ಜಿಲ್ಲಾಧಿಕಾರಿಯಿಂದ ಶಾಸಕರ ಕಡಗಣನೆ

Picture of RB NEWS

RB NEWS

Bureau Report

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ತುಳು ಪಿಲಿಕುಳೋತ್ಸವ ಹಾಗೂ ಜಿಲ್ಲೆಯ ಅತ್ಯಂತ ಪ್ರಸಿದ್ಧಿ ಪಡೆದ ಜಾನಪದ ಕ್ರೀಡೆಯಾಗಿರುವ ಕಂಬಳ ಉತ್ಸವವನ್ನು ಜರುಗಿಸುವ ಕುರಿತು ಒಂದು ವಾರದ ಹಿಂದೆ ಪೂರ್ವಬಾವಿ ಸಭೆಯು ಜಿಲ್ಲಾಧಿಕಾರಿಯ‌ ಅಧ್ಯಕ್ಷತೆಯಲ್ಲಿಯೇ ನಡೆಸಿದೆ. ಸೆಪ್ಟೆಂಬರ್-4ರಂದು ಭೂಮಿಪೂಜೆಯ ಅಧ್ಯಕ್ಷತೆಯು‌ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಡೆಸಿದೆ. ಈ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ನಿಯಮಬಾಹಿರವಾಗಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.

ಮಂಗಳೂರು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ‌ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಂಗಳೂರು ಇಂಟರ್‌ನ್ಯಾಶನಲ್‌ ಏರ್‌ಮೋರ್ಟ್‌ ಪ್ರದೇಶವ್ಯಾಪ್ತಿಯಲ್ಲಿ ಮಳೆಯ ಅತಿವೃಷ್ಟಿಯಿಂದಾಗಿ ಸಾರ್ವಜನಿಕರಿಗೆ, ಸ್ಥಳೀಯರಿಗೆ ತೀರಾ ಅನಾಹುತದ ಸಮಸ್ಯೆಗಳುಂಟಾಯಿತು.

ನಾನು ಸ್ವತ: ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತಪರಿಹಾರ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದೇನೆ. ಜಿಲ್ಲಾಧಿಕಾರಿಯವರು ಸ್ಥಳೀಯ ಪಟ್ಟಣಪಂಚಾಯತ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳನ್ನು ಕರೆದು ಸಭೆ ಮಾಡಿ ನನ್ನನ್ನು ಆಹ್ವಾನಿಸದೇ ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಸಸಿಹಿತ್ತಲು ಸಮುದ್ರತೀರ ಪ್ರದೇಶದಲ್ಲಿ ಇಂಟ‌ರ್ ನ್ಯಾಶನಲ್ ಸರ್ಫಿಂಗ್ ಏರಿಯಾ ಅಭಿವೃದ್ಧಿ ಕುರಿತಾದ ಸಭೆ, ಸರ್ಫಿಂಗ್ ಕ್ರೀಡಾಚಟುವಟಿಕೆ ಕಾರ್ಯಕ್ರಮಗಳನ್ನು ಜರುಗಿಸಿದ್ದರೂ ತಾವೇ ಅಧ್ಯಕ್ಷತೆ ವಹಿಸಿ ಸ್ಥಳೀಯ ಶಾಸಕನಾದ ನನ್ನನ್ನು ನಿರ್ಲಕ್ಷಿದ್ದಲ್ಲದೆ ಸಮಾರಂಭದ ಕುರಿತು ಯಾವುದೇ ಮಾಹಿತಿಗಳನ್ನು ನನಗೆ ನೀಡಿರುವುದಿಲ್ಲ. ದ.ಕ. ಜಿಲ್ಲಾಧಿಕಾರಿಯವರು ಪಕ್ಷರಾಜಕಾರಣವನ್ನು ಪೋಷಿಸುವ / ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ತಾರದೆ ಕಾಂಗ್ರೆಸ್‌ ಮುಖಂಡರುಗಳನ್ನು ಮಾತ್ರ ಆಹ್ವಾನಿಸಿ ಸಭೆ ನಡೆಸಿರುತ್ತಾರೆ. ಇಂತಹ ಹಲವಾರು ಉದಾಹರಣೆಗಳು ಇದ್ದು ಸ್ಥಳೀಯ ಶಾಸಕನಾದ ನನ್ನ ಹಕ್ಕುಬಾಧ್ಯತೆಗಳನ್ನು ಜಿಲ್ಲಾಧಿಕಾರಿಯವರು ಉಲ್ಲಂಘಿಸುವ ಮೂಲಕ ಅಪಮಾನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದು
ದ.ಕ.ಜಿಲ್ಲಾ ಜಿಲ್ಲಾಧಿಕಾರಿಯವರು ಮೂಡುಬಿದರೆ/ಮೂಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕೃತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳು, ಯೋಜನಾನುಷ್ಠಾನಗಳು, ಸಾರ್ವಜನಿಕ ಸಂಪರ್ಕ ಸಭೆಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳಿಗೆ ಕ್ಷೇತ್ರದ ಶಾಸಕನಾದ ನನ್ನನ್ನು ಆಹ್ವಾನಿಸದೇ ಏಕಪಕ್ಷೀಯವಾಗಿ ತಮಗೆ ಇಷ್ಟಬಂದಂತೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ಶಾಸಕರಿಗೆ ಒದಗಿಸಿಲ್ಪಟ್ಟ ಹಕ್ಕುಬಾಧ್ಯತೆಗಳು ಮತ್ತು ಕ್ಷೇತ್ರದಲ್ಲಿನ ಯಾವುದೇ ಅಧಿಕೃತ ಸರಕಾರಿ ಸಭೆ ಮತ್ತು ಸಮಾರಂಭಗಳನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ / ಉಪಸ್ಥಿತಿಯಲ್ಲಿ ಜರುಗಿಸುವುದು ಸಂವಿಧಾನಬದ್ಧ ಅಧಿಕಾರವಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಮೂಡಬಿದರೆ – ಮೂಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಆರ್ ಪಿಎಲ್ 4ನೇ ಹಂತದ ನಿರ್ವಸಿತ ಫಲಾನುಭವಿಗಳಿಗೆ ಒದಗಿಸಿಕೊಡುವ ಪರಿಹಾರ/ಸೌಲಭ್ಯಗಳು ಮತ್ತಿತರ ಸಮಸ್ಯೆಗಳ ಕುರಿತ ಸಭೆಯನ್ನು ಏರ್ಪಡಿಸಿದ್ದು, ನನ್ನ ಗಮನಕ್ಕೂ ತಾರದೆ ಎರಡು ಸಲ ತಮ್ಮದೇ ನೇತೃತ್ವದಲ್ಲಿ ಸಭೆ ನಡೆಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ನನ್ನ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕನಾದ ನನಗೆ ಸಂವಿಧಾನಾತ್ಮಕವಾಗಿ ಒದಗಿಸಲ್ಪಟ್ಟ ಹಕ್ಕುಬಾಧ್ಯತೆಗಳನ್ನು ನೀತಿನಿಯಮಗಳನ್ನು ಉಲ್ಲಂಘಿಸಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಧಿಕೃತ ಸರಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡದೆ ಆಹ್ವಾನಿಸದೆ, ನಿರ್ಲಕ್ಷಿಸಿ, ಅವಮಾನಿಸುತ್ತಿರುವ ಪ್ರಜಾಪ್ರಭುತ್ವ ಮಾಡಿರುವ ಅಗೌರವ ಎಂದಿದ್ದಾರೆ.

ಶಾಸಕಕರಾದ ಡಾ. ಭರತ್‌ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top