹಿವಾಟುಗಳನ್ನು ನಿಗ್ರಹಿಸಬೇಕು ,ಸಮಾಜದಲ್ಲಿನ ಸುಶಿಕ್ಷಿತ ಯುವಜನರ ಶಕ್ತಿಯ ಪಾತ್ರ ಪರಿಪೂರ್ಣವಾಗಬೇಕು ಎನ್ನುವ ಹೋರಾಟದ ಧ್ಯೇಯ ಹೊತ್ತುಕೊಂಡ ಪೊಲೀಸ್ ಅಧಿಕಾರಿಯಾಗಿರುತ್ತಾರೆ.
ಡಾ.ಅರುಣ್ ಕುಮಾರ್ ಐ. ಪಿ. ಎಸ್. ಅವರ ಶಿಸ್ತುಕ್ರಮ ವಿಶೇಷ ಏನೆಂದರೆ , ತನ್ನ ಕೈಕೆಳಗೆ ಕೆಲಸ ಮಾಡುವ ಪೊಲೀಸರ ತಪ್ಪನ್ನು ಗುರುತಿಸಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವುದು! ಸಮಾಜದಲ್ಲಿನ ಅನೈತಿಕ,ಅಕ್ರಮಗಳು ನಡೆಯುವಲ್ಲಿ ಪೊಲೀಸ್ ಬೆಂಬಲ ಮತ್ತು ಮುನ್ಸೂಚನೆ ಇದ್ದೇ ಇದೆ ಅನ್ನುವ ಪೊಲೀಸ್ ಹೃದಯ ಬಡಿತವನ್ನು ಡಾ.ಅರುಣ್ ಕುಮಾರ್ ಅರ್ಥಮಾಡಿಕೊಂಡಿದ್ದಾರೆ. ಅಮಾನತಿಗೆ ಷರಾ ಬರೆಯುವಾಗ ಪೊಲೀಸಪ್ಪನ ಯಾವ ಮಾತು ನಯ ದೈನ್ಯತೆಯನ್ನೂ ನೋಡಲೊಪ್ಪದೆ ಪುಸ್ತಕದ ಹಾಳೆಯನ್ನೇ ನೋಡುತ್ತಿರುತ್ತಾರೆ!
ಡಾ.ಅಶೋಕ್ ಕುಮಾರ್ ನಾಗರಿಕರೊಡನೆ ಹೃದ್ಯವಾಗಿ ಮಾತನಾಡುತ್ತಾರೆ. ತನ್ನ ಅಧಿಕೃತ ಕಚೇರಿಯೊಳಗೆ ನಾಗರಿಕರು ಬಂದು ಮಾತಾನಾಡುವಾಗಲೂ ನಮ್ರತೆಯಿಂದ ಸ್ಪಂದಿಸುತ್ತಾರೆ. ವಿಷಯಗಳನ್ನು ತಿಳಿದುಕೊಂಡು ಎದುರಿನವನಿಗೆ ಸೂಕ್ತ ಸಲಹೆ ಇತ್ಯಾದಿಯನ್ನು ಮನದಟ್ಟು ಮಾಡುತ್ತಾರೆ. ಕಳೆದ ತಿಂಗಳಲ್ಲಿ ಪುತ್ತೂರಿನ ನನ್ನ ಆತ್ಮೀಯನೊಬ್ಬ ಅವರನ್ನು ಭೇಟಿಯಾಗಿ ಬಂದು ಅವರ ಬಗ್ಗೆ ಬಹಳ ಮೆಚ್ಚುಗೆ ಹೇಳಿದ್ದನು.

ಡ್ರಗ್ಸ್ ಸೇವನೆ ,ಕುಡಿತ ,ಜೂಜಾಟ ಮುಂತಾದ ದುಶ್ಚಟಗಳಿಗೆ ಬಲಿಯಾಗದಂತೆ,ವ್ಯಸನಿಗಳಾಗದಿರುವಂತೆ ತುಂಬಾ ಮನಮುಟ್ಚುವ ಹಾಗೆ ಅವರು ಯುವಜನತೆಗೆ,ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾರೆ. ಶಿಕ್ಷಣ ಹಾಗೂ ನಾಗರಿಕ ಪ್ರಮಾಣಪತ್ರವೂ ಇಲ್ಲದ ಪ್ರಾಣಿಗಳಿಗೆ ಯಾವ ದುಶ್ಚಟವೂ ಇಲ್ಲ ಎಂದು ಮಾತಿನ ಮೊನೆಯನ್ನು ಯುವಕರ ಹೃದಯಕ್ಕೇ ತಾಗಿಸುತ್ತಾರೆ. ಯುವ ಜನತೆಯು ಕೆಟ್ಟ ಆಮಿಷಗಳತ್ತ ಕಣ್ಣೆತ್ತಿ ನೋಡದ ಹಾಗೆ, ಊಹನೆಯೂ ಮಾಡಿಕೊಳ್ಳದ ಹಾಗೆ ಯೋಗ್ಯ ತಿಳುವಳಿಕೆ ಹೇಳುತ್ತಾರೆ.

ಇತ್ತೀಚಿನ ದಿನದಲ್ಲಿ ಕರ್ತವ್ಯದಿಂದ ಅಮಾನತ್ತುಗೊಂಡಿರುವ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಅವರ ವಿರುದ್ಧ ಅಳದಂಗಡಿ ನಿವಾಸಿ ಶಿಕ್ಷಕಿಯೊಬ್ಬರು ನೀಡಿದ್ದ ದೂರನ್ನು ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಎಫ್ ಐ. ಆರ್. ಮಾಡಿಸಿದ್ದೂ ಅವರ ಕರ್ತವ್ಯ ನಿಷ್ಠೂರತೆಗೆ ಹಿಡಿದ ಕೈಗನ್ನಡಿಯಾಗಿದೆ.
ನಾಗರಿಕರನ್ನು ದಂಡಿಸುವುದಕ್ಕೆ ಮೊದಲು ಇಲಾಖೆಯ ನೌಕರರನ್ನು ದಂಡಿಸುವ ಶಿಸ್ತು ಕ್ರಮವನ್ನೂ ಜಾರಿಗೊಳಿಸಿಕೊಂಡರೆನೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಸಾಧ್ಯ ಅನ್ನುವುದನ್ನು ಡಾ.ಅರುಣ್ ಕುಮಾರ್ ಐ. ಪಿ. ಎಸ್. ,ತೋರಿಸಿಕೊಟ್ಟಿದ್ದಾರೆ.

ಮೂಲತಃ ತಮಿಳುನಾಡಿನವರಾಗಿದ್ದು, 2014ರ ಗುಂಪಿನ ಐಪಿಎಸ್ ಅಧಿಕಾರಿಯಾಗಿರುವ ಅವರು ಅದಕ್ಕೆ ಮೊದಲು ಪಾಂಡಿಚೇರಿ ವೈದ್ಯಕೀಯ ಶಿಕ್ಷಣ ಸಂಸ್ಥೆನಲ್ಲಿ ವೈದ್ಯಕೀಯ ಪದವಿ(ಎಂ. ಬಿ.,ಬಿ. ಎಸ್)ಪಡೆದಿರುತ್ತಾರೆ. ಹೃದಯ ತಜ್ಞ ವೈದ್ಯನಾಗಿದ್ದಾರೆ.
ಚಿತ್ರದುರ್ಗ,ದಾವಣೆಗೆರೆ,ವಿಜಯಪುರ,ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ದ್ದಾರೆ. ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಮುಂಚೆ ಕಲಬುರ್ಗಿಯಲ್ಲಿನ ಪೊಲೀಸ್ ತರಬೇತಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್. ಪಿ. ಯಾಗಿ ಸೇವೆಗೈಯುತ್ತಿದ್ದಾರೆ.
ಡಾ.ಅರುಣ್ ಕುಮಾರ್ ಐ. ಪಿ. ಎಸ್. ರಂತಹ ದಕ್ಷ ಪೊಲೀಸ್ ಅಧಿಕಾರಿಗಳ ಸೇವೆಯ ಅಗತ್ಯ ಇವತ್ತಿನ ಸಮಾಜಕ್ಕೆ ಅಗತ್ಯವಾಗಿದೆ. ಸಾಮಾಜಿಕ ನ್ಯಾಯಗಳು,ಆಚರಣೆಗಳು,ಬದ್ಧತೆಗಳೊಡನೆ ಮನವರಿಕೆ,ಹೊಂದಾಣಿಕೆಯಿಂದ ನಡೆದುಕೊಂಡಾಗ ಎಲ್ಲವೂ ಕೂಡಾ ಒಬ್ಬ ಅಧಿಕಾರಿಯ ನಿರೀಕ್ಷೆಯಂತೆ ಸಮಾಜದಲ್ಲಿ ಅತ್ಯುತ್ತಮ ಬದಲಾವಣೆ ತರುವುದಕ್ಕೆ ಖಂಡಿತ ಸಾಧ್ಯವಾಗುತ್ತದೆ.
ಯಾವನೇ ಒಬ್ಬ ಅಧಿಕಾರಿಯು ದಕ್ಷ ಹಾಗೂ ಖಡಕ್ ಆಗಿದ್ದರೆ ಸಮಾಜದ ಕೆಲವು ವರ್ಗದ ಜನರು, “ಅವನು ಹುಲಿ,ಹೆಬ್ಬುಲಿ…”ಇತ್ಯಾದಿಯಾಗಿ ಅಪಪ್ರಚಾರ ಮಾಡುವುದಕ್ಕಾರಂಭಿಸಿ ಅಧಿಕಾರಿಯನ್ನು ಜನರಿಂದ ದೂರಮಾಡುವುದಕ್ಕೆ ಪ್ರಯತ್ನಿಸುವುದೇ ದೊಡ್ಡ ದುರಂತ.
ಡಾ.ಅರುಣ್ ಕುಮಾರ್ ಅವರ ಸೇವೆಗೆ ಮುಖ್ಯಮಂತ್ರಿ ಪದಕ ದೊರೆತಿರುವುದರಲ್ಲಿ ಯಾವುದೇ ರಾಜಕಾರಣಿ ವ್ಯಕ್ತಿಯ /ಪ್ರಭಾವಿಗಳ ಹಸ್ತಕ್ಷೇಪವಿರುವುದಕ್ಕೆ ಸಾಧ್ಯವೇ ಇಲ್ಲ ಅನ್ನುವುದಕ್ಕೆ ಅವರ ಬಗೆಗಿನ ಸದಭಿಪ್ರಾಯ ಮತ್ತು ಖಡಕ್ಕಾದ ಕಾನೂನು ಸುವ್ಯವಸ್ಥೆಯೇ ಸಾಕ್ಷಿ.

ಅಭಿನಂದನೆಗಳು

–ವಿ. ಕೆ. ವಾಲ್ಪಾಡಿ

ಚಿತ್ರ:ಡಾ.ಅರುಣ್ ಕುಮಾರ್ ಐ. ಪಿ. ಎಸ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top