
ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಹತ್ವಕಾಂಕ್ಷಿ ಯೋಜನೆ ಫೆಬ್ರವರಿ 8 : “ವಯೋವಂದನಾ ಆತಿಥ್ಯ ಗೃಹ ” ಶಂಕುಸ್ಥಾಪನೆ_ ಭೂಮಿಪೂಜೆ

ಕಾರ್ಕಳ : ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ_” ವಯೋವಂದನ ಆತಿಥ್ಯ ಗೃಹ* ” ಕಟ್ಟಡದ ಭೂಮಿ ಪೂಜೆ ಮತ್ತು ಶಿಲನ್ಯಾಸ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಕಾಶೀ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರ (ಸ್ವಾತಿ ನಕ್ಷತ್ರ)ದಂದು ಫೆಬ್ರವರಿ 8 ರಂದು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಜರುಗಲಿರುವುದು .
ಆ ದಿನ ಬೆಳಿಗ್ಗೆ 8:30 ಗಂಟೆಗೆ ಕಟ್ಟಡದ ಶಿಲಾನ್ಯಾಸದ ಶಿಲೆಗಳನ್ನು ಹತ್ತಿರದಲ್ಲಿರುವ ಶ್ರೀ ಅಮ್ಮುಂಜೆ ಶ್ರೀ ದಾಮೋದರ ದೇವಸ್ಥಾನದಿಂದ ಬೃಹತ್ ಶೋಭಾಯತ್ರೆಯ ಮೂಲಕ ಉಪ್ಪೂರಿಗೆ ತರಲಾಗುವುದು.
ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಗುರು ಗಣಪತಿ ಪೂಜನಪೂರ್ವಕ ಧಾರ್ಮಿಕ ವಿಧಿ ವಿಧಾನಗಳು ನಡೆದು, ಆ ದಿನ ಅಪರಾಹ್ನ 12:45 ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿರುವುದು .
ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅಪರಾಹ್ನ 12 :00 ಗಂಟೆಯಿಂದ
2:00 ಗಂಟೆಯ ವರೆಗೆ ಜರುಗಲಿದೆ
ಗಾಯಕ ಬೆಂಗಳೂರಿನ ಅತ್ಯಂತ ಶಂಕರ ಶಾನ್ಬೋಗ್ ಮತ್ತು ತಂಡದವರಿಂದವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿರುವುದು.
ಬೆಳಿಗ್ಗೆ ಗಂಟೆ 10:00 ರಿಂದ ಅಪರಾಹ್ನ 11:45 ಗಂಟೆಯವರೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ತಳಮಹಡಿಯ ಜೊತೆಗೆ ನೆಲ ಮತ್ತು ಮೇಲಿನ ಎರಡು ಅಂತಸ್ತುಗಳಲ್ಲಿ ತಲಾ 24 ಸರ್ವ ಸುಸಜ್ಜಿತ ಕೊಠಡಿಗಳನ್ನೊಳಗೊಂಡ ಯೋಜನೆಯ ಈ ಕಟ್ಟಡದಲ್ಲಿ
ಮಕ್ಕಳಿಲ್ಲದಿರುವ ಮತ್ತು ಆರೈಕೆ ಮಾಡಲು ಯಾರು ಇಲ್ಲದಿರುವ ಆರ್ಥಿಕವಾಗಿ ದುರ್ಬಲ ಜಿಎಸ್ಬಿ ಸಮಾಜದ ಹಿರಿಯರಿಗೆ ಪ್ರಥಮ ಆದ್ಯತೆಯಲ್ಲಿ ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ವಾಸ್ತವ್ಯ ಒದಗಿಸಲಾಗುವುದು.
ಆರ್ಥಿಕವಾಗಿ ಸದೃಢರಾಗಿದ್ದು ಮಕ್ಕಳಿಲ್ಲದ ಹಿರಿಯರಿಗೆ ಅಗತ್ಯ ಶುಲ್ಕಗಳೊಂದಿಗೆ ಪ್ರವೇಶ ಕಲ್ಪಿಸುವ ವಿವಿಧ ಆಯ್ಕೆಗಳು ಲಭ್ಯವಿದೆ .
ಮಕ್ಕಳು ವಿದೇಶ ಅಥವಾ ದೂರದ ಸ್ಥಳಗಳಿಗೆ ತೆರಳಬೇಕಾದ ಸಂದರ್ಭಗಳಲ್ಲಿ ತಂದೆ ಅಥವಾ ತಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಗದಿತ ಶುಲ್ಕದೊಂದಿಗೆ ತಾತ್ಕಾಲಿಕ ಆಶ್ರಯವನ್ನು ಒದಗಿಸುವುದು ಈ ಯೋಜನೆಯ ಸಾಮಾಜಿಕ ಬದ್ಧತೆ ಎಂದು
ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಆರ್ . ವಿವೇಕಾನಂದ ಶೆಣೈ, ಅಧ್ಯಕ್ಷ ಜಿ .ಸತೀಶ್ ಹೆಗ್ಡೆ, ಕೋಟ ಮತ್ತು ಪ್ರಧಾನ ಕಾರ್ಯದರ್ಶಿ , ಸಾಣೂರು ನರಸಿಂಹ ಕಾಮತ್ ತಿಳಿಸಿರುತ್ತಾರೆ .









































